ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉತ್ತರ ಸಿಕ್ಕಿಂನಲ್ಲಿ ಭಾರೀ ಹಿಮಪಾತ: ಭಾರತೀಯ ಸೇನೆ ಲೆಫ್ಟಿನೆಂಟ್ ಕರ್ನಲ್, ಯೋಧ ಬಲಿ

ಉತ್ತರ ಸಿಕ್ಕಿಂನ ಲುಗ್'ನಕ್ ಪರ್ವತ ಪ್ರದೇಶದಲ್ಲಿ ಗುರುವಾರ ಭಾರೀ ಹಿಮಪಾತ ಸಂಭವಿಸಿದ್ದು, ಪರಿಣಾಮ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಮತ್ತು ಯೋಧರೊಬ್ಬರು ಬಲಿಯಾಗಿದ್ದಾರೆಂದು ತಿಳಿದುಬಂದಿದೆ. 

ನವದೆಹಲಿ: ಉತ್ತರ ಸಿಕ್ಕಿಂನ ಲುಗ್'ನಕ್ ಪರ್ವತ ಪ್ರದೇಶದಲ್ಲಿ ಗುರುವಾರ ಭಾರೀ ಹಿಮಪಾತ ಸಂಭವಿಸಿದ್ದು, ಪರಿಣಾಮ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಮತ್ತು ಯೋಧರೊಬ್ಬರು ಬಲಿಯಾಗಿದ್ದಾರೆಂದು ತಿಳಿದುಬಂದಿದೆ. 

ಲೆಫ್ಟಿನೆಂಟ್ ಕರ್ನಲ್ ರಾಬರ್ಟ್ ಟಿಎ ಹಾಗೂ ಯೋಧ ಸಪಳ ಷಣ್ಮುಖ ರಾವ್ ಅವರು ಪ್ರಾಣ ಕಳೆದುಕೊಂಡಿದ್ದಾರೆಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಹಿಮಪಾತದಲ್ಲಿ ರಾಬರ್ಟ್ ಹಾಗೂ ಷಣ್ಮುಖ ಅವರು ಸಿಲುಕಿಕೊಳ್ಳುತ್ತಿದ್ದಂತೆಯೇ ಅವರನ್ನು ರಕ್ಷಣೆ ಮಾಡಲು ಸಾಕಷ್ಟು ಪರಿಶ್ರಮ ಪಡಲಾಗಿತ್ತು. ಆದರೂ, ಇಬ್ಬರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. 

ಮೇ.14ರಂದು ಉತ್ತರ ಸಿಕ್ಕಿಂನಲ್ಲಿ ಪೆಟ್ರೋಲಿಂಗ್-ಕಮ್-ಸ್ನೋ-ಕ್ಲಿಯರೆನ್ಸ್ ಕೆಲಸಕ್ಕೆ ನಿಯೋಜಿಸಲಾಗಿತ್ತು. ಈ ಗುಂಪು ಹಿಮಪಾತಕ್ಕೆ ಸಿಲುಕಿತ್ತು. ಗುಂಪಿನಲ್ಲಿ ಒಟ್ಟು 17-18 ಮಂದಿ ಯೋಧರಿದ್ದು, ಈ ಗುಂಪು ಹಿಮಪಾತ ಸಂಭವಿಸುವ ಸ್ಥಳದಲ್ಲಿ ಕರ್ತವ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. 

Related Stories

No stories found.

Advertisement

X
Kannada Prabha
www.kannadaprabha.com