ಮುಂಬೈನ ಧಾರಾವಿಯಲ್ಲಿ ಮತ್ತೆ 25 ಕೊರೊನಾ ಸೋಂಕು ಪ್ರಕರಣ
ದೇಶ
ಮುಂಬೈನ ಧಾರಾವಿಯಲ್ಲಿ ಮತ್ತೆ 25 ಕೊರೊನಾ ಸೋಂಕು ಪ್ರಕರಣ
ಮುಂಬೈನ ಧಾರಾವಿ ಕೊಳಗೇರಿಯಲ್ಲಿ ಬುಧವಾರ 25 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಮುಂಬೈ: ಮುಂಬೈನ ಧಾರಾವಿ ಕೊಳಗೇರಿಯಲ್ಲಿ ಬುಧವಾರ 25 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.
ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 1,378 ಕ್ಕೆ ಏರಿದೆ ಎಂದು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಹೇಳಿದೆ. ಹೌದು, ಮುಂಬೈನ ಧಾರಾವಿ ಸ್ಲಮ್ ನಲ್ಲಿ ಬುಧವಾರ 25 ಹೊಸ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದೂವರೆಗೂ ಒಟ್ಟು 56 ಸಾವು - ನೋವುಗಳು ಸಂಭವಿಸಿವೆ ಎಂದು ತಿಳಿದುಬಂದಿದೆ.
ಮಟುಂಗಾ ಲೇಬರ್ ಕ್ಯಾಂಪ್ ನಿಂದ ಹೆಚ್ಚು ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ದಿನದಿಂದ ದಿನಕ್ಕೆ ಈ ಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದು ಏಷ್ಯಾದ ಅತಿ ಹೆಚ್ಚು ಹೆಚ್ಚು ಜನನಿಬಿಡ ಕೊಳೆಗೇರಿ ಕಾಲೋನಿಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ