ದೆಹಲಿಯಿಂದ ಢಾಕಾಗೆ ಕೋವಿಡ್-19 ವೈದ್ಯಕೀಯ ಸಾಮಗ್ರಿ ವಿಮಾನ ಚಾಲನೆ ಮಾಡಿದ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿ! 

ಕೊರೋನಾ ಹೋರಾಟದಲ್ಲಿ ರಾಜಕಾರಣಿಗಳು ತಮ್ಮ ಕೌಶಲ್ಯಗಳನ್ನು ಸೇವೆಗೆ ಸದುಪಯೋಗಪಡಿಸಿಕೊಂಡಿದ್ದಾರೆ. ಈ ಪೈಕಿ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿಯೂ ಒಬ್ಬರು! 
ರಾಜೀವ್ ಪ್ರತಾಪ್ ರೂಡಿ
ರಾಜೀವ್ ಪ್ರತಾಪ್ ರೂಡಿ

ನವದೆಹಲಿ: ಕೊರೋನಾ ಹೋರಾಟದಲ್ಲಿ ರಾಜಕಾರಣಿಗಳು ತಮ್ಮ ಕೌಶಲ್ಯಗಳನ್ನು ಸೇವೆಗೆ ಸದುಪಯೋಗಪಡಿಸಿಕೊಂಡಿದ್ದಾರೆ. ಈ ಪೈಕಿ ಬಿಜೆಪಿ ನಾಯಕ ರಾಜೀವ್ ಪ್ರತಾಪ್ ರೂಡಿಯೂ ಒಬ್ಬರು! 

ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ಓರ್ವ ಪೈಲಟ್ ಎಂಬುದು ಅನೇಕ ಜನರಿಗೆ ಗೊತ್ತಿಲ್ಲದಿರಬಹುದಾದ ಸಂಗತಿ. ಅವರ ಈ ಕೌಶಲ್ಯ ಕೋವಿಡ್-19 ವಿರುದ್ಧದ ಕಾರ್ಯಾಚರಣೆ ಸಂದರ್ಭದಲ್ಲಿ ಸಹಾಯಕ್ಕೆ ಬಂದಿದೆ. 

ಕೋವಿಡ್-19 ವೈದ್ಯಕೀಯ ಸಾಮಗ್ರಿಗಳಿದ್ದ ಕಾರ್ಗೋ ಫ್ಲೈಟ್ ನ್ನು ಚಾಲನೆ ಮಾಡಿ ದೆಹಲಿಯಿಂದ ಢಾಕಾಗೆ ಅವುಗಳನ್ನು ತಲುಪಿಸಿದ್ದಾರೆ ರಾಜೀವ್ ಪ್ರತಾಪ್ ರೂಡಿ. ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಕೊರೋನಾದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಭಾರತ ಅತ್ಯುತ್ತಮವಾಗಿ ನಿಭಾಯಿಸುತ್ತಿದೆ ಎಂದು ಹೇಳಿದ್ದಾರೆ. 

ಮೇ.3 ರ ನಂತರ ಎರಡು ವಾರಗಳ ಕಾಲ ಲಾಕ್ ಡೌನ್ ಮುಂದುವರೆಸಿದ್ದ ಭಾರತ ಸರ್ಕಾರ, ಮೇ. 31 ವರೆಗೆ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿರ್ಬಂಧ ವಿಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com