ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ ಪಿಆರ್) ಪರಿಷ್ಕರಣೆ ಪ್ರಕ್ರಿಯೆ ಮೇಲೆಯೂ ಕೊರೋನಾ ಕರಿನೆರಳು ಆವರಿಸಿದ್ದು, 2021 ರಲ್ಲಿ ನಡೆಯಬೇಕಿದ್ದ ಮೊದಲ ಹಂತದ ಜನಗಣತಿ ವಿಳಂಬವಾಗಲಿದೆ.
ಏ.1 ರಿಂದ ಪ್ರಾರಂಭವಾಗಬೇಕಿದ್ದ ಜನಗಣತಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೊರೋನಾ ವೈರಸ್ ನಿಂದ ಉಂಟಾಗಿರುವ ಆತಂಕಕಾರಿ ಪರಿಸ್ಥಿತಿ ಮುಕ್ತಾಯಗೊಳ್ಳುವವರೆಗೂ ಎನ್ ಪಿಆರ್ ನ ಭಾಗವಾಗಿರುವ ಮನೆ ಮನೆಗೆ ತೆರಳಿ ಜನಗಣತಿ ಮಾಡುವ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಅಧಿಕೃತ ಆದೇಶವೊಂದೇ ಬಾಕಿ ಇದೆ. ಎನ್ ಪಿಆರ್ ನ ಮೊದಲ ಹಂತದ ಜನಗಣತಿ ಪ್ರಕ್ರಿಯೆ ಏ.1 ರಿಂದ ಸೆ.30 ವರೆಗೆ ನಡೆಸಲು ಉದ್ದೇಶಿಸಲಾಗಿತ್ತು.
Advertisement