ಚೀನಾದ ಹೊಸ 'ಹಂಟಾ ವೈರಸ್' ಭಾರತಕ್ಕೇನು ಹೊಸದಲ್ಲ, 2011ರಲ್ಲಿ ಆಂಧ್ರ, ಕರ್ನಾಟಕದಲ್ಲಿ ಆಗಿದ್ದೇನು?

ಚೀನಾದಲ್ಲಿ ಸೃಷ್ಠಿಯಾಗಿ ಇದೀಗ ಜಗತ್ತನ್ನೇ ಲಾಕ್ ಡೌನ್ ಮಾಡುವಂತೆ ಮಾಡಿರುವ ಕೊರೋನಾ ವೈರಸ್ ಭೀತಿ ಬೆನ್ನಲ್ಲೇ ಇದೀಗ ಕಮ್ಯೂನಿಷ್ಟ್ ರಾಷ್ಟ್ರದಲ್ಲಿ ಮತ್ತೊಂದು ಹಂಟಾ ವೈರಸ್ ನಿಂದ ವ್ಯಕ್ತಿಯೋರ್ವ ಮೃತಪಟ್ಟಿರುವುದು ಆತಂಕ ಸೃಷ್ಠಿಸಿದೆ. 
ಹಂಟಾ ವೈರಸ್
ಹಂಟಾ ವೈರಸ್
Updated on

ನವದೆಹಲಿ: ಚೀನಾದಲ್ಲಿ ಸೃಷ್ಠಿಯಾಗಿ ಇದೀಗ ಜಗತ್ತನ್ನೇ ಲಾಕ್ ಡೌನ್ ಮಾಡುವಂತೆ ಮಾಡಿರುವ ಕೊರೋನಾ ವೈರಸ್ ಭೀತಿ ಬೆನ್ನಲ್ಲೇ ಇದೀಗ ಕಮ್ಯೂನಿಷ್ಟ್ ರಾಷ್ಟ್ರದಲ್ಲಿ ಮತ್ತೊಂದು ಹಂಟಾ ವೈರಸ್ ನಿಂದ ವ್ಯಕ್ತಿಯೋರ್ವ ಮೃತಪಟ್ಟಿರುವುದು ಆತಂಕ ಸೃಷ್ಠಿಸಿದೆ. 

ಆದರೆ ಈ ಹಂಟಾ ವೈರಸ್ ಭಾರತಕ್ಕೇನು ಹೊಸದಲ್ಲ. 2011ರಲ್ಲೇ ಹಂಟಾ ವೈರಸ್ ಆಂಧ್ರದಲ್ಲಿ ಮರಣ ಮೃದಂಗ ಸೃಷ್ಟಿಸಿತ್ತು. ಅಂದು ಕರ್ನಾಟಕದಲ್ಲೂ ಹಂಟಾ ವೈರಸ್ ಭೀತಿ ಹುಟ್ಟಿಸಿತ್ತು ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು. 

2011ರಲ್ಲಿ ಆಂಧ್ರದಲ್ಲಿ ಹಂಟಾ ವೈರಸ್ ಭೀತಿಯನ್ನು ಹೆಚ್ಚಿಸಿತ್ತು. ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಮತ್ತೊಬ್ಬರು ಸಾವನ್ನಪ್ಪಿದ್ದರು. ಒಟ್ಟು ಇಬ್ಬರು ಈ ವೈರಸ್ ಗೆ ಬಲಿಯಾಗಿದ್ದರು. ಇದಲ್ಲದೆ, ಹಂಟಾ ವೈರಸ್ ಸೋಂಕಿನ ಇನ್ನೂ ಎರಡು ಶಂಕಿತ ಪ್ರಕರಣಗಳು ಕರೀಂನಗರ ಮತ್ತು ನೆಲ್ಲೂರು ಜಿಲ್ಲೆಗಳಿಂದ ವರದಿಯಾಗಿತ್ತು.

ಕರೀಂನಗರ ಜಿಲ್ಲೆಯ ಚೊಪ್ಪದಂಡಿಯ 55 ವರ್ಷದ ಅಂಚೆ ವಿಭಾಗದ ಉದ್ಯೋಗಿ ಬಿ.ಭಗವಾನ್ ರಾವ್ ಅವರನ್ನು ತೀವ್ರ ಜ್ವರದಿಂದ ಅಕ್ಟೋಬರ್ 15 ರಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ಅವರನ್ನು ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಮತ್ತು ಇತರ ಸ್ಥಿತಿಗೆ ಪರೀಕ್ಷಿಸಿತು, ಆದರೆ ಎಲ್ಲಾ ಫಲಿತಾಂಶಗಳು ನಕಾರಾತ್ಮಕವಾಗಿತ್ತು. ಅವರ ಸ್ಥಿತಿ ಹದಗೆಟ್ಟಿದ್ದರಿಂದ ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು. ನಂತರ ನಡೆಸಿದ ಪರೀಕ್ಷೆಯಲ್ಲಿ ಇದು ಹಂಟಾ ವೈರಸ್ ಸೋಂಕು ಎಂದು ದೃಢಪಡಿಸಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಮತ್ತೊಬ್ಬ ರೋಗಿ, ಕರೀಂನಗರ ಜಿಲ್ಲೆಯ ಇಲಂತಕುಂಟ ಮಂಡಲದ ಪೊಶೆಟ್ಟಿ ನರಸವ ಕೂಡ ಇದೇ ರೀತಿಯ ಲಕ್ಷಣಗಳನ್ನು ಕಾಣಿಸಿಕೊಂಡು ಹೈದರಾಬಾದ್‌ನ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.

ಹಂಟಾ ವೈರಸ್ ಸೋಂಕಿನ ಮತ್ತೊಂದು ಶಂಕಿತ ಪ್ರಕರಣವು ನೆಲ್ಲೂರಿನಿಂದ ವರದಿಯಾಗಿತ್ತು. ಪೋದಲಕೂರು ಮಂಡಲದ ಬ್ರಹ್ಮನಪಳ್ಳಿ ಗ್ರಾಮದ ಆರ್ ಅವಿನಾಶ್ ಎಂಬ ಒಂಬತ್ತು ವರ್ಷದ ಬಾಲಕ ಒಂದು ವಾರದಿಂದ ತೀವ್ರ ಜ್ವರ ಮತ್ತು ದೇಹದ ನೋವಿನಿಂದ ಬಳಲುತ್ತಿದ್ದ. ಸ್ಥಳೀಯ ವೈದ್ಯರು ಬಾಲಕನನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಿದ ನಂತರ, ಬಾಲಕನನ್ನು ಹಂಟಾ ವೈರಸ್ ಪ್ರಕರಣ ಎಂದು ದೃಢಪಡಿಸಲಾಗಿತ್ತು. 

ಹಂಟಾ ವೈರಸ್ ರೋಗ ಲಕ್ಷಣ
ಹಂಟಾ ವೈರಸ್ ಇಲಿಗಳಿಂದ ಹರಡುವ ವೈರಾಣುಗಳ ಸಮೂಹವಾಗಿದೆ. ಹಂಟಾ ವೈರಸ್ ಕುರಿತು ಒಂದು ಸಮಾಧಾನಕರ ಸಂಗತಿಯೇನೆಂದರೆ ಅದು ಮನುಷ್ಯನಿಂದ ಮನುಷ್ಯನಿಗೆ ವೈರಾಣು ಹರಡುವ ಸಾಧ್ಯತೆ ಅತ್ಯಂತ ಕಡಿಮೆ ಎನ್ನಲಾಗುತ್ತಿದೆ. ಇಲಿಗಳ ಮಲಮೂತ್ರಗಳಿಂದ ಇದು ಹರಡುವ ಸಾಧ್ಯತೆ ಇರುವ ಹಂಟಾ ವೈರಸ್ ಸೋಂಕಿತರಿಗೆ ವಿವಿಧ ರೋಗ ಲಕ್ಷಣಗಳು ಕಾಣಿಸಿಕೊಳ್ಳಲಿದ್ದು, ಈ ಬಗ್ಗೆ ಸ್ಪಷ್ಟತೆ ಇನ್ನಷ್ಟೇ ಸಿಗಬೇಕಿದೆ. ಈ ವರೆಗೂ ಚೀನಾ ಹಾಗೂ ಅರ್ಜೆಂಟೀನಾದಲ್ಲಿ ಮಾತ್ರ ಈ ರೋಗ ಕಾಣಿಸಿಕೊಂಡಿದೆ. 

ಚೀನಾದ ಶಾಂಡೊಂಗ್ ಪ್ರಾಂತ್ಯದ ಯುನ್ನಾನ್ ಪ್ರದೇಶದಲ್ಲಿ ಕೆಲಸಕ್ಕೆ ಬರುತ್ತಿದ್ದ ಓರ್ವ ವ್ಯಕ್ತಿ, ಹಂಟಾ ವೈರಸ್ ಗೆ ತುತ್ತಾಗಿ ಬಸ್ ನಲ್ಲೇ ಸಾವನ್ನಪ್ಪಿದ್ದಾನೆ. ಬಸ್ ನಲ್ಲೇ ಇದ್ದ 32 ಜನರನ್ನೂ ಸಹ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಇವರ ಲ್ಯಾಬ್ ರಿಪೋರ್ಟ್ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com