ಪೌರತ್ವ ಕಾಯ್ದೆ ಬೆಂಬಲಿಸಿದ್ದ ಮುಸ್ಲಿಂಯೇತರ ವಿದ್ಯಾರ್ಥಿಗಳು ಫೇಲ್, ಜಾಮಿಯಾ ವಿವಿಯ ಪ್ರೊಫೆಸರ್ ಅಮಾನತು!

ಪೌರತ್ವ ಕಾಯ್ದೆ(ಸಿಎಎ) ಬೆಂಬಲಿಸಿದ್ದ ಹದಿನೈದು ಮುಸ್ಲಿಂಯೇತರ ವಿದ್ಯಾರ್ಥಿಗಳನ್ನು ಫೇಲ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಪ್ರೊಪೆಸರ್ ಅಬ್ರಾರ್ ಅಹ್ಮದ್ ನನ್ನು ವಿಶ್ವವಿದ್ಯಾಲಯ ಅಮಾನತು ಮಾಡಿದೆ. 
ಅಬ್ರಾರ್ ಅಹ್ಮದ್
ಅಬ್ರಾರ್ ಅಹ್ಮದ್

ನವದೆಹಲಿ: ಪೌರತ್ವ ಕಾಯ್ದೆ(ಸಿಎಎ) ಬೆಂಬಲಿಸಿದ್ದ ಹದಿನೈದು ಮುಸ್ಲಿಂಯೇತರ ವಿದ್ಯಾರ್ಥಿಗಳನ್ನು ಫೇಲ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಪ್ರೊಪೆಸರ್ ಅಬ್ರಾರ್ ಅಹ್ಮದ್ ನನ್ನು ವಿಶ್ವವಿದ್ಯಾಲಯ ಅಮಾನತು ಮಾಡಿದೆ. 

ಅಬ್ರಾರ್ ಅಹ್ಮದ್ ಮಾಡಿದ್ದ ಟ್ವೀಟ್ ವಿವಾದಕ್ಕೆ ಕಾರಣವಾಗಿತ್ತು ಈ ಹಿನ್ನೆಲೆಯಲ್ಲಿ ಅಬ್ರಾರ್ ನನ್ನು ಅಮಾನತು ಮಾಡಲಾಗಿದೆ. ಸಿಎಎ ವಿರೋಧಿ ಪ್ರತಿಭಟನೆ ಬೆಂಬಲಿಸಿದ 55 ವಿದ್ಯಾರ್ಥಿಗಳನ್ನು ನಾನು ಪರೀಕ್ಷೆಯಲ್ಲಿ ಪಾಸ್ ಮಾಡಿದ್ದೇನೆ. 15 ಮುಸ್ಲಿಂಯೇತರ ವಿದ್ಯಾರ್ಥಿಗಳನ್ನು ಫೇಲ್ ಮಾಡಿದ್ದೇನೆ ಎಂದು ಟ್ವೀಟ್ ಮಾಡಿದ್ದರು. 

ಈ ಟ್ವೀಟ್ ಗೆ ಭಾರೀ ವಿರೋಧ ವ್ಯಕ್ತವಾದ ಬಳಿಕ ಟ್ವೀಟ್ ಅನ್ನು ಡಿಲೀಟ್ ಮಾಡಲಾಗಿದೆ. ಇದೇ ವೇಳೆ ಜಾಮಿಯಾ ಮಿಲಿಯಾ ವಿವಿ ಆಡಳಿತ ಮಂಡಳಿ, ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಡುವಂತಹ ಇತಂಹ ನಡೆಯನ್ನು ಸಹಿಸುವುದಿಲ್ಲ. ಈ ಸಂಬಂಧ ಆಂತರಿಕ ತನಿಖೆಗೆ ಆದೇಶಿಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com