1984ರ ಸಿಖ್ ವಿರೋಧಿ ದಂಗೆ: ಸಜ್ಜನ್ ಕುಮಾರ್ ಗೆ ತಕ್ಷಣಕ್ಕೆ ಇಲ್ಲ ಮುಕ್ತಿ, ಜುಲೈಗೆ ವಿಚಾರಣೆ ಮುಂದೂಡಿಕೆ

1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಮುಖಂಡ ಸಜ್ಜನ್ ಕುಮಾರ್ ಗೆ ತಕ್ಷಣಕ್ಕೆ ಮುಕ್ತಿ ನೀಡದ ಸುಪ್ರೀಂ ಕೋರ್ಟ್ ಜುಲೈ ಗೆ ವಿಚಾರಣೆಯನ್ನು ಮುಂದೂಡಿದೆ.
ಸಜ್ಜನ್ ಕುಮಾರ್
ಸಜ್ಜನ್ ಕುಮಾರ್
Updated on

ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಕಾಂಗ್ರೆಸ್ ಮಾಜಿ ಮುಖಂಡ ಸಜ್ಜನ್ ಕುಮಾರ್ ಗೆ ತಕ್ಷಣಕ್ಕೆ ಮುಕ್ತಿ ನೀಡದ ಸುಪ್ರೀಂ ಕೋರ್ಟ್ ಜುಲೈ ಗೆ ವಿಚಾರಣೆಯನ್ನು ಮುಂದೂಡಿದೆ.

ಅಲ್ಲದೆ ಸಜ್ಜನ್ ಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜುಲೈಗೆ ನಿಗದಿಪಡಿಸಿದೆ. 1984ರ ನವೆಂಬರ್ 1 ಮತ್ತು 2ರಂದು ನೈರುತ್ಯ ದೆಹಲಿಯ ಕಂಟೋನ್ಮೆಂಟ್ ಪ್ರದೇಶದ ರಾಜ್ ನಗರ ಭಾಗ-1 ಪ್ರದೇಶದಲ್ಲಿ ಐವರು ಸಿಖ್ಖರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಜ್ಜನ್ ಕುಮಾರ್ ಅಪರಾಧಿ ಎಂದು ಜೀವಾವಧಿ ಶಿಕ್ಷೆ ವಿಧಿಸುವಂತೆ ದೆಹಲಿ ಹೈಕೋರ್ಟ್  ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಸಜ್ಜನ್ ಕುಮಾರ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

1984ರ ಅಕ್ಟೋಬರ್ 31ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯಾದ ಬಳಿಕ ದೆಹಲಿಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಸಿಖ್ ವಿರೋಧಿ ದಂಗೆ ಎದ್ದಿತ್ತು. ಇಂದಿರಾ ಗಾಂಧಿಯನ್ನು ಅವರ ಸಿಖ್ ಅಂಗರಕ್ಷಕರೇ ಹತ್ಯೆಗೈದಿದ್ದರು.

ದೆಹಲಿ ಹೈಕೋರ್ಟ್ ಕಳೆದ ವರ್ಷ ಅಪರಾಧಿ ಎಂದು ತೀರ್ಪು ನೀಡಿದ ನಂತರ ಸಜ್ಜನ್ ಕುಮಾರ್ ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com