ಪಕ್ಷ ಸೇರಿದ 22 ಶಾಸಕರಿಗೂ ಬಿಜೆಪಿ ಟಿಕೆಟ್: ಜ್ಯೋತಿರಾದಿತ್ಯ ಸಿಂಧಿಯಾ 

ಮುಖ್ಯಮಂತ್ರಿ ಕಮಲ್​​ನಾಥ್​​​ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಪತನಗೊಳ್ಳಲು ಕಾರಣರಾದ 22 ಮಂದಿ ಕಾಂಗ್ರೆಸ್​​ನ ರೆಬೆಲ್​​ ಶಾಸಕರು ಬಿಜೆಪಿ ಸೇರಿದ್ದಾರೆ. ಈ 22 ಶಾಸಕರಿಗೂ  ಬಿಜೆಪಿ ಟಿಕೆಟ್ ನೀಡಲಿದೆ ಎಂದು ಜ್ಯೋತರಾಧಿತ್ಯ ಸಿಂಧಿಯಾ ಹೇಳಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ
ಜ್ಯೋತಿರಾದಿತ್ಯ ಸಿಂಧಿಯಾ
Updated on

ನವದೆಹಲಿ:  ಮುಖ್ಯಮಂತ್ರಿ ಕಮಲ್​​ನಾಥ್​​​ ನೇತೃತ್ವದ ಮಧ್ಯಪ್ರದೇಶ ಸರ್ಕಾರ ಪತನಗೊಳ್ಳಲು ಕಾರಣರಾದ 22 ಮಂದಿ ಕಾಂಗ್ರೆಸ್​​ನ ರೆಬೆಲ್​​ ಶಾಸಕರು ಬಿಜೆಪಿ ಸೇರಿದ್ದಾರೆ. ಈ 22 ಶಾಸಕರಿಗೂ  ಬಿಜೆಪಿ ಟಿಕೆಟ್ ನೀಡಲಿದೆ ಎಂದು ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ 22 ಮಂದಿ ಶಾಸಕರು  ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅವರೆಲ್ಲರಿಗೂ ಪಕ್ಷದಿಂ ಮುಂಬರುವ ವಿಧಾನಸಭೆ ಚುನಾವಣೆಗೆ ಅವರಿಗೆಲ್ಲಾ ಬಿಜೆಪಿಯಿಂದಲೇ ಟಿಕೆಟ್ ಸಿಗಲಿದೆ ಎೆಬ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಮಾರ್ಚ್ 10ನೇ ತಾರೀಕಿನಂದು ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದಿದ್ದರು. ಬಳಿಕ ಇವರು ಬಿಜೆಪಿ ಸೇರಿದ ನಂತರ ಸಿಂಧಿಯಾರನ್ನು ಬೆಂಬಲಿಸಿ 22 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದರು. 

ಇವರ ರಾಜೀನಾಮೆಯಿಂದ 15 ತಿಂಗಳ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರ ಪತನಗೊಂಡಿತ್ತು. ಈ ಮೂಲಕ ಮಧ್ಯಪ್ರದೇಶ ರಾಜಕೀಯ ಕಳೆದ ಕೆಲ ದಿನಗಳಿಂದ ಹಲವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com