ಮೃತ ತಾಯಿಯನ್ನು ಎಬ್ಬಿಸಲು ಮಗುವಿನ ಯತ್ನ: ಬಿಹಾರದ ರೈಲ್ವೆ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಘಟನೆ 

ಮೃತ ತಾಯಿಯನ್ನು ಎಬ್ಬಿಸಲು ಮಗು ಯತ್ನಿಸುತ್ತಿರುವ ಹೃದಯ ವಿದ್ರಾವಕ ಘಟನೆ ಬಿಹಾರದ ಮುಜಾಫರ್ ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. 
ಮೃತ ತಾಯಿಯನ್ನು ಎಬ್ಬಿಸಲು ಮಗುವಿನ ಯತ್ನ: ಬಿಹಾರದ ರೈಲ್ವೆ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಘಟನೆ
ಮೃತ ತಾಯಿಯನ್ನು ಎಬ್ಬಿಸಲು ಮಗುವಿನ ಯತ್ನ: ಬಿಹಾರದ ರೈಲ್ವೆ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಘಟನೆ

ಮೃತ ತಾಯಿಯನ್ನು ಎಬ್ಬಿಸಲು ಮಗು ಯತ್ನಿಸುತ್ತಿರುವ ಹೃದಯ ವಿದ್ರಾವಕ ಘಟನೆ ಬಿಹಾರದ ಮುಜಾಫರ್ ಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಅವರ ಆಪ್ತ ಸಂಜಯ್ ಯಾದವ್ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಆಡಳಿತವನ್ನು ಪ್ರಶ್ನಿಸಿದ್ದಾರೆ. 

ತನ್ನ ಮೃತ ತಾಯಿಗೆ ಹೊದಿಸಲಾಗಿದ್ದ ಹೊದಿಕೆಯನ್ನು ತೆಗೆದು ಎಬ್ಬಿಸಲು ಯತ್ನಿಸುತ್ತಿರುವ ಮನಕಲಕುವ ವಿಡಿಯೋವನ್ನು ಹಂಚಿಕೊಂಡಿರುವ ಸಂಜಯ್ ಯಾದವ್, ಈ ಪುಟ್ಟ ಮಗುವೆ ತನ್ನ ತಾಯಿ ಮೃತಪಟ್ಟಿರುವುದು ತಿಳಿದಿಲ್ಲ. ರೈಲಿನಲ್ಲಿ ಸಂಚರಿಸುತ್ತಿದ್ದ ಕಾರ್ಮಿಕ ಮಹಿಳೆ ಹಸಿವು ಹಾಗೂ ಬಾಯಾರಿಕೆಗಳಿಂದ ಆಕೆ ಮೃತಪಟ್ಟಿದ್ದಾರೆ. ರೈಲಿನಲ್ಲಿ ಸಂಭವಿಸುತ್ತಿರುವ ಈ ಸಾವುಗಳಿಗೆ ಯಾರು ಹೊಣೆ? ಪ್ರತಿಪಕ್ಷಗಳು ಪ್ರಶ್ನೆಗಳನ್ನು ಕೇಳಬಾರದೇ? ಎಂದು ಟ್ವೀಟ್ ಮಾಡಿದ್ದಾರೆ ಸಂಜಯ್ ಯಾದವ್. 

ಗುಜರಾತ್ ನಿಂದ ರೈಲು ಹತ್ತಿದ್ದ ಈ ಮಹಿಳೆಯ ಜೊತೆಯಲ್ಲಿ ಆಕೆಯ ಸಹೋದರಿ ಮತ್ತು ಸಹೋದರಿಯ ಪತಿ ಇಬ್ಬರೂ ಇದ್ದರು. ಆಹಾರ ಹಾಗೂ ನೀರು ಸಿಗದ ಪರಿಣಾಮ ಆಕೆ ಬಿಹಾರದ ಮುಜಪ್ಫರ್ ಪುರ ತಲುಪಿದ ಕೆಲವೇ ಕ್ಷಣಗಳಲ್ಲಿ ಮೃತಪಟ್ಟಿದ್ದು, ಮೃತ ದೇಹವನ್ನು ಪ್ಲಾಟ್ ಫಾರ್ಮ್ ನಲ್ಲೇ ಇರಿಸಲಾಗಿತ್ತು. 

ಆದರೆ ಈ ಘಟನೆಯ ಬಗ್ಗೆ ಪೊಲೀಸರು ಬೇರೆಯದ್ದೇ ಮಾಹಿತಿ ನೀಡಿದ್ದಾರೆ. ಮುಜಾಫ್ಫರ್ ಪುರದ ಸರ್ಕಾರಿ ರೈಲ್ವೆ ಪೊಲೀಸ್ ವಿಭಾಗದ ರಮಾಕಾಂತ್ ಉಪಾಧ್ಯಾಯ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಘಟನೆ ಮೇ.25 ರಂದು ಅಹ್ಮದಾಬಾದ್ ನಿಂದ ಮುಜಾಫ್ಫರ್ ಪುರಕ್ಕೆ ವಿಶೇಷ ಶ್ರಮಿಕ್ ರೈಲಿನಲ್ಲಿ ಬಂದಾಗ ನಡೆದಿದೆ. "ನಮ್ಮ ಸಂಬಂಧಿ ಮಹಿಳೆ ರೈಲಿನಲ್ಲಿ ಏಕಾ ಏಕಿ ಮೃತಪಟ್ಟಿದ್ದಾರೆ. ರೈಲಿನಲ್ಲಿ ನಮಗೆ ಆಹಾರ, ನೀರಿಗೆ ಯಾವುದೇ ಸಮಸ್ಯೆಯಾಗಲಿಲ್ಲ" ಎಂದು ಮೃತ ಮಹಿಳೆಯ ಸಂಬಂಧಿಕರು ಹೇಳಿರುವುದನ್ನು ಪೊಲೀಸ್ ಅಧಿಕಾರಿ ಉಲ್ಲೇಖಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಮೃತ ಮಹಿಳೆಯ ಪಾರ್ಥಿವ ಶರೀರವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಆಕೆ ಅಹ್ಮದಾಬಾದ್ ನಲ್ಲಿ ಕಳೆದ ಒಂದು ವರ್ಷದಿಂದ ಚಿಕಿತ್ಸೆ ಪಡೆಯ್ತುತಿದ್ದರು ಆಕೆ ಮಾನಸಿಕವಾಗಿಯೂ ಸಮಸ್ಯೆ ಎದುರಿಸುತ್ತಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಕೊರೋನಾ ತಡೆಗೆ ಲಾಕ್ ಡೌನ್ ವಿಧಿಸಿದಾಗಿನಿಂದ ವಲಸೆ ಕಾರ್ಮಿಕರು ಅತಿ ಹೆಚ್ಚು ಸಮಸ್ಯೆ ಎದುರಿಸಿದ್ದು ಹಲವರು ಜೀವ ಕಳೆದುಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com