ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ದೆಹಲಿ ವಿದ್ಯಾರ್ಥಿಗಳನ್ನು ಕರೆ ತರಲು ಕೋಟಾಗೆ 40 ಬಸ್ ಕಳುಹಿಸಲಾಗುವುದು: ಕೇಜ್ರಿವಾಲ್

ಕೊವಿಡ್-19 ಲಾಕ್ ಡೌನ್ ನಿಂದಾಗಿ ರಾಜಸ್ಥಾನದ ಕೋಟಾದಲ್ಲಿ ಸಿಲುಕಿರುವ ದೆಹಲಿಯ ವಿದ್ಯಾರ್ಥಿಗಳನ್ನು ಕರೆತರಲು 40 ಬಸ್ ಗಳನ್ನು ಕಳುಹಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಹೇಳಿದ್ದಾರೆ.

ನವದೆಹಲಿ: ಕೊವಿಡ್-19 ಲಾಕ್ ಡೌನ್ ನಿಂದಾಗಿ ರಾಜಸ್ಥಾನದ ಕೋಟಾದಲ್ಲಿ ಸಿಲುಕಿರುವ ದೆಹಲಿಯ ವಿದ್ಯಾರ್ಥಿಗಳನ್ನು ಕರೆತರಲು 40 ಬಸ್ ಗಳನ್ನು ಕಳುಹಿಸಲಾಗುತ್ತಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ ಹೇಳಿದ್ದಾರೆ.

ಕೋಟಾದಲ್ಲಿರುವ ವಿದ್ಯಾರ್ಥಿಗಳು ಮತ್ತು ಅವರ ಪೋಷಕರಿಂದ ಹಲವು ಮನವಿಗಳು ಬಂದಿವೆ. ಇಂದು ಕೋಟಾಗೆ ನಾವು 40 ಬಸ್ ಗಳನ್ನು ಕಳುಹಿಸುತ್ತಿದ್ದೇವೆ. ನಾಳೆ ಎಲ್ಲಾ ವಿದ್ಯಾರ್ಥಿಗಳು ದೆಹಲಿಗೆ ವಾಪಸ್ ಆಗಲಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ದೆಹಲಿಗೆ ಬಂದ ನಂತರ ಎಲ್ಲಾ ವಿದ್ಯಾರ್ಥಿಗಳು 14 ದಿನಗಳ ಕಾಲ ಸ್ವಯಂ ಕ್ವಾರಂಟೈನ್ ಒಳಗಾಗಬೇಕು ಎಂದು ಸಿಎಂ ಹೇಳಿದ್ದಾರೆ.

ವಲಸೆ ಕಾರ್ಮಿಕರನ್ನು ಕರೆತರುವ ಕುರಿತು ಇತರೆ ರಾಜ್ಯ ಸರ್ಕಾರಗಳ ಜೊತೆ ಮಾತುಕತೆ ನಡೆಸಲಾಗುತ್ತಿದೆ. ಈ ಸಂಬಂಧ ನಾವು ಸೂಕ್ತ ಯೋಜನೆ ರೂಪಿಸುವವರೆಗೆ ಕಾರ್ಮಿಕರು ಲಾಕ್ ಡೌನ್ ನಿಯಮಗಳನ್ನು ಪಾಲಿಸಬೇಕು ಎಂದು ಕೇಜ್ರಿವಾಲ್ ಅವರು ಮನವಿ ಮಾಡಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com