ನವದೆಹಲಿ: ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಆನಂದ್ ತೆಲ್ತುಂಬ್ಡೆ ಮತ್ತು ಗೌತಮ್ ನವ್‍ಲಖಾ ಅವರಿಗೆ ಶರಣಾಗಲು ಸುಪ್ರೀಂ ಕೋರ್ಟ್ 3 ವಾರಗಳ ಗಡುವು ನೀಡಿದೆ.
ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದ್ ತೆಲ್ತುಂಬ್ಡೆ ಮತ್ತು ಗೌತಮ್ ನವ್‍ಲಖಾಗೆ ಸುಪ್ರೀಂ ಕೋರ್ಟ್ ಮೂರು ವಾರಗಳ ಕಾಲಾವಕಾಶ ನೀಡಿದೆ. ಈ ಇಬ್ಬರೂ, 2018ರ ಜ 21ರಿಂದ ಬಂಧನದಿಂದ ಪಾರಾಗಿದ್ದರು. ಕಾನೂನುಬಾಹಿರ ಚುಟುವಟಿಕೆ ಕಾಯ್ದೆಯಡಿ(ಯುಎಪಿಎ) ಯಾರೇ ಅಪರಾಧವೆಸಗಿದರೂ ತಪ್ಪಿತಸ್ಥರಾಗಿರುತ್ತಾರೆ ಎಂದು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಪೀಠ ಹೇಳಿದೆ.
ಈ ಪ್ರಕರಣದಲ್ಲಿ ತಮಗೆ ಬಂಧನಪೂರ್ವ ಜಾಮೀನು ನೀಡಬೇಕೆಂದು ಕೋರಿ ನವ್ಲಾಖಾ ಹಾಗೂ ತೇಲ್ತುಂಬ್ಡೆ ಅವರು ಸಲ್ಲಿಸಿದ ಬಂಧನ ಪೂರ್ವ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಫೆಬ್ರವರಿ 15ರಂದು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಇವರಿಬ್ಬರು ಸುಪ್ರೀಂಕೋರ್ಟ್‌ನಲ್ಲಿ ವಿಶೇಷ ರಜಾ ಕಾಲದ ಅರ್ಜಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅರುಣ್‌ಮಿಶ್ರಾ ಹಾಗೂ ಎಂ.ಆರ್.ಶಾ ನೇತೃತ್ವದ ನ್ಯಾಯಪೀಠವು, ಸೂಕ್ತ ಪುರಾವೆ ಗಳನ್ನು ಆಧರಿಸಿ ನವ್ಲಾಖಾ ಹಾಗೂ ತೇಲ್ತುಂಬ್ಡೆ ವಿರುದ್ಧ ಹೊರಿಸಲಾಗಿರುವ ಆರೋಪಗಳು ಮೇಲ್ನೋಟಕ್ಕೆ ದೃಢಪಟ್ಟಿರುವುದರಿಂದ ಅವರಿಗೆ ಜಾಮೀನು ನೀಡಲು ನಿರಾಕರಿಸಿತು. ಆದಾಗ್ಯೂ ಆರೋಪಿಗಳು ಸಲ್ಲಿಸಿದ್ದ ಬಂಧನಪೂರ್ವ ಜಾಮೀನು ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ಅವರ ಮಧ್ಯಂತರ ಜಾಮೀನನ್ನು ಮಾರ್ಚ್ 16ರವರೆ ವಿಸ್ತರಿಸಿತು.
2018ರ ಜನವರಿ 1ರಂದು ಮಹಾರಾಷ್ಟ್ರದ ಭೀಮಾಕೋರೆಗಾಂವ್‌ನಲ್ಲಿ ನಡೆದ ದಲಿತ ಸಂಘಟನೆಗಳು ಆಯೋಜಿಸಿದ ಕೋರೆಗಾಂವ್ ಯುದ್ಧದ 200ನೇ ವರ್ಷಾ ಚರಣೆ ಸಂದರ್ಭದಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಇದರ ಹಿಂದಿನ ದಿನ ಎಲ್ಲಾರ್ ಪರಿಷತ್ ಪುಣೆಯಲ್ಲಿ ಆಯೋಜಿಸಿದ ಸಭೆಯು ಕೋರೆಗಾಂವ್ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿತ್ತು ಎಂದು ಪೊಲೀಸರು ಆರೋಪಿಸಿದ್ದರು ಗೌತಮ್ ನವ್ಲಾಖಾ ಹಾಗೂ ಆನಂದ ತೇಲ್ತುಂಬ್ಡೆ ಸೇಹಿದಂತೆ ಈ ಸಭೆಯನ್ನು ಆಯೋಜಿಸಿದ್ದ ವ್ಯಕ್ತಿಗಳುೆ ನಿಷೇಧಿತ ಮಾವೊವಾದಿ ಸಂಘಟನೆಗಳ ಜೊತೆ ನಂಟು ಹೊಂದಿದ್ದರು ಎಂದು ಎನ್‌ಐಎ ಆಪಾದಿಸಿತ್ತು.
Advertisement