ಲಾಕ್ ಡೌನ್ 3.0: ಬಿಸಿಲ ಬೇಗೆ ನಡುವೆ 200 ಕಿ.ಮೀ ನಡೆದ ಮಹಿಳೆ ಸಾವು!

ಲಾಕ್ ಡೌನ್ ಹಿನ್ನೆಲೆ ಊರಿಗೆ ತಲುಪಲು ಕುಟುಂಬ ಸದಸ್ಯರ ಜೊತೆಯಲ್ಲಿ ಕಾಲ್ನಡಿಗೆ ಪ್ರಾರಂಭಿಸಿ ಮೃತಪಟ್ಟ ವರದಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.
ಲಾಕ್ ಡೌನ್ 3.0: ಬಿಸಿಲ ಬೇಗೆ ನಡುವೆ 200 ಕಿ.ಮೀ ನಡೆದ ಮಹಿಳೆ ಸಾವು!
ಲಾಕ್ ಡೌನ್ 3.0: ಬಿಸಿಲ ಬೇಗೆ ನಡುವೆ 200 ಕಿ.ಮೀ ನಡೆದ ಮಹಿಳೆ ಸಾವು!

ಲಾಕ್ ಡೌನ್ ಹಿನ್ನೆಲೆ ಊರಿಗೆ ತಲುಪಲು ಕುಟುಂಬ ಸದಸ್ಯರ ಜೊತೆಯಲ್ಲಿ ಕಾಲ್ನಡಿಗೆ ಪ್ರಾರಂಭಿಸಿ ಮೃತಪಟ್ಟ ವರದಿಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಈಗ ಮತ್ತೊಂದು ಪ್ರಕರಣದಲ್ಲಿ ಬಿಸಿಲ ಬೇಗೆ ನಡುವೆಯೇ 200 ಕಿ.ಮೀ ಕಾಲ್ನಡಿಗೆ ಕೈಗೊಂಡಿದ್ದ 21 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ. 

ಮಹಾರಾಷ್ಟ್ರದಲ್ಲಿರುವ ರತ್ನಗಿರಿಗೆ ತೆರಳಲು ಕುಟುಂಬ ಸದಸ್ಯರೊಂದಿಗೆ ಈ ಮಹಿಳೆ ಕಾಲ್ನಡಿಗೆ ಪ್ರಾರಂಭಿಸಿದ್ದರು. 230 ಕಿ.ಮೀ ಸಂಚರಿಸಿದ ನಂತರ ಕೊಂಕಣದಲ್ಲಿ ಈಕೆ ಮೃತಪಟ್ಟಿದ್ದಾರೆ. 

ರತ್ನಗಿರಿಗೂ ಕೆಲವೇ ಕೆಲವು ಕಿ.ಮೀ ದೂರದಲ್ಲಿ ಸೋನಾಲಿ ಬುಡಾರೆ ಮೃತಪಟ್ಟಿದ್ದಾರೆ. ವಲಸಿಗ ಕಾರ್ಮಿಕರು ಕಾಲ್ನಡಿಗೆಯಲ್ಲಿ ಊರುಗಳಿಗೆ ತೆರಳಲು ಯತ್ನಿಸಿ ಮಾರ್ಗ ಮಧ್ಯೆ ಮೃತಪಟ್ಟಿರುವ ಘಟನೆ ಇದೇ ಮೊದಲೇನಲ್ಲ. ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶಗಳಲ್ಲಿಯೂ ಇಂತಹ ಘಟನೆಗಳು ವರದಿಯಾಗಿದೆ. ಮುಂಬೈ ಒಂದರಲ್ಲೇ 3 ಲಕ್ಷ ವಲಸಿಗ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಕೃಪಾಶಂಕರ್ ಸಿಂಗ್ ಹೇಳಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com