ರಾಮನಾಮ ಜಪಿಸಿ ಹಿಂದೂ ವ್ಯಕ್ತಿಯ ದೇಹ ಹೊತ್ತೊಯ್ದು ಶವ ಸಂಸ್ಕಾರದಲ್ಲಿ ಪಾಲ್ಗೊಂಡ ಮುಸ್ಲಿಮರು!

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಹಿಂದುವಿನ ಮೃತ ದೇಹವನ್ನು ಸಂಸ್ಕಾರಕ್ಕೆ ಹೊತ್ತೊಯ್ಯುತ್ತ 'ರಾಮ ನಾಮ ಸತ್ಯ ಹೇ' ಎಂಬ ಘೋಷಣೆಗಳನ್ನು ಕೂಗುತ್ತ ಸಾಗಿದ್ದು ಮುಸ್ಲಿಮರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು.
ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಮುಸ್ಲಿಮರು
ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಮುಸ್ಲಿಮರು
Updated on: 

ಲಕ್ನೋ: ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಹಿಂದುವಿನ ಮೃತ ದೇಹವನ್ನು ಸಂಸ್ಕಾರಕ್ಕೆ ಹೊತ್ತೊಯ್ಯುತ್ತ 'ರಾಮ ನಾಮ ಸತ್ಯ ಹೇ' ಎಂಬ ಘೋಷಣೆಗಳನ್ನು ಕೂಗುತ್ತ ಸಾಗಿದ್ದು ಮುಸ್ಲಿಮರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು.

ಬುಲಂದ್‌ಶಹರ್‌ನ ಆನಂದ ವಿಹಾರ ಪ್ರದೇಶದ ನಿವಾಸಿ, ಕ್ಯಾನ್ಸರ್‌ನಿಂದ ಬಳಲುತ್ತಿದ್ದ 40 ವರ್ಷದ ರವಿ ಶಂಕರ್‌ ಎಂಬುವವರು ಶನಿವಾರ ಮಧ್ಯಾಹ್ಮ ಸಾವನ್ನಪ್ಪಿದ್ದರು. 

ಲಾಕ್‌ಡೌನ್‌ನಿಂದ ರವಿ ಶಂಕರ್‌ ಅವರ ಸಂಬಂಧಿಕರು ಯಾರಿಗೂ ಬರಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ದಫನ ಮಾಡುವುದು ಹೇಗೆ ಎಂದು ಪತ್ನಿ ಮಕ್ಕಳು ತಲೆ ಮೇಲೆ ಕೈಹೊತ್ತು ಕಳಿತಿದ್ದ ಸಂದರ್ಭ ನೆರೆಯ ಮುಸ್ಲಿಮರು ನೆರವಿಗೆ ಧಾವಿಸಿದರು.

ಶವ ಸಂಸ್ಕಾರಕ್ಕೆ ಮುಸ್ಲಿಮರು ಹಿಂದು ಘೋಷವಾಕ್ಯಗಳನ್ನು ಪಠಿಸುತ್ತ ಮೃತದೇಹವನ್ನು ಹೊತ್ತೊಯ್ಯುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com