ಮಧ್ಯಪ್ರದೇಶ ಬಿಕ್ಕಟ್ಟು: ಆರು ಕಾಂಗ್ರೆಸ್ ಬಂಡಾಯ ಶಾಸಕರ ರಾಜೀನಾಮೆ ಸ್ವೀಕರಿಸಿದ ಸ್ಪೀಕರ್ 

ಕಾಂಗ್ರೆಸ್ ಆಡಳಿತದ ಮಧ್ಯಪ್ರದೇಶದ ತೀವ್ರ ರಾಜಕೀಯ ಬಿಕ್ಕಟ್ಟಿನ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ 22 ಕಾಂಗ್ರೆಸ್ ಬಂಡಾಯ ಶಾಸಕರ ಪೈಕಿಯಲ್ಲಿ ಆರು ಶಾಸಕರ ರಾಜೀನಾಮೆಯನ್ನು ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿ ಸ್ವೀಕರಿಸಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯ ಶಾಸಕರು
ಮಧ್ಯಪ್ರದೇಶ ಕಾಂಗ್ರೆಸ್ ಬಂಡಾಯ ಶಾಸಕರು
Updated on

ಭೋಪಾಲ್ : ಕಾಂಗ್ರೆಸ್ ಆಡಳಿತದ ಮಧ್ಯಪ್ರದೇಶದ ತೀವ್ರ ರಾಜಕೀಯ ಬಿಕ್ಕಟ್ಟಿನ ನಡುವೆ ಮಹತ್ವದ ಬೆಳವಣಿಗೆಯೊಂದರಲ್ಲಿ 22 ಕಾಂಗ್ರೆಸ್ ಬಂಡಾಯ ಶಾಸಕರ ಪೈಕಿಯಲ್ಲಿ ಆರು ಶಾಸಕರ ರಾಜೀನಾಮೆಯನ್ನು ಸ್ಪೀಕರ್ ನರ್ಮದಾ ಪ್ರಸಾದ್ ಪ್ರಜಾಪತಿ ಸ್ವೀಕರಿಸಿದ್ದಾರೆ.

ಇದರೊಂದಿಗೆ ಒಟ್ಟಾರೇ  230 ಸದಸ್ಯ ಬಲದ ವಿಧಾನಸಭೆ ಸದಸ್ಯರ ಸಂಖ್ಯೆ 222 ಆಗಿದೆ. ಕಾಂಗ್ರೆಸ್ 108 ಶಾಸಕರನ್ನು ಹೊಂದಿದ್ದು, ಮೈತ್ರಿಪಕ್ಷಗಳ ಬೆಂಬಲದೊಂದಿಗೆ 115 ಶಾಸಕರ ಬೆಂಬಲ ಪಡೆದುಕೊಂಡಿದೆ.  ಸರಳ ಬಹುಮತಕ್ಕೆ 113 ಶಾಸಕರ ಅಗತ್ಯವಿದ್ದು, ಕಾಂಗ್ರೆಸ್  2 ಶಾಸಕರನ್ನು ಹೆಚ್ಚಿಗೆ ಹೊಂದಿದೆ. ಮತ್ತೊಂದೆಡೆ ಬಿಜೆಪಿ 107 ಸದಸ್ಯರನ್ನು ಹೊಂದಿದ್ದು, ಸರಳ ಬಹುಮತಕ್ಕೆ ಆರು ಶಾಸಕರ ಕೊರತೆಯಿದೆ. 

ಮಾರ್ಚ್ 10 ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಪೈಕಿಯಲ್ಲಿ ಆರು ಶಾಸಕರನ್ನು ಸಚಿವ ಸ್ಥಾನದಿಂದ ರಾಜ್ಯಪಾಲರು ಈಗಾಗಲೇ ವಜಾಗೊಳಿಸಿದ್ದು, ತಮ್ಮ ಬಳಿ ಹಾಜರಾಗಲು ಎರಡು ಅವಕಾಶ ನೀಡಿದ್ದರೂ ಅವರು ವಿಚಾರಣೆಗೆ ಹಾಜರಾಗಲಿಲ್ಲ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅವರು ನೀಡಿರುವ ಹೇಳಿಕೆಗಳನ್ನು ಆಧರಿಸಿ ವಿಧಾನಸಭೆ ಸದಸ್ಯರಾಗಿ ಉಳಿಯಲು ಅವರು ಸಮರ್ಥವಾಗಿಲ್ಲ ತೀರ್ಮಾನಿಸಿರುವುದಾಗಿ  ಸ್ಪೀಕರ್ ಆದೇಶದಲ್ಲಿ ತಿಳಿಸಿದ್ದಾರೆ. 

ಕೊರೋನಾ ವೈರಸ್ ಭೀತಿಯಿಂದಾಗಿ ಸೋಮವಾರದಿಂದ ಆರಂಭವಾಗಲಿರುವ ರಾಜ್ಯ ಬಜೆಟ್ ಅಧಿವೇಶವನ್ನು ಮುಂದೂಡಲು ಸಾಧ್ಯವಿಲ್ಲ. ಬಜೆಟ್ ಅಧಿವೇಶನಕ್ಕೆ ಪ್ರತಿಯೊಬ್ಬ ಶಾಸಕರು ಬರಬೇಕು, ಸದನಕ್ಕೆ ಬರುವ ಮುನ್ನ ಮಾಸ್ಕ್ ಹಾಗೂ ಕೈಗಳನ್ನು ಶುಚಿಗೊಳಿಸಿ ಬರಬೇಕು ಎಂದು ಅವರು ಹೇಳಿದ್ದಾರೆ. 

ಬಜೆಟ್ ಅಧಿವೇಶನದಲ್ಲಿ ಪ್ರತಿಯೊಬ್ಬರು ಹಾಜರಿದ್ದು, ಸರ್ಕಾರದ ಪರ ಮತ ಹಾಕುವಂತೆ ಆಡಳಿತ ಕಾಂಗ್ರೆಸ್, ಶಾಸಕರಿಗೆ ವಿಪ್ ಹೊರಡಿಸಿದೆ. ಸ್ಪೀಕರ್ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಗೋಪಾಲ್ ಭಾರ್ಗವ ಆರೋಪಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com