ಯೆಸ್ ಬ್ಯಾಂಕ್ ಹಗರಣ: ಸಾಲ ಕೇಳಿದವರಿಗೆಲ್ಲಾ ಯೆಸ್ ಅಂದಿದ್ದಕ್ಕೆ ರೂ.54,000 ಕೋಟಿ ನಷ್ಟ

ಬಂಧಿತ ಯೆಸ್ ಬ್ಯಾಂಕ್ ಪ್ರವರ್ತಕ ರಾಣಾ ಕಪೂರ್ ತಮ್ಮ ಅಧಿಕಾರಾವಧಿಯಲ್ಲಿ ನಡೆಸಿದ ಅಂಧಾ ದರ್ಬಾರ್'ನ ಮತ್ತಷ್ಟು ಮಾಹಿತಿಗಳು ಇದೀಗ ಬಹಿರಂಗಗೊಳ್ಳುತ್ತಿವೆ.
ರಾಣಾ ಕಪೂರ್
ರಾಣಾ ಕಪೂರ್

ನವದೆಹಲಿ: ಬಂಧಿತ ಯೆಸ್ ಬ್ಯಾಂಕ್ ಪ್ರವರ್ತಕ ರಾಣಾ ಕಪೂರ್ ತಮ್ಮ ಅಧಿಕಾರಾವಧಿಯಲ್ಲಿ ನಡೆಸಿದ ಅಂಧಾ ದರ್ಬಾರ್'ನ ಮತ್ತಷ್ಟು ಮಾಹಿತಿಗಳು ಇದೀಗ ಬಹಿರಂಗಗೊಳ್ಳುತ್ತಿವೆ. 

ಇತರ ಬ್ಯಾಂಕ್ ಗಳಿಂದ ಸಾಲ ನಿರಾಕರಿಸಲ್ಪಟ್ಟ ಉದ್ಯಮಿಗಳಿಗೆ ಕೂಡ ಯೆಸ್ ಬ್ಯಾಂಕ್ ಮೂಲಕ ರಾಣಾ ಕಪೂರ್ ಅವರು ಸಾಲ ಕೊಡಿಸಿದ್ದರು. ಇದರಿಂದಾಗಿ ಇಂತಹವರಿಗೆ ನೀಡಿದ ಸಾಲ ವಸೂಲಿ ಆಗದೆಯೇ ಬ್ಯಾಂಕ್'ಗೆ ರೂ.54 ಸಾವಿರ ಕೋಟಿ ನಷ್ಟವಾಗಿದೆ ಎಂದು ತಿಳಿದುಬಂದಿದೆ. 

ಕಪೂರ್ ಎಂತಹ ಬ್ಯಾಂಕರ್ ಆಗಿದ್ದರು ಎಂದರೆ, ತಮ್ಮ ಬ್ಯಾಂಕ್ ಹೆಸರಿಗೆ ತಕ್ಕಂತೆ ನಡೆದುಕೊಳ್ಳುತ್ತಿದ್ದರು. ಯಾವುದಕ್ಕೂ ನೋ ಎನ್ನುತ್ತಿರಲಿಲ್ಲ. ಎಲ್ಲದಕ್ಕೂ ಯೆಸ್ ಅನ್ನುತ್ತಿದ್ದರು. ಆ ಸಾಲ ವಸೂಲಿ ಆಗದೇ ಬ್ಯಾಲೆನ್ಸ್ ಶೀಟ್ ನಲ್ಲಿ ರೂ.54 ಸಾವಿರ ಕೋಟಿ ಕೊರತ ಕಾಣಿಸಿತು. 

ಬ್ಯಾಂಕ್ ನಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಗೋಲ್ಡನ್ ಪಿನ್ ಪ್ರಶಸ್ತಿ ನೀಡಿ, ಮುಂಬೈನಲ್ಲಿ ಸಮುದ್ರಕ್ಕೆ ಮುಖ ಮಾಡಿರುವ ತಮ್ಮ ಮನೆಯಲ್ಲಿ ಐಷಾರಾಮಿ ಪಾರ್ಟಿ ಕೊಡಿಸುತ್ತಿದ್ದರು ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. 

ನಷ್ಟದಲ್ಲಿ ಸಿಲುಕಿದ್ದ ಯೆಸ್ ಬ್ಯಾಂಕನ್ನು ಖರೀದಿಸರು ಅನೇಕ ಹೂಡಿಕೆದಾರರು ರಿಸರ್ವ್ ಬ್ಯಾಂಕ್ ಮುಖ್ಯಸ್ಥರನ್ನು ಭೇಟಿ ಮಾಡುತ್ತಿದ್ದರು. ಇನ್ನೇನು ಖರೀದಿ ಪ್ರಕ್ರಿಯೆ ಮುಗಿದೇ ಹೋಯಿತು ಎನ್ನುವಷ್ಟರದಲ್ಲಿ ಹೂಡಿಕೆ ನಿರ್ಧಾರದಿಂದ ಹಿಂದೆ ಸರಿದುಬಿಡುತ್ತಿದ್ದರು. ಪದೇ ಪದೇ ಇದೇ ರೀತಿಯ ವಿದ್ಯಾಮಾನಗಲು ಮರುಕಳಿಸಿದ ಕಾರಣ, ಆರ್'ಬಿಐ ಕೂಡ ಚಿಂತೆಗೆ ಒಳಗಾಗಿತ್ತು. ಲಂಡನ್ ನಲ್ಲಿ ಇರುತ್ತಿದ್ದ ರಾಣಾ ಕಪೂರ್, ಹೂಡಿಕೆದಾರರು ಆರ್'ಬಿಐಗೆ ಹೋಗಿ ಬಂದಿದ್ದಾರೆಂಬ ವಿಚಾರ ತಿಳಿಯುತ್ತಿದ್ದಂತೆಯೇ ತಮ್ಮ ಕಡೆಯವರನ್ನು ಹೂಡಿಕೆದಾರರ ಬಳಿ ಕಳಿಸುತ್ತಿದ್ದರು. ಅದ್ಹೇಗೋ ಹೂಡಿಕೆಯಿಂದ ಹಿಂದೆ ಸರಿಯುವಂತೆ ಮನವೊಲಿಸುವಲ್ಲಿ ಯಶಸ್ವಿಯಾಗುತ್ತಿದ್ದರು. ಕೊನೆಗೆ ಹೂಡಿಕೆದಾರರು ಹಿಂದೆ ಸರಿದ ನಂತರ, ನಾನೇ ಯೆಸ್ ಬ್ಯಾಂಕ್ ಆಡಳಿತ ಮಂಡಳಿಗೆ ವಾಪಸ್ ಬರುವ ಎಂಬ ಸಂದೇಶವನ್ನು ಆರ್'ಬಿಐಗ ರವಾನಿಸುತ್ತಿದ್ದ.

ಈ ವೇಳೆ ಆರ್'ಬಿಐಗೆ ರಾಣಾ ಹೂಡಿದ್ದ ತಂತ್ರಗಳು ತಿಳಿದಿತ್ತು. ಆಯಿತು, ನೀವು ಯೆಸ್ ಬ್ಯಾಂಕ್'ಗೆ ಮರಳುವ ಬಗ್ಗೆ ಮಾತುಕತೆ ನಡೆಸೋಣ ಬನ್ನಿ ಎಂದು ರಾಣಾಗೆ ಆರ್'ಬಿಐ ಸಂದೇಶ ರವಾನಿಸಿತ್ತು. ಇದನ್ನೇ ನಂಬಿದ್ದ ರಾಣಾ ಭಾರತಕ್ಕೆ ಮರಳಿದ್ದರು. ಆಗ ಸರ್ಕಾರದ ಸೂಚನೆ ಮೇರಕೆ ತನಿಖಾ ಸಂಸ್ಥೆಗಳು, ರಾಣಾ ಮತ್ತೆ ವಿದೇಶಕ್ಕೆ ಹಾರಬಾರದು ಎಂದು ಅವರ ಚಲನವಲನದ ಮೇಲೆ ನಿಗಾ ಇರಿಸಿದ್ದವು. ಆದರೆ, ಈ ನಡುವೆ ಯೆಸ್ ಬ್ಯಾಂಕ್ ಆಡಳಿತ ಮಂಡಳಿಗೆ ತಾವು ಮರಳುವ ಬಗ್ಗೆ ರಾಣಾ ಸಂದೇಹ ಶುರುವಾಗಿತ್ತು. ಈ ಹಂತದಲ್ಲಿ ರಾಣಾ ಇರುವಿಕೆ ಸ್ಥಳದ ಬಗ್ಗೆ 1-2 ಸಲ ತಿಳಿಯದೇ ತನಿಖಾ ಸಂಸ್ಥೆ ಕೂಡ ಆತಂಕಗೊಂಡಿದ್ದವು. 

ಇನ್ನು ಮಾರ್ಚ್ 14ರಂದು ಬ್ಯಾಂಕ್'ನ ಆಡಳಿತ ಮಂಡಳಿ ಸಭೆ ನಿಗದಿಯಾಗಿದೆ. ಈ ವೇಳೆ ಬ್ಯಾಂಕ್'ನ ವಸೂಲಾಗದ ಸಾಲದ ಮೊತ್ತವಾದ ರೂ.16 ಸಾವಿರ ಕೋಟಿ ದೊಜ್ಜ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇತ್ತು. ಈ ಸಂದರ್ಭದಲ್ಲಿ ರಾಣಾರನ್ನು ಮತ್ತೆ ಆಡಳಿತ ಮಂಡಳಿಗೆ ಕರೆತರುವ ಬದಲು ಬಂಧಿಸುವುದೇ ಲೇಸೆಂದು ಭಾವಿಸಿದ ಸರ್ಕಾರ, ರಾಣಾ ಅವರನ್ನು ಬಂಧನಕ್ಕೊಳಪಡಿಸಿತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com