ಲಾಕ್‌ಡೌನ್ ನಂತರ 6 ತಿಂಗಳವರೆಗೆ ಸಾರ್ವಜನಿಕ ಸಾರಿಗೆ ಬಳಕೆ ಕಡಿಮೆಯಾಗಲಿದೆ: ಸಮೀಕ್ಷೆ ವರದಿ

ಲಾಕ್‌ಡೌನ್ ನಂತರ ಆರು ತಿಂಗಳ ಕಾಲ ಸಾರ್ವಜನಿಕ ಸಾರಿಗೆಯ ಬಳಕೆಯ ಪ್ರಮಾಣದಲ್ಲಿ ಕುಸಿತ ಕಂಡುಬರಲಿದೆ. ಏಕೆಂದರೆ ಸಾರ್ವಜನಿಕರಿಗೆ ಗ 'ಆರೋಗ್ಯ ಸುರಕ್ಷತೆ' ಜನರಿಗೆ ಮೊದಲ ಆದ್ಯತೆಯಾಗಿರುತ್ತದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ(ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್ಮೆಂಟ್) ಇತ್ತೀಚಿನ ವಿಶ್ಲೇಷಣೆ ಹೇಳಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಲಾಕ್‌ಡೌನ್ ನಂತರ ಆರು ತಿಂಗಳ ಕಾಲ ಸಾರ್ವಜನಿಕ ಸಾರಿಗೆಯ ಬಳಕೆಯ ಪ್ರಮಾಣದಲ್ಲಿ ಕುಸಿತ ಕಂಡುಬರಲಿದೆ. ಏಕೆಂದರೆ ಸಾರ್ವಜನಿಕರಿಗೆ ಗ 'ಆರೋಗ್ಯ ಸುರಕ್ಷತೆ' ಜನರಿಗೆ ಮೊದಲ ಆದ್ಯತೆಯಾಗಿರುತ್ತದೆ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರ(ಸೆಂಟರ್ ಫಾರ್ ಸೈನ್ಸ್ ಆಂಡ್ ಎನ್ವಿರಾನ್ಮೆಂಟ್) ಇತ್ತೀಚಿನ ವಿಶ್ಲೇಷಣೆ ಹೇಳಿದೆ.

ಕೊರೋನಾ ಸಾಂಕ್ರಾಮಿಕ  ಬಳಿಕದ ಜನರ ಪ್ರಯಾಣದ ಆಯ್ಕೆಗಳನ್ನು ಬದಲಾಯಿಸುವ ಸಂಬಂಧ ಸಿಎಸ್‌ಇಯ ವಿಶ್ಲೇಷಣೆ ನಡೆಸಿದ್ದು ದೆಹಲಿ ಮತ್ತು ಸುತ್ತಮುತ್ತಲಿನ ಎನ್‌ಸಿಆರ್ ನಗರಗಳಲ್ಲಿ 400 ಕ್ಕೂ ಹೆಚ್ಚು ಮಧ್ಯಮ ಮತ್ತು  ಮೇಲ್ವರ್ಗದವರನ್ನು ಇದಕ್ಕಾಗಿ ಸಮೀಕ್ಷೆಗೆ ತೆಗೆದುಕೊಂಡಿದೆ. "ಅಲ್ಪಾವಧ್ಯ ಕಾಲದಲ್ಲಿ "ಸಾರ್ವಜನಿಕ ಸಾರಿಗೆಯ ಬಳಕೆಯಲ್ಲಿ ಇಳಿಮುಖ ಕಂಡುಬರುತ್ತದೆ.  ಆದರೆ ಉತ್ತಮ ಗುಣಮಟ್ಟದ ಸಾರ್ವಜನಿಕ ಸಾರಿಗೆ, ಸಂಪರ್ಕ-ಮುಕ್ತ ವಾಕಿಂಗ್ ಮತ್ತು ಸೈಕ್ಲಿಂಗ್ ದೀರ್ಘಾವಧಿಯಲ್ಲಿ ಅನಗತ್ಯ ಪ್ರಯಾಣವನ್ನು ಕಡಿಮೆ ಮಾಡಲು ಜೀವನಶೈಲಿ ಹೊಂದಾಣಿಕೆಒಂದು ಧನಾತ್ಮಕ ಬದಲಾವಣೆಯಿದೆ" ಎಂದು ಪರಿಣಿತರು ಹೇಳಿದ್ದಾರೆ. 

ಲಾಕ್ ಡೌನ್ ನಂತರದಲ್ಲಿ, ಆರೋಗ್ಯ ಸುರಕ್ಷತೆಯು ಹೆಚ್ಚಿನ ಕಾಳಜಿಯಾಗಲಿದೆ ಎಂದು ಸಿಎಸ್ಇ ತಿಳಿಸಿದೆ, ನಂತರ ರಸ್ತೆ ಸುರಕ್ಷತೆ, ಕುರಿತ ಆಯ್ಕೆಗಳ ಲಭ್ಯತೆ, ಸೌಕರ್ಯ, ಪ್ರಯಾಣದ ದೂರ, ಪ್ರಯಾಣದ ವೆಚ್ಚ ಮತ್ತು ಪರಿಸರ ಪ್ರಜ್ಞೆಗಳ ಬಗ್ಗೆ ಜನರು ಆಲೋಚಿಸುತ್ತಾರೆ. ಇದೇ ವೇಳೆ ಅಲ್ಪಾವಧಿಯಲ್ಲಿ ಕಾರು ಮಾಲೀಕತ್ವ ಮತ್ತು ಬಳಕೆಗೆ ಆದ್ಯತೆ ಹೆಚ್ಚಾಗುತ್ತದೆ ಎಂದು ವಿಶ್ಲೇಷಣೆ ಬಹಿರಂಗಪಡಿಸಿದೆ.ಯಾವುದೇ ವಾಹನವನ್ನು ಹೊಂದಿರದ 36 ಪ್ರತಿಶತದಷ್ಟು ಜನರಲ್ಲಿ, ಶೇಕಡಾ 28 ರಷ್ಟು ಜನರು ಮುಂದಿನ ದಿನಗಳಲ್ಲಿ ಸುರಕ್ಷತಾ ಕಾರಣಗಳಿಗಾಗಿ ವಾಹನ ಖರೀದಿಗೆ ತೊಡಗಬಹುದು. 

ಲಾಕ್‌ಡೌನ್ ನಂತರ ಆರು ತಿಂಗಳ ಒಳಗೆ ಮೆಟ್ರೋ ಪ್ರಯಾಣಿಕರ ಲಾಕ್‌ಡೌನ್ ಪೂರ್ವ ಅವಧಿಯಲ್ಲಿನ ಶೇಕಡಾ 37 ರಿಂದ 16ಕ್ಕೆ ಇಳಿಯಲಿದೆ. "ಆದರೆ ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಪಾಲು ಶೇಕಡಾ 28 ರಿಂದ 38 ಕ್ಕೆ ಹೆಚ್ಚಾಗುತ್ತದೆ.

ಇದಲ್ಲದೆ ವಾಕಿಂಗ್ ಮತ್ತು ಸೈಕ್ಲಿಂಗ್ ಪಾಲು ಶೇಕಡಾ 4 ರಿಂದ 12 ಕ್ಕೆಏರಲಿದೆ. ಶೇಕಡಾ 73 ರಷ್ಟು ಜನರು ಸೇವೆಯೊಂದಿಗೆ  ಉತ್ತಮ ಗುಣಮಟ್ಟದ ಮಾನದಂಡಗಳನ್ನು ಪೂರೈಸಿದರೆ ಸಾರ್ವಜನಿಕ ಸಾರಿಗೆಗೆ ಮರಳಲು ಆದ್ಯತೆ ನಿಡುತ್ತಾರೆ.ಶೇಕಡಾ 22 ರಷ್ಟು ಜನರು ವೈಯಕ್ತಿಕ ಸಾರಿಗೆಯನ್ನು ಬಳಸುವುದನ್ನು ಮುಂದುವರಿಸುವುದಾಗಿ ನಿರ್ಧರಿಸಿದ್ದರೆ. ಉಳಿದವರು ಕ್ಯಾಬ್‌ಗಳಿಗೆ ಮತ್ತು ಶೇರಿಂಗ್ ಸಾರಿಗೆ ವ್ಯವಸ್ಥೆಗಳಿಗೆ ಆದ್ಯತೆ ಕೊಟ್ಟಿದ್ದಾರೆ ಎಂದು ವರದಿಯಲ್ಲಿ ಹೇಳಿದೆ. 

ಸಂಪರ್ಕದ ಕಾರಣಗಳಿಗಾಗಿ ಶೇಕಡಾ 38 ರಷ್ಟು ಜನರು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡಿದ್ದಾರೆ, ವೆಚ್ಚದ ಪರಿಣಾಮಕಾರಿತ್ವ ಮತ್ತು ಸುಸ್ಥಿರತೆಗಾಗಿ ತಲಾ 23 ಶೇಕಡಾ ಮಂದಿ ಃಆಗೂ ಹೆಚ್ಚುವರಿ ಸಂಚಾರವನ್ನು ತಪ್ಪಿಸಲು ಶೇಕಡಾ 16 ರಷ್ಟು ಜನರು ಸಾರಿಗೆ ಮೊರೆ ಹೋಗಲಿದ್ದಾರೆ.

ದೆಹಲಿಯಲ್ಲಿ 5,400 ಬಸ್‌ಗಳಿದ್ದು, ಒಟ್ಟು ಸೇವಾ ಸಾಮರ್ಥ್ಯ ದಿನಕ್ಕೆ 741.6 ಲಕ್ಷ ಕಿ.ಮೀ. ಆಗಿದೆ.

"ಉತ್ತಮ ಗುಣಮಟ್ಟದ ಮತ್ತು ಅನುಕೂಲಕರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳು ಮತ್ತು ಉತ್ತಮವಾಗಿ ವಿನ್ಯಾಸಗೊಳಿಸಲಾದ ವಾಕಿಂಗ್ ಮೂಲಸೌಕರ್ಯಗಳು ಲಭ್ಯವಿದ್ದರೆ ಸಾರ್ವಜನಿಕ ಸಾರಿಗೆ, ವಾಕಿಂಗ್ ಮತ್ತು ಸೈಕ್ಲಿಂಗ್ ಕಡೆಗೆ ಬೃಹತ್ ಬದಲಾವಣೆ ಸಾಧ್ಯ" ಇದು ಆಡಳಿತದ ನೀತಿ ನಿರೂಪಕರಿಗೆ ಸ್ಪಷ್ಟ ಸೂಚನೆಯಾಗಿದೆ" ಎಂದು ಸಿಎಸ್ಇ ತಿಳಿಸಿದೆ.ದೆಹಲಿ-ಎನ್‌ಸಿಆರ್‌ನಲ್ಲಿ, ಸುಮಾರು 40 ಪ್ರತಿಶತದಷ್ಟು ಜನರಿಗೆ 500 ಮೀಟರ್ ಒಳಗೆ ಬಸ್ ನಿಲ್ದಾಣ ಲಭ್ಯವಿಲ್ಲ ಎಂದು ಸಮೀಕ್ಷೆಯು ತೋರಿಸಿದೆ; ಮತ್ತು ಶೇಕಡಾ 69 ರಷ್ಟು ಜನರು 500 ಮೀಟರ್ ಒಳಗೆ ಮೆಟ್ರೋ ನಿಲ್ದಾಣಗಳನ್ನು ಹೊಂದಿಲ್ಲ. 

"ಇದು ನಗರದಿಂದ ನಗರಕ್ಕೆ ಬದಲಾಗುತ್ತದೆ. ಆದರೆ ಸ್ಪಷ್ಟವಾಗಿ, ಇದು ಸಾರ್ವಜನಿಕ ಸಾರಿಗೆಯನ್ನು ಬಳಸುವವರ ಸಂಖ್ಯೆಯನ್ನು ಕಡಿಮೆ ಎನ್ನುವುದನ್ನು ತೋರಿಸಲಿದೆ. ತ್ತು ಜನರು ವೈಯಕ್ತಿಕ ಸಾರಿಗೆಯ ಬಳಕೆ ಹೆಚ್ಚು ಮಾಡಲಿದ್ದಾರೆ."ಪರಿಣಿತರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com