ಕೋವಿಡ್ ಸಂಕಷ್ಟದ ನಡುವೆ ದೀದಿ ರಾಜಕೀಯ? ಪಶ್ಚಿಮ ಬಂಗಾಳ ಆರೋಗ್ಯ ಕಾರ್ಯದರ್ಶಿ ಬದಲು

ಮಮತಾ ಬ್ಯಾನರ್ಜಿ ಸರ್ಕಾರ ಕೊರೋನಾವೈರಸ್ ಸೋಂಕಿತರ ಲೆಕ್ಕವನ್ನು ಮುಚ್ಚಿಡಲಾಗುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಪಶ್ಚಿಮ ಬಂಗಾಳ ಆರೋಗ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಅವರನ್ನು ಪರಿಸರ ಇಲಾಖೆಗೆ ವರ್ಗಾಯಿಸಲಾಗಿದೆ. ಅದೇ ವೇಳೆ ವಿವೇಕ್  ಅವರ ಸ್ಥಾನಕ್ಕೆ ಗಿ ನಾರಾಯಣ್ ಸ್ವರೂಪ್ ನಿಗಮ್ ಅವರನ್ನು ಹೆಸರಿಸಲಾಗಿದೆ.
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Updated on

ಕೋಲ್ಕತ್ತಾ: ಮಮತಾ ಬ್ಯಾನರ್ಜಿ ಸರ್ಕಾರ ಕೊರೋನಾವೈರಸ್ ಸೋಂಕಿತರ ಲೆಕ್ಕವನ್ನು ಮುಚ್ಚಿಡಲಾಗುತ್ತಿದೆ ಎಂಬ ಆರೋಪದ ಬೆನ್ನಲ್ಲೇ ಪಶ್ಚಿಮ ಬಂಗಾಳ ಆರೋಗ್ಯ ಕಾರ್ಯದರ್ಶಿ ವಿವೇಕ್ ಕುಮಾರ್ ಅವರನ್ನು ಪರಿಸರ ಇಲಾಖೆಗೆ ವರ್ಗಾಯಿಸಲಾಗಿದೆ. ಅದೇ ವೇಳೆ ವಿವೇಕ್  ಅವರ ಸ್ಥಾನಕ್ಕೆ ಗಿ ನಾರಾಯಣ್ ಸ್ವರೂಪ್ ನಿಗಮ್ ಅವರನ್ನು ಹೆಸರಿಸಲಾಗಿದೆ.

ವಿವೇಕ್ ವರನ್ನು ಪರಿಸರ ಇಲಾಖೆಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಿರುವುದು ರಾಜ್ಯದ ಕೋವಿಡ್ -19 ದತ್ತಾಂಶಗಳ ಕುರಿತ ಊಹಾಪೋಹಗಳು ಕೇಳಿ ಬಂದ ನಂತರ ನಡೆದ ಮಹತ್ವದ ಬೆಳವಣಿಗೆಯಾಗಿದೆ.

ಇದುವರೆಗೆ ಸಾರಿಗೆ ಇಲಾಖೆ ಕಾರ್ಯದರ್ಶಿಯಾಗಿದ್ದ ನಿಗಮ್ ಅವರನ್ನು ವಿವೇಕ್ ಅವರ ಬದಲಿಯಾಗಿ ನೇಮಕ ಮಾಡಲಾಗಿದ್ದು ಈ ಕುರಿತಂತೆ ಮೇ 11ರಂದು ಅಧಿಸೂಚನೆ ಹೊರಬಿದ್ದಿದೆ.

Under fire health minister of Bengal Mamata Banerjee shunts out Health Secretary IAS Vivek Kumar appoints Narayan Swaroop Nigam as next Health Secretary pic.twitter.com/0pQfgNNioC

ಕೊರೋನಾವೈಅರ್ಸ್ ಸೋಂಕಿನಿಂದ  ಪಶ್ಚಿಮ ಬಂಗಾಳದಲ್ಲಿ ಇದುವರೆಗೆ 118 ಸಾವು ಸಂಭವಿಸಿದೆ.ಸೋಮವಾರದವರೆಗೆ ರಾಜ್ಯದಲ್ಲಿ 1,939 ಕೊರೋನಾ ಪ್ರಕರಣ ದಾಖಲಾಗಿರುವುದಾಗಿ ಸರ್ಕಾರಿ ಅಂಕಿ ಅಂಶಗಳು ಖಚಿತಪಡಿಸಿದೆ.ಮತ್ತು ಅವುಗಳಲ್ಲಿ 1,374 ಪ್ರಕರಣಗಳು ಸಕ್ರಿಯವಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com