ಆಂಬ್ಯುಲೆನ್ಸ್ ಸಿಕ್ಕದೆ 7 ಕಿ.ಮೀ ದೂರ ನಡೆದು ಆಸ್ಪತ್ರೆ ತಲುಪಿದ ಕೊರೋನಾ ರೋಗಿ!

ಕೋವಿಡ್ 19 ರೋಗಿಯು ತನ್ನ ಮನೆಯಿಂದ ಥಾಣೆ ಜಿಲ್ಲೆಯ ಡೊಂಬಿವಿಲ್ಲಿ ಯಲ್ಲಿರುವ ನಿಗದಿತ ಕೋವಿಡ್ ಆಸ್ಪತ್ರೆಗೆ ತಲುಪಲು ಸುಮಾರು 7 ಕಿ.ಮೀ ದೂರ ನಡೆದು ಹೋಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರೋಗಿಯನ್ನು ಕರೆತರಲು ಯಾವುದೇ ಆಂಬ್ಯುಲೆನ್ಸ್ ಲಭ್ಯವಿಲ್ಲದೆ ಹಿನ್ನೆಲೆ ಆತ ನಡೆದೇ ಆಸ್ಪತ್ರೆ ತಲುಪಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಂಬ್ಯುಲೆನ್ಸ್ ಸಿಕ್ಕದೆ 7 ಕಿ.ಮೀ ದೂರ ನಡೆದು ಆಸ್ಪತ್ರೆ ತಲುಪಿದ ಕೊರೋನಾ ರೋಗಿ!

ಮುಂಬೈ: ಕೋವಿಡ್ 19 ರೋಗಿಯು ತನ್ನ ಮನೆಯಿಂದ ಥಾಣೆ ಜಿಲ್ಲೆಯ ಡೊಂಬಿವ್ಲಿಯಲ್ಲಿರುವ ನಿಗದಿತ ಕೋವಿಡ್ ಆಸ್ಪತ್ರೆಗೆ ತಲುಪಲು ಸುಮಾರು 7 ಕಿ.ಮೀ ದೂರ ನಡೆದು ಹೋಗಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ರೋಗಿಯನ್ನು ಕರೆತರಲು ಯಾವುದೇ ಆಂಬ್ಯುಲೆನ್ಸ್ ಲಭ್ಯವಿಲ್ಲದೆ ಹಿನ್ನೆಲೆ ಆತ ನಡೆದೇ ಆಸ್ಪತ್ರೆ ತಲುಪಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ .

ಈ ಘಟನೆ ಗುರುವಾರ ನಡೆದಿದ್ದು, ಆಸ್ಪತ್ರೆಗೆ ತೆರಳುತ್ತಿರುವ ವ್ಯಕ್ತಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕಲ್ಯಾಣ್ ಡೊಂಬಿವ್ಲಿ ಮುನ್ಸಿಪಲ್ ಕಾರ್ಪೊರೇಶನ್ (ಕೆಡಿಎಂಸಿ) ಆಯುಕ್ತ ಡಾ.ವಿಜಯ್ ಸೂರ್ಯವಂಶಿ ಅವರು ಘಟನೆಯ ಮಾಹಿತಿ ಪಡೆದಿದ್ದು ತನಿಖೆಗೆ ಆದೇಶಿಸಿದ್ದಾರೆ ಎಂದು ಹೇಳಿದರು.

ವೀಡಿಯೊ ಸಂದೇಶದಲ್ಲಿ, "ವ್ಯಕ್ತಿಯು ಮುಂಬೈನ ಪ್ರಮುಖ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಾನೆ, ಅವನು ಸ್ವತಃ ಕೋವಿಡ್ 19 ಗಾಗಿ ಪರೀಕ್ಷೆಗೆ ಒಳಗಾಗಿದ್ದನು. ಅವರಿಗೆ ಕೊರೋನಾವೈರಸ್ ಪಾಸಿಟಿವ್ ಎಂದು ತಿಳಿದ ನಂತರ, ಡೊಂಬಿವ್ಲಿಯ ಶಾಸ್ತ್ರಿ ನಗರ ಆಸ್ಪತ್ರೆಗೆ ಕರೆ ಮಾಡಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿಗಳು  ಆಂಬ್ಯುಲೆನ್ಸ್ ಲಭ್ಯವಿಲ್ಲ ಎಂದು ಹೇಳಿದರು.

"ನಂತರ, ರೋಗಿಯು ತನ್ನ ಮನೆಯಿಂದ ಆಸ್ಪತ್ರೆಗೆ ನಡೆದುಕೊಂಡೇ ತೆರಳಲು ನಿರ್ಧರಿಸಿದನು," ಎಂದು ಅವರು ಹೇಳಿದರು.

ಪ್ರಸ್ತುತ 33 ಆಂಬ್ಯುಲೆನ್ಸ್ ‌ಗಳನ್ನು ನಾಗರಿಕ ಸಂಸ್ಥೆ ಸೇವೆಗೆ  ನೀಡಬೇಕೆಂದು ಆದೇಶಿಸಿದ್ದಾಗಿ ಆಯುಕ್ತರು ತಿಳಿಸಿದ್ದಾರೆ.

"ಈ ಪ್ರಕರಣದಲ್ಲಿ ನಿಜವಾಗಿ ಏನಾಯಿತು ಎಂದು ವಿಚಾರಿಸಲು ನಾನು ಅಧಿಕಾರಿಗಳಿಗೆ ಆದೇಶಿಸಿದ್ದೇನೆ ಮತ್ತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ರೋಗಿಯು ಆಸ್ಪತ್ರೆಗೆ ಬರದೆ ಆಂಬ್ಯುಲೆನ್ಸ್ ‌ಗಾಗಿ ಕಾಯಬೇಕಾಗಿತ್ತು. ಪ್ರಸ್ತುತ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ. 

ಇದಕ್ಕೆ ಮೊದಲು, ಆಂಬ್ಯುಲೆನ್ಸ್ ಲಭ್ಯವಿಲ್ಲದಿರುವ ಬಗ್ಗೆ ಎಂದಿಗೂ ದೂರು ಬಂದಿರಲಿಲ್ಲ. ನಮ್ಮ ಎಲ್ಲ ಸಿಬ್ಬಂದಿಗಳು ಕೊರೋನಾವೈರಸ್ ಪ್ರಕರಣಗಳನ್ನು ಎದುರಿಸುವಲ್ಲಿ ಯಾವಾಗಲೂ ಜಾಗರೂಕರಾಗಿರುತ್ತಾರೆ" ಎಂದು ಸೂರ್ಯವಂಶಿ ಹೇಳಿದರು 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com