ವಿಜಯಪುರ: ಆಸ್ತಿಗಾಗಿ ತಂದೆ, ತಾಯಿ ಮತ್ತು ಅಕ್ಕನನ್ನು ಕೊಡಲಿಯಿಂದ ಕೊಚ್ಚಿ ಬರ್ಬರ ಹತ್ಯೆ

ಆಸ್ತಿಗೆ ಆಸೆ ಬಿದ್ದ ವ್ಯಕ್ತಿಯೊರ್ವ ಅಪ್ಪ, ಅಮ್ಮ ಹಾಗೂ ಅಕ್ಕನನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕರ್ನಾಟಕ-ಮಹಾರಾಷ್ಟ್ರದ ಗಡಿಭಾಕದಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ವಿಜಯಪುರ: ಆಸ್ತಿಗೆ ಆಸೆ ಬಿದ್ದ ವ್ಯಕ್ತಿಯೊರ್ವ ಅಪ್ಪ, ಅಮ್ಮ ಹಾಗೂ ಅಕ್ಕನನ್ನು ಕೊಡಲಿಯಿಂದ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಕರ್ನಾಟಕ-ಮಹಾರಾಷ್ಟ್ರದ ಗಡಿಭಾಕದಲ್ಲಿ ನಡೆದಿದೆ. 

ಮಹಾರಾಷ್ಟ್ರ ಜಿಲ್ಲೆಯ ಸಾಂಗ್ಲಿಯ ಉಮದಿ ತೋಟದ ಮನೆಯಲ್ಲಿ ಸಿದ್ದಪ್ಪ ಅರಕೇರಿ ಎಂಬಾತ ತಂದೆ 85 ವರ್ಷದ ಗುರಲಿಂಗಪ್ಪ ಅರಕೇರಿ, ತಾಯಿ 75 ವರ್ಷದ ಅರಕೇರಿ ಮತ್ತು ಸಹೋದರಿ 60 ವರ್ಷದ ಸಮುದ್ರಬಾಯಿ ಎಂಬುವರನ್ನು ಹತ್ಯೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. 

ಆಸ್ತಿ ವಿಚಾರವಾಗಿ ಕುಟುಂಬದಲ್ಲಿ ಆಗಾಗ ಜಗಳಗಳವಾಗುತ್ತಿದ್ದವು. ಇನ್ನು ಬುಧವಾರ ಜಗಳ ತಾರಕಕ್ಕೇರಿ ಸಿದ್ದಪ್ಪ ಮೂವರನ್ನು ಹತ್ಯೆ ಮಾಡಿ ಉಮದಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. 

ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com