ಮಥುರಾದಲ್ಲಿ ಪೊಲೀಸ್ ಎನ್‌ಕೌಂಟರ್‌ ನಲ್ಲಿ ದನ ಕಳ್ಳಸಾಗಣೆದಾರ ಸಾವು, ಇಬ್ಬರಿಗೆ ಗಾಯ

ಇಲ್ಲಿನ ಚಾಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ದನ ಕಳ್ಳಸಾಗಾಣಿಕೆದಾರ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎನ್ ಕೌಂಟರ್ ನಡೆದ ಸ್ಥಳ
ಎನ್ ಕೌಂಟರ್ ನಡೆದ ಸ್ಥಳ
Updated on

ಮಥುರಾ: ಇಲ್ಲಿನ ಚಾಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ದನ ಕಳ್ಳಸಾಗಾಣಿಕೆದಾರ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎನ್‌ಕೌಂಟರ್ ನಂತರ ಇತರ ಇಬ್ಬರು ಕಳ್ಳಸಾಗಾಣಿಕೆದಾರರನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ. ಅಪರಾಧಿಗಳ ವಶದಿಂದ ಎರಡು ಬಂದೂಕು, ಪಿಕಪ್ ವ್ಯಾನ್ ಮತ್ತು ಆರು ದನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇನ್ನು ಮೃತಪಟ್ಟ ದನ ಕಳ್ಳಸಾಗಣೆದಾರರನ್ನು ಹರ್ಯಾಣದ ಮೇವತ್ ನ ಅಸ್ಫರ್ ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಕಲ್ಲು ಮತ್ತು ಯೂನುಸ್ ಎಂದು ಗುರುತಿಸಿದ್ದಾರೆ. ಅಂತೆಯೇ ಇರ್ಫಾನ್ ಮತ್ತು ಸಾದಿಕ್ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com