ಕೊರೋನಾಗೆ ಸೆಡ್ಡು ಹೊಡೆದ ಪ್ರೀತಿ: ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ದುಬೈನಿಂದ ಬಂದು ಗರ್ಲ್ ಫ್ರೆಂಡ್ ಭೇಟಿ ಮಾಡಿದ ಯುವಕ! 

ತಾನು ಪ್ರೇಮಿಸಿದ ಯುವತಿ ಭೇಟಿ ಮಾಡಲು ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಆಕೆಯನ್ನು ಭೇಟಿ ಮಾಡಿರುವ ಘಟನೆ ಮಧುರೈ ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಧುರೈ:ತಾನು ಪ್ರೇಮಿಸಿದ ಯುವತಿ ಭೇಟಿ ಮಾಡಲು ಹೋಮ್ ಕ್ವಾರಂಟೈನ್ ಉಲ್ಲಂಘಿಸಿ ಆಕೆಯನ್ನು ಭೇಟಿ ಮಾಡಿರುವ ಘಟನೆ ಮಧುರೈ ನಲ್ಲಿ ನಡೆದಿದೆ

22 ವರ್ಷದ ಯುವಕನನ್ನು ಮಧುರೈನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿಡಲಾಗಿತ್ತು.  ಮಾರ್ಚ್ 30 ರಂದು ಯುವಕನ ಪ್ರೇಯಸಿಯ ವಿವಾಹವನ್ನು ಆಕೆಯ ಪೋಷಕರು ಬೇರೋಬ್ಬ ವ್ಯಕ್ತಿಯೊಂದಿಗೆ ಗೊತ್ತು ಮಾಡಿದ್ದರು. ಆಕೆಗೆ ಇಷ್ಟವಿಲ್ಲದಿದ್ದರೂ ಈ ಮದುವೆ ಸಿದ್ಧತೆ ನಡೆದಿತ್ತು,  ಈ ವಿಷಯವನ್ನು ಆಕೆ ದುಬೈ ನಲ್ಲಿದ್ದ ತನ್ನ ಪ್ರೇಮಿಗೆ ತಿಳಿಸಿದ್ದಾಳೆ, ಡೆಡ್ಲಿ ಕೊರೋನಾ ವೈರಸ್ ಗೂ ಲೆಕ್ಕಿಸದ ಪ್ರೇಮಿ
ಮಾರ್ಚ್ 21 ರಂದು ಮುಂಬಿಗೆ ಆಗಮಿಸಿದ್ದಾನೆ, ಆದರೆ ದುರಾದೃಷ್ಟವಶಾತ್ ಆತನನ್ನು ಮಧುರೈ ನಲ್ಲಿ ಹೋಮ್ ಕ್ವಾರಂಟೈನ್ ನಲ್ಲಿಡಲಾಗಿತ್ತು.

ಆದರೆ ಬುಧವಾರ ಆತ ಎಲ್ಲ ನಿಯಮಗಳನ್ನು ಉಲ್ಲಂಘಿಸಿ, ತನ್ನ ಗೆಳೆಯನ ಬೈಕ್ ಪಡೆದುಕೊಂಡು ತನ್ನ ಪ್ರೇಮಿಯನ್ನು ಭೇಟಿ ಮಾಡಲು ಶಿವಗಂಗೆಗೆ ತೆರಳಿದ್ದಾನೆ, ಹೋಮ್ ಕ್ವಾರಂಟೈನ್ ನಲ್ಲಿದ್ದವ ನಾಪತ್ತೆಯಾಗಿದ್ದನ್ನು ಕಂಡ ಜಿಲ್ಲಾ ಆರೋಗ್ಯಾಧಿಕಾರಿ ಅವನಿಯನ್ ಪುರಮ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ, ಈ ಸಂಬಂಧ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡಿದ್ದ ಪೊಲೀಸರು ಶಿವಗಂಗಾದಲ್ಲಿ ಆತನನ್ನು ಹಿಡಿದಿದ್ದಾರೆ.

ಆತ ತನ್ನ ಗರ್ಲ್ ಫ್ರೆಂಡ್ ಜೊತೆಗಿದ್ದಾಗ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅದಾದ ನಂತರ ಇಬ್ಬರನ್ನು ಹೋಮ್ ಕ್ವಾರಂಟೈನ್ ನಲ್ಲಿಡಲಾಗಿದೆ, ಆದರೆ ಈ ಪ್ರಕರಣದ ಬಗ್ಗೆ ಪೊಲೀಸರು ಯಾವ ಮಾಹಿತಿ ಕೂಡ ನೀಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com