ಮೇ.12 ರಿಂದ ರೈಲು ಸೇವೆಗಳು ಪುನಾರಂಭ

ಭಾರತೀಯ ರೈಲ್ವೆ ಪ್ರಯಾಣಿಕ ರೈಲು ಸೇವೆಗಳನ್ನು ಮೆ.12 ರಿಂದ ಕ್ರಮೇಣ ಪ್ರಾರಂಭ ಮಾಡಲಿದೆ. 
ಮೇ.12 ರಿಂದ ರೈಲು ಸೇವೆಗಳು ಪುನಾರಂಭ
ಮೇ.12 ರಿಂದ ರೈಲು ಸೇವೆಗಳು ಪುನಾರಂಭ

ನವದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕ ರೈಲು ಸೇವೆಗಳನ್ನು ಮೆ.12 ರಿಂದ ಕ್ರಮೇಣ ಪ್ರಾರಂಭ ಮಾಡಲಿದೆ. 

15 ಜೊತೆ ರೈಲುಗಳು ಸಂಚರಿಸಲಿದ್ದು, ನವದೆಹಲಿಯಿಂದ ದಿಬ್ರುಗರ್, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ಪುರ್, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಮತ್ತು ಜಮ್ಮು ತಾವಿ ನಡುವೆ ಸಂಚರಿಸಲಿದೆ. 

ಕೊರೋನಾ ವೈರಸ್ ಹಿನ್ನೆಲೆ ಎಲ್ಲ ಪ್ರಯಾಣಿಕ ರೈಲುಗಳ ಸಂಚಾರವನ್ನು ಮಾ.25 ರಿಂದ ರದ್ದುಗೊಳಿಸಲಾಗಿತ್ತು. ಮೇ.12 ರಿಂದ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದ ಬಳಿಕ ರೈಲ್ವೆ ಇಲಾಖೆ  ಕ್ರಮೇಣ ಹೊಸ ಮಾರ್ಗಗಳಿಗೆ ರೈಲುಗಳ ಸಂಚಾರವನ್ನು ಪ್ರಾರಂಭಿಸಲಿದೆ. ಮೇ.11 ರಂದು ಸಂಜೆ 4 ರಿಂದ ರೈಲ್ವೆ ಟಿಕೆಟ್ ಗಳನ್ನು https://www.irctc.co.in/ ನಲ್ಲಿ ಕಾಯ್ದಿರಿಸಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com