ವಿಯೆಟ್ನಾಂ ನಲ್ಲಿ 1,100 ವರ್ಷದ ಹಿಂದಿನ ಬೃಹತ್ ಶಿವಲಿಂಗ ಪತ್ತೆ!
ವಿಯೆಟ್ನಾಂ ನಲ್ಲಿ 1,100 ವರ್ಷದ ಹಿಂದಿನ ಬೃಹತ್ ಶಿವಲಿಂಗ ಪತ್ತೆ!

ವಿಯೆಟ್ನಾಂ ನಲ್ಲಿ 1,100 ವರ್ಷದ ಹಿಂದಿನ ಬೃಹತ್ ಶಿವಲಿಂಗ ಪತ್ತೆ!

ವಿಯೆಟ್ನಾಂ ಭೌಗೋಳಿಕವಾಗಿ ಭಾರತದಿಂದ ದೂರವಿರಬಹುದು ಆದರೆ ಸಾಂಸ್ಕೃತಿಕವಾಗಿ ಹತ್ತಿರದಲ್ಲಿರುವುದಕ್ಕೆ ಅತ್ಯುತ್ತಮ ಸಾಕ್ಷ್ಯ ಲಭ್ಯವಾಗಿದೆ. 

ವಿಯೆಟ್ನಾಂ: ವಿಯೆಟ್ನಾಂ ಭೌಗೋಳಿಕವಾಗಿ ಭಾರತದಿಂದ ದೂರವಿರಬಹುದು ಆದರೆ ಸಾಂಸ್ಕೃತಿಕವಾಗಿ ಹತ್ತಿರದಲ್ಲಿರುವುದಕ್ಕೆ ಅತ್ಯುತ್ತಮ ಸಾಕ್ಷ್ಯ ಲಭ್ಯವಾಗಿದೆ. 

ಭಾರತದ ಪುರಾತತ್ವ ಸಂಸ್ಥೆ (ಎಎಸ್ಐ) ವಿಯೆಟ್ನಾಂ ನಲ್ಲಿ ಕೈಗೊಂಡಿದ್ದ ಕಾರ್ಯಾಚರಣೆಯಲ್ಲಿ ಬೃಹತ್ ಗಾತ್ರದ ಶಿವಲಿಂಗ ಪತ್ತೆಯಾಗಿದ್ದು, 9 ನೇ ಶತಮಾನಕ್ಕೆ ಸೇರಿದ್ದು ಎನ್ನಲಾಗುತ್ತಿದೆ. ಮೈ ಸನ್ ಅಭಯಾರಣ್ಯದಲ್ಲಿರುವ ಚಾಂ ಟೆಂಪಲ್ ಕಾಂಪ್ಲೆಕ್ಸ್ ನಲ್ಲಿ ಈ ಶಿವಲಿಂಗ ಪತ್ತೆಯಾಗಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೆಶಾಂಗ ಸಚಿವ ಎಸ್ ಜೈಶಂಕರ್, ಈಗ ಪತ್ತೆಯಾಗಿರುವ ಶಿವಲಿಂಗ ವಿಶ್ವಾದ್ಯಂತ ಭಗವಾನ್ ಶಿವನ ಭಕ್ತರ ನಡುವಿನ ಸಾಂಸ್ಕೃತಿಕ ಸಂಬಂಧವನ್ನು ದೃಢೀಕರಿಸಿದೆ ಎಂದು ಹೇಳಿದ್ದು ಶಿವಲಿಂಗದ ಫೋಟೊವನ್ನು ಹಂಚಿಕೊಂಡು ಈ ಪ್ರದೇಶಕ್ಕೆ ತಾವು 2011 ರಲ್ಲಿ ಭೇಟಿ ನೀಡಿದ್ದನ್ನು ನೆನಪಿಸಿಕೊಂಡಿದ್ದಾರೆ. 

ಅಯೋಧ್ಯೆ ರಾಮಜನ್ಮಭೂಮಿಯಲ್ಲಿಯೂ ಶಿವಲಿಂಗ ಪತ್ತೆ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಿದ್ದು, ಕಾಮಗಾರಿ ವೇಳೆ ದೇವಾಲಯಗಳ ಅವಶೇಶಗಳು  5 ಅಡಿಯ ಶಿವಲಿಂಗ ಪತ್ತೆಯಾಗಿದೆ. 

Related Stories

No stories found.

Advertisement

X
Kannada Prabha
www.kannadaprabha.com