ದೆಹಲಿ ಏಮ್ಸ್ ಆಸ್ಪತ್ರೆಯ ನೈರ್ಮಲ್ಯ ಮೇಲ್ವಿಚಾರಕ ಕೊರೋನಾ ವೈರಸ್ ಗೆ ಬಲಿ

ಅಖಿಲ ಭಾರತ ವೈದಕ್ಯೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯ 58 ವರ್ಷದ ನೈರ್ಮಲ್ಯ ಮೇಲ್ವಿಚಾರಕ ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಅಖಿಲ ಭಾರತ ವೈದಕ್ಯೀಯ ವಿಜ್ಞಾನ ಸಂಸ್ಥೆ(ಏಮ್ಸ್)ಯ 58 ವರ್ಷದ ನೈರ್ಮಲ್ಯ ಮೇಲ್ವಿಚಾರಕ ಕೊರೋನಾ ವೈರಸ್ ನಿಂದ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನೈರ್ಮಲ್ಯ ಮೇಲ್ವಿಚಾರಕನಿಗೆ ಮೇ 16ರಂದು ಕೊವಿಡ್-19 ಪಾಸಿಟಿವ್ ದೃಢಪಟ್ಟಿತ್ತು. ಬಳಿಕ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚಿಗೆ ಅವರಿಗೆ ವೆಂಟಿಲೇಟರ್ ಅಳವಡಿಸಲಾಗಿತ್ತು. ಆದರೆ ಭಾನುವಾರ ರಾತ್ರಿ 7.30 ಸುಮಾರಿಗೆ ಮೃತಪಟ್ಟಿದ್ದಾರೆ ಎಂದು ಏಮ್ಸ್ ವೈದ್ಯರ ಸಂಘದ ಪ್ರಧಾನ ಕಾರ್ಯದರ್ಶಿ ಡಾ. ಶ್ರೀನಿವಾಸ್ ರಾಜಕುಮಾರ್ ಅವರು ಹೇಳಿದ್ದಾರೆ.

ದೇಶ ಸೇವೆಗಾಗಿ ಮತ್ತೊಬ್ಬ ಕೊರೋನಾ ವಾರಿಯರ್ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಏಮ್ಸ್ ತನ್ನ ಹೆಮ್ಮೆಯ ಯೋಧನನ್ನು ಕಳೆದುಕೊಂಡಿದೆ. ಈ ವೈರಸ್ ಅಪಾಯಕಾರಿ, ತುಂಬಾ ಸಂವಹನಶೀಲವಾಗಿದೆ ಮತ್ತು ಯಾರನ್ನೂ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಕಳೆದ ವಾರ ಏಮ್ಸ್ ಹಾಸ್ಟೆಲ್ ನ ಮೆಸ್ ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕೊರೋನಾ ವೈರಸ್ ಗೆ ಬಲಿಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com