ಕೊರೋನಾ ವಿರುದ್ಧದ ಹೋರಾಟದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿದ ಭಾರತೀಯ ಸೇನೆ: ನಮಸ್ತೆ ಕಾರ್ಯಾಚರಣೆ ಆರಂಭ

ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಜೊತೆಗೆ ಭಾರತೀಯ ಸೇನೆ ಕೈಜೋಡಿಸಿದ್ದು, ಇದರಂತೆ ನಮಸ್ತೆ ಕಾರ್ಯಾಚರಣೆಯೊಂದನ್ನು ಆರಂಭಿಸಿದೆ.
ಭಾರತೀಯ ಸೇನಾ ಮಖ್ಯಸ್ಥ
ಭಾರತೀಯ ಸೇನಾ ಮಖ್ಯಸ್ಥ

ನವದೆಹಲಿ: ಕೊರೋನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ಕೇಂದ್ರ ಸರ್ಕಾರದ ಜೊತೆಗೆ ಭಾರತೀಯ ಸೇನೆ ಕೈಜೋಡಿಸಿದ್ದು, ಇದರಂತೆ ನಮಸ್ತೆ ಕಾರ್ಯಾಚರಣೆಯೊಂದನ್ನು ಆರಂಭಿಸಿದೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಸೇನಾ ಮುಖ್ಯಸ್ಥ ಎಂಎಂ.ನವರಾಣೆಯವರು, ಇಂತಹ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಸರ್ಕಾರದೊಂದಿಗೆ ಕೈಜೋಡಿಸುವುದು ನಮ್ಮ ಕರ್ತವ್ಯ, ಗಡಿ ನಿಯಂತ್ರಣ ರೇಖೆ ಬಳಿ ಸೇನಾ ಯೋಧರು ಗಡಿ ಕಾಯುತ್ತಿದ್ದು, ಯೋಧರು ತಮ್ಮ ಕುಟುಂಬಸ್ಥರು ಹಾಗೂ ಪ್ರೀತಿಪಾತ್ರರ ಬಗ್ಗೆ ಚಿಂತೆಗೀಡಾಗುವ ಅಗತ್ಯವಿಲ್ಲ. ಪರಾಕ್ರಮ್ ಕಾರ್ಯಾಚರಣೆ ನಡೆಸಿದಾಗರೂ ಯೋಧರ ರಜೆಗಳನ್ನು ರದ್ದು ಮಾಡಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ಸೇನೆ ಯಶಸ್ವಿಯಾಗಿತ್ತು. ಇದೀಗ ಕೊರೋನಾ ವಿರುದ್ಧವೂ ನಮಸ್ತೆ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ. 

ಕೊರೋನಾ ವಿರುದ್ಧ ಹೋರಾಡುವ ಸಮಯ ಇದಾಗಿದೆ. ಸರ್ಕಾರಕ್ಕೆ ಹಾಗೂ ನಾಗರೀಕ ಆಡಳಿತಕ್ಕೆ ಸಹಾಯದ ಮಾಡುವ ಅವಕಾಸ ನಮಗೆ ಸಿಕ್ಕಿದೆ. ಒಬ್ಬ ಸೇನಾ ಮುಖ್ಯಸ್ಥನಾಗಿ ಸೇನಾಪಡೆಗಳ ರಕ್ಷಣೆ ಕೂಡ ನನ್ನ ಜವಾಬ್ದಾರಿ. ಅದಕ್ಕೆ ನಾನೂ ಬದ್ಧನಾಗಿದ್ದೇನೆ. ಕೊರೋನಾದಿಂದ ನಮ್ಮನ್ನು ನಾವು ರಕ್ಷಣೆ ಮಾಡಿಕೊಂಡಾಗ ಮಾತ್ರ ನಾವು ನಮ್ಮ ಕರ್ತವ್ಯವನ್ನು ನಿಭಾಯಿಸಬಹುದು. ಸದಾಕಾಲ ಕಾರ್ಯಾಚರಣೆ ಹಾಗೂ ರಕ್ಷಣೆಯಲ್ಲಿ ತೊಡಗಿಕೊಳ್ಳುವ ಸೇನಾಪಡೆಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ, ದೇಶವನ್ನು ರಕ್ಷಣೆ ಮಾಡಲು ನಮ್ಮನ್ನು ನಾವು ಸುರಕ್ಷಿತವಾಗಿಟ್ಟುಕೊಳ್ಳಬೇಕಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸೇನೆ ಈಗಾಗಲೇ ಮೂರು ಸಲಹೆಗಳನ್ನು ಕೆಲ ವಾರಗಳ ಹಿಂದಷ್ಟೇ ಯೋಧರಿಗೆ ನೀಡಿದೆ. ಅವುಗಳನ್ನು ಪಾಲನೆ ಮಾಡುವ ಅಗತ್ಯವಿದೆ. ಕಾರ್ಯಾಚರಣೆಗೆ ಭಾರತೀಯ ಸೇನೆ ಕೋವಿಡ್-19 ಎಂಬ ಕೋಡ್ ನೇಮ್ ನೀಡಿದ್ದು, ಆಪರೇಷನ್ ನಮಸ್ತೆ ಆರಂಭಿಸಲಾಗಿದೆ. ದೇಶದಲ್ಲಿ ಈಗಾಗಲೇ 8 ಕ್ವಾರೆಂಟೈನ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. 

ಗಡಿ ಕಾಯುತ್ತಿರುವ ಯೋಧರು ತಮ್ಮ ಕುಟುಂಬ ಹಾಗೂ ಆತ್ಮೀಯರ ಕುರಿತು ಚಿಂತಿತರಾಗುವ ಅಗತ್ಯವಿಲ್ಲ. ಯೋಧರ ಕುಟುಂಬಸ್ಥರು ಹಾಗೂ ಆಪ್ತರ ಆರೋಗ್ಯದ ಮೇಲೆ ಸೇನೆ ನಿಗಾಇರಿಸಲಿದೆ. ಈ ಕಾರ್ಯಾಚರಣೆಯಲ್ಲಿ ನಾವು ಯಶಸ್ವಿಯಾಗುತ್ತೇವೆಂಬ ನಂಬಿಕೆ ನಮಗಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com