ಕರ್ತಾರ್ಪುರ್ ಯಾತ್ರೆಗೂ ತಟ್ಟಿದ ಕೊರೋನಾ ಬಿಸಿ, ಸೋಮವಾರದಿಂದ ಗುರುದ್ವಾರ ಪ್ರವಾಸ ಬಂದ್ ಮಾಡಿ ಕೇಂದ್ರ ಆದೇಶ

ಕೊರೋನಾವೈರಸ್ ಕಾರಣದಿಂದಾಗಿ ಪಾಕಿಸ್ತಾನದ ಗುರುದ್ವಾರ ಕರ್ತಾರ್ಪುರ್ ಸಾಹಿಬ್ ಅವರ ಪ್ರಯಾಣ ಮತ್ತು ನೋಂದಣಿಯನ್ನು ಕೇಂದ್ರ , ಗೃಹ ವ್ಯವಹಾರಗಳ ಸಚಿವಾಲಯ ಸೋಮವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಕರ್ತಾರ್ಪುರ್
ಕರ್ತಾರ್ಪುರ್

ನವದೆಹಲಿ: ಕೊರೋನಾವೈರಸ್ ಕಾರಣದಿಂದಾಗಿ ಪಾಕಿಸ್ತಾನದ ಗುರುದ್ವಾರ ಕರ್ತಾರ್ಪುರ್ ಸಾಹಿಬ್ ಅವರ ಪ್ರಯಾಣ ಮತ್ತು ನೋಂದಣಿಯನ್ನು ಕೇಂದ್ರ , ಗೃಹ ವ್ಯವಹಾರಗಳ ಸಚಿವಾಲಯ ಸೋಮವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

"ಕೋವಿಡ್-19 ಹಿನ್ನೆಲೆಯಲ್ಲಿ  ರೋಗದ ಹರಡುವಿಕೆಯನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿ ಕರ್ತಾರ್ಪುರ್ ಸಾಹಿಬ್ ಪ್ರಯಾಣ ಮತ್ತು ನೋಂದಣಿಯನ್ನು ತಾತ್ಕಾಲಿಕವಾಗಿ 2020 ರ ಮಾರ್ಚ್ 16 ಮುಂಜಾನೆ 12 ರಿಂದ ಅಮಾನತುಗೊಳಿಸಲಾಗಿದೆ" ಗೃಹ ವ್ಯವಹಾರಗಳ ಸಚಿವಾಲಯದ ವಕ್ತಾರರು ಟ್ವೀಟ್ ಮೂಲಕ ಹೇಳಿದ್ದಾರೆ.

ಕೋವಿಡ್=19 ಹರಡುವುದನ್ನು ನಿಯಂತ್ರಿಸಲು ಸರ್ಕಾರವು ಗಡಿಯಲ್ಲಿ  ಚೆಕ್‌ಪೋಸ್ಟ್‌ಗಳ ಮೂಲಕ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಚಾರವನ್ನು ನಿರ್ಬಂಧಿಸಿದೆ.

ಬಾಂಗ್ಲಾದೇಶ, ನೇಪಾಳ, ಭೂತಾನ್, ಮ್ಯಾನ್ಮಾರ್‌ನ ಗಡಿಯಲ್ಲಿರುವ  ಚೆಕ್ ಪೋಸ್ಟ್‌ಗಳ ಮೂಲಕ ಎಲ್ಲಾ ಪ್ರಯಾಣಿಕರ ಸಂಚಾರವನ್ನು ಮಾರ್ಚ್ 15 ರಿಂದ ಮುಂದಿನ ಆದೇಶದವರೆಗೆ ಅಮಾನತುಗೊಳಿಸಲಾಗುವುದು ಎಂದು ಸಚಿವಾಲಯ ಕಳೆದ ವಾರ ತಿಳಿಸಿತ್ತು. ಈ ಅಧಿಸೂಚನೆಯಿಂದ ವಿನಾಯಿತಿ ಪಡೆದ ಚೆಕ್ ಪೋಸ್ಟ್‌ಗಳ ಪಟ್ಟಿಯನ್ನು ಸಚಿವಾಲಯ ಬಿಡುಗಡೆ ಮಾಡಿದೆ.

ವಿಶ್ವ ಆರೋಗ್ಯ ಸಂಸ್ಥೆ ಕೊರೋನಾವೈರಸ್ ಒಂದು ಜಾಗತಿಕ ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com