67 ಸಾವಿರ ಕಾರ್ಮಿಕರಿಗಾಗಿ ಮೇ.1 ರಿಂದ ಸಂಚರಿಸುತ್ತಿವೆ 67 ಶ್ರಮಿಕ್ ರೈಲುಗಳು!
ದೇಶ
67 ಸಾವಿರ ಕಾರ್ಮಿಕರಿಗಾಗಿ ಮೇ.1 ರಿಂದ ಸಂಚರಿಸುತ್ತಿವೆ 67 ಶ್ರಮಿಕ್ ರೈಲುಗಳು!
ವಲಸಿಗ ಕಾರ್ಮಿಕರಿಗಾಗಿ ಭಾರತೀಯ ರೈಲ್ವೆ ಇಲಾಖೆ 67 ರೈಲುಗಳ ಕಾರ್ಯಾರಂಭ ಮಾಡಿವೆ.
ಸುಮಾರು 67,000 ವಲಸಿಗ ಕಾರ್ಮಿಕರು ದೇಶಾದ್ಯಂತ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದು, ಈ ವರೆಗೂ 67,000 ಕಾರ್ಮಿಕರನ್ನು ಅವರ ಊರುಗಳಿಗೆ ತಲುಪಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಮೇ.04 ವರೆಗೂ 55 ರೈಲುಗಳು ಕಾರ್ಯಾಚರಣೆ ಮಾಡಿದ್ದವು. ಪ್ರತಿ ರೈಲುಗಳಲ್ಲಿ 1,000 ಜನರನ್ನು ಕರೆದೊಯ್ಯಲಾಯಿತು. ಮೇ.05 ರಂದು ಹೆಚ್ಚುವರಿಯಾಗಿ 21 ಶ್ರಮಿಕ್ ರೈಲುಗಳನ್ನು ಬೆಂಗಳೂರು, ಸೂರತ್, ಸಬರ್ಮತಿ, ಜಲಂಧರ್, ಕೋಟಾ, ಎರ್ನಾಕುಲಂ ನಿಂದ ಕಾರ್ಯಾರಂಭ ಮಾಡಲಾಗಿದೆ.


