ಲುಧಿಯಾನದಲ್ಲಿ 167 ಕೊರೋನಾ ವೈರಸ್ ಶಂಕಿತರು ಪರಾರಿ: ಹೆಚ್ಚಿದ ಆತಂಕ
ಲುಧಿಯಾನ: ಪಂಜಾಬ್ ರಾಜ್ಯದ ಲುಧಿಯಾದನಲ್ಲಿ 167 ಮಂದಿ ಕೊರೋನಾ ವೈರಸ್ ಶಂಕಿತರು ಪರಾರಿಯಾಗಿರುವ ಘಟನೆ ನಡೆದಿದ್ದು, ಎಲ್ಲೆಡೆ ತೀವ್ರ ಆತಂಕ ಶುರುವಾಗಿದೆ.
167 ಮಂದಿಯಲ್ಲಿ ಈಗಾಗಲೇ 29 ಮಂದಿಯ ಗುರುತು ಪತ್ತೆಯಾಗಿದ್ದು, ಉಳಿದವರಿಗಾಗಿ ತೀವ್ರ ಹುಡುಕಾಟ ಶುರುವಾಗಿದೆ ಎಂದು ಡಾ.ರಾಜೇಶ್ ಬಗ್ಗಾ ಅವರು ಹೇಳಿದ್ದಾರೆ.
ವಿದೇಶದಿಂದ ಭಾರತಕ್ಕೆ ಬಂದ ಜನರ ಬಗ್ಗೆ ಇತ್ತೀಚೆಗಷ್ಟೇ ಪಂಜಾಬ್ ವೈದ್ಯಕೀಯ ಅಧಿಕಾರಿಗಳು ಮಾಹಿತಿ ಪಡೆದುಕೊಡಿದ್ದಾರೆ. ಇದೀಗ ಎಲ್ಲರಿಗಾಗಿ ಹುಡುಕಾಟ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ವಿದೇಶಗಳಿಂದ ಬಂದ ಜನರ ಹುಡುಕಾಟಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ. ಒಂದು ಪೊಲೀಸ್ ತಂಡವಾಗಿದ್ದರೆ, ಮತ್ತೊಂದು ಆರೋಗ್ಯ ಇಲಾಖೆಯಾಗಿದೆ. ಇದರಲ್ಲಿ 119 ಜನರ ಹುಡುಕಾಟದ ಜವಾಬ್ದಾರಿಯನ್ನು ಪೊಲೀಸರು ತೆಗೆದುಕೊಂಡಿದ್ದಾರೆ. ಈಗಾಗಲೇ ಅವರಲ್ಲಿ 12 ಮಂದಿಯನ್ನು ಗುರುತು ಹಿಡಿದ್ದಾರೆ.
ಇನ್ನು ಆರೋಗ್ಯ ಇಲಾಖೆ 77 ಮಂದಿಯ ಜವಾಬ್ದಾರಿ ತೆಗೆದುಕೊಂಡಿದ್ದು 17 ಮಂದಿಯನ್ನು ಗುರುತು ಹಿಡಿದ್ದಾರೆ. ಉಳಿದವರಿಗಾಗಿ ಹುಡುಕಾಟ ಮುಂದುವರೆದಿದೆ ಎಂದಿದ್ದಾರೆ.
ಪಾಸ್ ಪೋರ್ಟ್ ಗಳಲ್ಲಿ ಹಾಗೂ ಫೋನ್ ನಂಬರ್ ಗಳನ್ನು ತಪ್ಪಾಗಿ ನೀಡಿದ ಕಾರಣ ಜನರನ್ನು ಹುಡುಕುವಲ್ಲಿ ತಡವಾಗುತ್ತಿದೆ. ಸಾಕಷ್ಟು ಮಂದಿಯ ವಿಳಾಸ ಹಾಗೂ ಫೋನ್ ನಂಬರ್ ಬದಲಾದಂತಿದೆ. ನಮ್ಮ ತಂಡ ಇದೀಗ ಎಲ್ಲರಿಗಾಗಿ ಹುಡುಕಾಟ ತೀವ್ರವಾಗಿ ನಡೆಸುತ್ತಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ