ಸಾಂದರ್ಭಿಕ ಚಿತ್ರ
ದೇಶ
ರಾಸಲೀಲೆ ವಿಡಿಯೋ ಸ್ನೇಹಿತರೊಂದಿಗೆ ಹಂಚಿಕೊಂಡ ಪ್ರಿಯಕರ, ನೊಂದು ನೇಣಿಗೆ ಶರಣಾದ ಬಾಲಕಿ!
ತಮ್ಮ ರಾಸಲೀಲೆ ವಿಡಿಯೋವನ್ನು ಸ್ನೇಹಿತರೊಂದಿಗೆ ಪ್ರಿಯಕರನೇ ಹಂಚಿಕೊಂಡಿದ್ದರಿಂದ ಖಿನ್ನತೆಗೊಳಗಾದ 16 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಅಹಮದಾಬಾದ್: ತಮ್ಮ ರಾಸಲೀಲೆ ವಿಡಿಯೋವನ್ನು ಸ್ನೇಹಿತರೊಂದಿಗೆ ಪ್ರಿಯಕರನೇ ಹಂಚಿಕೊಂಡಿದ್ದರಿಂದ ಖಿನ್ನತೆಗೊಳಗಾದ 16 ವರ್ಷದ ಬಾಲಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಗುಜರಾತ್ ನ ಅಹಮದಾಬಾದ್ ನ ಚಾರ್ ನಗರದಲ್ಲಿ ನಡೆದಿದೆ. 16 ವರ್ಷದ ಬಾಲಕಿ ಯುವನೋರ್ವನನ್ನು ಪ್ರೀತಿಸುತ್ತಿದ್ದಳು. ಇಬ್ಬರು ಪರಸ್ಪರ ಒಪ್ಪಿಗೆಯೊಂದಿಗೆ ತಮ್ಮ ರಾಸಲೀಲೆ ದೃಶ್ಯಗಳನ್ನು ಚಿತ್ರೀರಿಸಿಕೊಂಡಿದ್ದರು. ಕೆಲ ದಿನಗಳ ನಂತರ ಈ ವಿಡಿಯೋವನ್ನು ಪ್ರಿಯಕರ ತನ್ನ ಮೂವರು ಸ್ನೇಹಿತರೊಂದಿಗೆ ಹಂಚಿಕೊಂಡಿದ್ದ. ನಂತರ ಈ ವಿಡಿಯೋ ವೈರಲ್ ಆಗಿತ್ತು.
ಈ ಸಂಬಂಧ ಫೆಬ್ರವರಿ 29ರಂದು ಬಾಲಕಿಯ ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ಬಾಲಕಿ ಮಾತ್ರ ಖಿನ್ನತೆಗೊಳಗಾಗಿ ಸೋಮವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ