ಹೈದರಾಬಾದ್: ಕುಡಿಯೋಕೆ ಸಿಕ್ತಿಲ್ಲ ಎಂದು ಬೇಸರಗೊಂಡ ಮದ್ಯವ್ಯಸನಿ ಆತ್ಮಹತ್ಯೆಗೆ ಶರಣು!
ಹೈದರಾಬಾದ್: ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಬಾರ್, ಪಬ್ ವೈನ್ ಶಾಪ್ ಗಳನ್ನು ಬಂದ್ ಮಾಡಲಾಗಿದೆ. ತನಗೆ ಕುಡಿಯಲು ಮದ್ಯ ಸಿಗದ ಕಾರಣ ಬೇಸರಗೊಂಡ 50 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.
ನಿನ್ನೆ ರಾತ್ರಿ ಮದ್ಯ ವ್ಯಸನಿ ಪಿ ಮಧು ಎಂಬುವವರು ಸರ್ಕಾರಿ ವಸತಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಚಿತ್ರೋದ್ಯಮದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮಧು ಅವರು, ಲಾಕ್ ಡೌನ್ ಮಾಡಿದ ನಂತರ ಕುಡಿಯಲು ಮದ್ಯ ಸಿಗದಿದ್ದರಿಂದ ವಿಚಿತ್ರವಾಗಿ ವರ್ತಿಸುತ್ತಿದ್ದರು ಎಂದು ಅವರು ಕುಟುಂಬದವರು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಧುಗೆ ಕಳೆದ ಮೂರು ದಿನಗಳಿಂದ ಕುಡಿಯಲು ಮದ್ಯ ಸಿಕ್ಕಿರಲಿಲ್ಲ ಮತ್ತು ಲಾಕ್ ಡೌನ್ ಅನ್ನು ಸದ್ಯಕ್ಕೆ ಹಿಂಪಡೆಯುವ ಸಾಧ್ಯತೆ ಇಲ್ಲ ಎಂಬ ಕಾರಣಕ್ಕೆ ಆತ ಬಹಳ ನಿರಾಶನಾಗಿದ್ದ ಎಂದು ಮೃತನ ಕುಟುಂಬದವರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ