ಅಂಫಾನ್ ಚಂಡಮಾರುತ: ವಿಶ್ವದ ಅತಿದೊಡ್ಡ, 342 ವರ್ಷ ಹಳೆಯ ಆಲದ ಮರಕ್ಕೆ ಹಾನಿ

ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಅಬ್ಬರಿಸಿದ್ದ ಅಂಫಾನ್ ಚಂಡಮಾರುತದಿಂದಾಗಿ ಬಂಗಾಳದಲ್ಲಿದ್ದ ವಿಶ್ವದ ಅತಿದೊಡ್ಡ ಆಲದ ಮರಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕೋಲ್ಕತಾ: ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಅಬ್ಬರಿಸಿದ್ದ ಅಂಫಾನ್ ಚಂಡಮಾರುತದಿಂದಾಗಿ ಬಂಗಾಳದಲ್ಲಿದ್ದ ವಿಶ್ವದ ಅತಿದೊಡ್ಡ ಆಲದ ಮರಕ್ಕೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಪಶ್ಚಿಮ ಬಂಗಾಳದಲ್ಲಿರುವ ಹೌರಾ ಜೈವಿಕ ಉದ್ಯಾನದ ಪ್ರಮುಖ ಆಕರ್ಷಣೆಯಾಗಿದ್ದ ದೊಡ್ಡ ಆಲದಮರ ಅಂಫಾನ್ ಚಂಡಮಾರುತ ದಾಳಿಗೆ ತೀವ್ರ ಹಾನಿಗೊಳಗಾಗಿದೆ. ಉದ್ಯಾನವನದಲ್ಲಿದ್ದ ಸುಮಾರು 324 ವರ್ಷಗಳಷ್ಟು ಹಳೆಯ ಮತ್ತು ವಿಶ್ವದ ಅತಿದೊಡ್ಡ ಆಲದ ಮರ ಎಂಬ ಖ್ಯಾತಿ  ಗಳಿಸಿದ್ದ ಮರಕ್ಕೆ ಅಂಫಾನ್ ಚಂಡಮಾರುತದಿಂದಾಗಿ ಹಾನಿಯಾಗಿದೆ. ಅಂತೆಯೇ ಉದ್ಯಾನವನದಲ್ಲಿದ್ದ 2 ಕಲ್ಪವೃಕ್ಷಗಳ ಪೈಕಿ ಒಲಿಯಾ ಕಸ್ಪಿಡಾಟಾ ಎಂಬ ಮರಗಳು ಬುಡಸಹಿತ ನೆಲಕ್ಕುರುಳಿವೆ. ಈ ಎರಡೂ ಮರಗಳು ಬ್ರೌನ್ ಆಲಿವ್ ಅಥವಾ ಭಾರತೀಯ ಆಲಿವ್ ಮರಗಳಾಗಿವೆ ಎಂದು  ಆಚಾರ್ಯ ಜಗದೀಶ್ ಚಂದ್ರ ಬೋಸ್ ಜೈವಿಕ ಉದ್ಯಾನವನದ ಮತ್ತು ಅಲಹಾಬಾದ್ ಮೂಲದ ಬೊಟಾನಿಕಲ್ ಸರ್ವೇ ಆಫ್ ಇಂಡಿಯಾದ ವಿಜ್ಞಾನಿ ಶಿವಕುಮಾರ್ ಹೇಳಿದ್ದಾರೆ.

ಹೌರಾ ಜೈವಿಕ ಉದ್ಯಾನವನದಲ್ಲಿ ಸುಮಾರು 342 ವರ್ಷಗಳಷ್ಟು ಹಳೆಯ ವಿಶ್ವದ ಅತಿದೊಡ್ಡ ಆಲದ ಮರವಿದೆ. ಇದರ ಸುತ್ತಳತೆಯೇ ಸುಮಾರು 1.08 ಕಿಮೀ ಆಗುತ್ತದೆ. ಇದರ ಒಂದೊಂದು ರೆಂಬೆಯೂ 15 ಮೀಟರ್ ಇದೆ, 1925ರಲ್ಲಿ ಮೊದಲ ಬಾರಿಗೆ ಇದರ ರೆಂಬೆಗಳನ್ನು  ತೆಗೆದುಹಾಕಲಾಗಿತ್ತು ಎಂದು ಶಿವಕುಮಾರ್ ಮಾಹಿತಿ ನೀಡಿದ್ದಾರೆ. ಇದರ ರೆಂಬೆಗಳಿಗೆ ಅಂಫಾನ್ ಚಂಡಮಾರುತ ಭಾರಿ ಹಾನಿ ಮಾಡಿದೆ.ಮರದ ಬಗ್ಗೆ ಕೂಲಂಕುಷ ಅಧ್ಯಯನ ಮಾಡಿದ ಬಳಿಕವಷ್ಟೇ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಇದೇ ಮರದ ಚಿತ್ರವನ್ನು ಬೊಟಾನಿಕಲ್ ಸರ್ವೇ ಆಫ್ ಇಂಡಿಯಾ ಸಂಸ್ಥೆ ತನ್ನ ಲೋಗೋವಾಗಿ ಬಳಕೆ ಮಾಡುತ್ತಿದ್ದು, ಆಲದ ಮರವನ್ನು ದೇಶದ ರಾಷ್ಟ್ರೀಯ ಮರವಾಗಿ ಸ್ವೀಕರಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com