ಲಾಕ್ ಡೌನ್ ಮುಂದುವರಿಕೆ: ಮೇ 17ರ ವರೆಗೆ ರೈಲು, ವಿಮಾನ ಸೇವೆ ರದ್ದು

ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಮುಂದುವರೆಸಿದ ಹಿನ್ನೆಲೆಯಲ್ಲಿ ಮೇ 17ರ ವರೆಗೆ ರೈಲು ಮತ್ತು ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿದೆ.
ರೈಲು ಬೋಗಿ ಶುಚಿಗೊಳಿಸುತ್ತಿರುವ ಕಾರ್ಮಿಕ
ರೈಲು ಬೋಗಿ ಶುಚಿಗೊಳಿಸುತ್ತಿರುವ ಕಾರ್ಮಿಕ

ನವದೆಹಲಿ: ಕೇಂದ್ರ ಸರ್ಕಾರ ದೇಶಾದ್ಯಂತ ಲಾಕ್ ಡೌನ್ ಮುಂದುವರೆಸಿದ ಹಿನ್ನೆಲೆಯಲ್ಲಿ ಮೇ 17ರ ವರೆಗೆ ರೈಲು ಮತ್ತು ವಿಮಾನ ಸೇವೆಯನ್ನು ರದ್ದುಗೊಳಿಸಲಾಗಿದೆ.

ಆದಾಗ್ಯೂ, ಲಾಕ್ ಡೌನ್ ನಿಂದಾಗಿ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಿಗಳು, ಪ್ರವಾಸಿಗರಿಗಾಗಿ ಶ್ರಮಿಕ ವಿಶೇಷ ರೈಲು ಸಂಚರಿಸಲಿದೆ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.

ಮೇ 17ರ ವರೆಗೆ ಸಬ್ ಅರ್ಬನ್ ರೈಲು ಸೇರಿದಂತೆ ಎಲ್ಲಾ ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಟಿಕೆಟ್ ಬುಕ್ಕಿಂಗ್ ಗಾಗಿ ಯಾರೂ ಸಹ ರೈಲ್ವೆ ನಿಲ್ದಾಣಗಳಿಗೆ ಬರಬೇಡಿ ಎಂದು ಭಾರತೀಯ ರೈಲ್ವೆ ಟ್ವೀಟ್ ಮಾಡಿದೆ.

ಇನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಸಹ ಮೇ 17ರ ಮಧ್ಯ ರಾತ್ರಿಯವರೆಗೆ ಎಲ್ಲಾ ವಾಣಿಜ್ಯ ವಿಮಾನ ಸೇವೆಯನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com