
ದೆಹಲಿಯ ಜನಕಪುರಿಯ 69 ವರ್ಷದ ಮಹಿಳೆ ಶುಕ್ರವಾರ ಕೊರೋನಾವೈರಸ್ ನಿಂದ ಸಾವನ್ನಪ್ಪಿದ್ದ ನಂತರ ದೇಶದಲ್ಲಿ ಕೊರೋನಾವೈರಸ್ ನಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೆ ಏರಿದೆ. ದೆಹಲಿಯ ಆಸ್ಪತ್ರೆಯಲ್ಲಿ ಕೊರೋನಾವೈರಸ್ ಬಾಧಿತ ಮಹಿಳೆ ಮೃತಪಟ್ಟಿದ್ದಾರೆ. ಇದೇ ವೇಳೆ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 88 ಕ್ಕೆ ಏರಿದೆ.
ದೇಶಾದ್ಯಂತ ಹರಡುತ್ತಿರುವ ಮಾರಕ ರೋಗದ ತಡೆಗೆ ರಾಜ್ಯಗಳು ಮತ್ತು ಸುಪ್ರೀಂ ಕೋರ್ಟ್ ಸಹ ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಮಾಲ್ ಮತ್ತು ಸಿನೆಮಾ ಹಾಲ್ ಗಳನ್ನು ಮುಚ್ಚುವಂತೆ ಬಿಹಾರ ಮತ್ತು ಕರ್ನಾಟಕ ಸರ್ಕಾರಗಳು ಆದೇಶಿಸಿದೆ. ಅಲ್ಲದೆ ದೊಡ್ಡ ಸಾರ್ವಜನಿಕ ಸಭೆಗಳನ್ನು ನಿಷೇಧಿಸಿದೆ.
ಭಾರತದ ಕ್ರಿಕೆಟ್‌ನ ಸರ್ವೋಚ್ಚ ಸಂಸ್ಥೆಯಾದ ಬಿಸಿಸಿಐ ಭಾರತ - ದಕ್ಷಿಣ ಆಫ್ರಿಕಾ ಏಕದಿನ ಪಂದ್ಯಗಳನ್ನು ರದ್ದುಗೊಳಿಸಲು ನಿರ್ಧರಿಸಿತು. ಐಪಿಎಲ್ ಕೂಡ ಮುಂದೂಡಲ್ಪಟ್ಟಿತು
ಇನ್ನು ಕಳೆದ ಮೂರು ದಿನದ ಹಿಂದೆ ಮೃತಪಟ್ಟಿದ್ದ ಕಲಬುರಗಿಯ76 ವರ್ಷದ ವೃದ್ದ ಕೊರೋನಾ ಸೋಂಕಿನಿಂದಲೇ ಸಾವನ್ನಪ್ಪಿರುವುದಾಗಿ ನಿನ್ನೆ (ಗುರುವಾರ) ರಾಜ್ಯ ಆರೋಗ್ಯ ಇಲಾಖೆ ದೃಢಪಡಿಸಿತ್ತು. ಇದು ದೇಶದ ಮೊದಲ ಕೊರೋನಾವೈರಸ್ ನಿಂದ ಉಂಟಾದ ಸಾವಿನ ಪ್ರಕರಣವಾಗಿತ್ತು.
Advertisement