ಸಂಗ್ರಹ ಚಿತ್ರ
ದೇಶ
ಜೆಇಇ, ನೀಟ್ ಪರೀಕ್ಷಾ ದಿನಾಂಕ ಪ್ರಕಟ
ಲಾಕ್ ಡೌನ್ ಸಡಿಲಿಕೆಯ ನಡುವೆ, ಜೆಇಇ ಮತ್ತು ನೀಟ್ ಪರೀಕ್ಷೆಯ ದಿನಾಂಕವನ್ನು ಪ್ರಕಟ ಮಾಡಿದೆ.
ನವೆದಹಲಿ : ಲಾಕ್ ಡೌನ್ ಸಡಿಲಿಕೆಯ ನಡುವೆ, ಜೆಇಇ ಮತ್ತು ನೀಟ್ ಪರೀಕ್ಷೆಯ ದಿನಾಂಕವನ್ನು ಪ್ರಕಟ ಮಾಡಿದೆ.
ಜುಲೈ 18ರಿಂದ ಜೆಇಇ ಪರೀಕ್ಷೆ ಆರಂಭವಾಗಲಿದ್ದು, ಜುಲೈ 23ರವರೆಗೆ ನಡೆಯಲಿದೆ. ಅಂತೆಯೇ ಜುಲೈ 26ರಂದು ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಈ ಕುರಿತಂತೆ ಮಾಹಿತಿ ನೀಡಿರುವ ಕೇಂದ್ರ ಹೆಚ್ ಆರ್ ಡಿ ಸಚಿವ ರಮೇಶ್ ಪೊಕ್ರಿಯಾಳ್, ಜಾಯಿಂಟ್ ಎಟೆರೆನ್ ಎಕ್ಸಾಂ(ಜೆಇಇ)ಯ ಮುಖ್ಯ ಪರೀಕ್ಷೆಯನ್ನು ಜುಲೈ 18ರಿಂದ 23ರ ವರೆಗೆ ನಡೆಸಲಾಗುತ್ತದೆ. ನ್ಯಾಷನಲ್ ಎಲಿಜಬಲಿಟಿ ಕಂ ಎಂಟರೆನ್ಸ್ ಟೆಸ್ಟ್(ನೀಟ್) ಅಡ್ವಾನ್ಸ್ ಪರೀಕ್ಷೆ ಜುಲೈ 26ಕ್ಕೆ ನಿಗಧಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ