ಪೂರ್ವ ಲಡಾಖ್ ಮೇಲೆ ಭಾರತದ ಬಿಗಿ ಹಿಡಿತ; ರಕ್ತವನ್ನೇ ಹೆಪ್ಪುಗಟ್ಟಿಸುವ ಚಳಿಯಲ್ಲೂ ರೊಟೇಷನ್ ಪದ್ಧತಿಯಲ್ಲಿ ಸೈನಿಕರ ಪಹರೆ

ಪೂರ್ವ ಲಡಾಖ್‌ನಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಸೇನಾ ಸೈನಿಕರು ಕಾರ್ಯಾಚರಣೆಯ ನಿಯೋಜನೆಯನ್ನು ಅತ್ಯುತ್ತಮವಾಗಿಸಲು ರಕ್ತವನ್ನೇ ಹೆಪ್ಪುಗಟ್ಟಿಸುವ ಚಳಿಯಲ್ಲೂ ರೊಟೇಷನ್ ಪದ್ಧತಿಯಲ್ಲಿ ಗಡಿ ಕಾಯುತ್ತಿದ್ದಾರೆ.
ಲಡಾಕ್ ಗಡಿಯಲ್ಲಿ ಸೈನಿಕರು ಕಾವಲು ಕಾಯುತ್ತಿರುವುದು
ಲಡಾಕ್ ಗಡಿಯಲ್ಲಿ ಸೈನಿಕರು ಕಾವಲು ಕಾಯುತ್ತಿರುವುದು
Updated on

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಸೇನಾ ಸೈನಿಕರು ಕಾರ್ಯಾಚರಣೆಯ ನಿಯೋಜನೆಯನ್ನು ಅತ್ಯುತ್ತಮವಾಗಿಸಲು ರಕ್ತವನ್ನೇ ಹೆಪ್ಪುಗಟ್ಟಿಸುವ ಚಳಿಯಲ್ಲೂ ರೊಟೇಷನ್ ಪದ್ಧತಿಯಲ್ಲಿ ಗಡಿ ಕಾಯುತ್ತಿದ್ದಾರೆ.

ಹೌದು.. ಸೇನೆಯ ಒಂದು ಭಾಗ ಈಗಾಗಲೇ ಲಡಾಖ್ ಗಡಿಯಲ್ಲಿ ಸೇನೆಗೆ ನಿಯೋಜನೆಗೊಂಡಿದ್ದು, ರೊಟೇಷನ್ (ಆವರ್ತನ)ಪದ್ಧತಿಯ ಆಧಾರದ ಮೇರೆಗೆ ಸೈನಿಕರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಲಢಾಖ್ ನಲ್ಲಿ ಓರ್ವ ಸೈನಿಕ 90 ದಿನಗಳ ಕಾಲ ಪಾಳಿಯಲ್ಲಿ ಕೆಲಸ ಮಾಡಲಿದ್ದು, 90 ದಿನಗಳ ಬಳಿಕ ಬೇರೆ  ಪ್ರದೇಶಕ್ಕೆ ನಿಯೊಜನೆಗೊಳ್ಳುತ್ತಾರೆ. ಈ 90 ದಿನಗಳ ಅವಧಿಯಲ್ಲಿ ಸೈನಿಕರ ಪ್ರಯಾಣದ ಅವಧಿ ಕೂಡ ಸೇರಿರುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಪ್ರಸ್ತುತ ಚಳಿಗಾಲವಾದ್ದರಿಂದ ಲಡಾಖ್ ನಲ್ಲಿ ರಕ್ತವನ್ನೇ ಹೆಪ್ಪುಗಟ್ಟಿಸುವ ಮಟ್ಟಿಗೆ ಚಳಿ ಇರುತ್ತದೆ. ಇದರ ಜೊತೆಗೆ ಅತಿ ಜೋರಾಗಿ ಬೀಸುವ ಶೀತಗಾಳಿ ಸೈನಿಕರನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಇದರ ಜೊತೆ ಹಿಮಪಾತದ ಭೀತಿ ಬೇರೆ. ಈಗಾಗಲೇ ಲಡಾಖ್ ನಲ್ಲಿ ಉಷ್ಣಾಂಶ ಮೈನಸ್ 20 ಡಿಗ್ರಿಗೆ ಕುಸಿದಿದ್ದು,  ಮುಂದಿನ ದಿನಗಳಲ್ಲಿ ಇನ್ನಷ್ಟು ಕುಸಿಯಲಿದೆ. ಹೀಗಾಗಿ ಸೈನಿಕರ ರಕ್ಷಣೆ ಮತ್ತು ಗಡಿ ನಿರ್ವಹಣೆ ಹಿನ್ನಲೆಯಲ್ಲಿ ಸೇನೆ ಈ ರೊಟೇಷನ್ ಪದ್ಧತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ನಿರ್ಧರಿಸಿದೆ.

ಇದರ ಜೊತೆಗೆ ಇಲ್ಲಿ ವೈದ್ಯರು ಕೂಡ ಕಾರ್ಯ ನಿರ್ವಹಿಸಲಿದ್ದು, ಗಡಿಯಲ್ಲಿ ಕೊರೆಯುವ ಚಳಿಯಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರ ಆರೋಗ್ಯ ರಕ್ಷಣೆಗಾಗಿ ಇಲ್ಲಿ ವೈದ್ಯರ ತಂಡವೊಂದು ಸದಾ ಸರ್ವ ಸನ್ನದ್ಧ ಸ್ಥಿತಿಯಲ್ಲಿರುತ್ತದೆ. ಸಿಯಾಚಿನ್ ಲಾಜಿಸ್ಟಿಕ್ಸ್ ಯಂತ್ರೋಪಕರಣಗಳು 1984 ರಿಂದ ಅಸ್ತಿತ್ವದಲ್ಲಿವೆ ಮತ್ತು  ಪಡಿತರ ಪೂರೈಕೆ, ಮದ್ದುಗುಂಡು ಮತ್ತು ವಿಶೇಷವಾಗಿ ಅತೀ ಎತ್ತರದ ಕಣಿವೆಗಳಲ್ಲಿ ಧರಿಸುವ ಬಟ್ಟೆಗಳನ್ನು ಖರೀದಿಸುವ ಬಗ್ಗೆ ನಾವು ಸಾಕಷ್ಟು ಮಾಹಿತಿ ಹೊಂದಿದ್ದೇವೆ. ಆದರೆ ಲಡಾಖ್ ನಂತಹ ಕಠಿಣ ಕಣಿವೆ ಪ್ರದೇಶದಲ್ಲಿ ಅಗತ್ಯ ವಸ್ತುಗಳ ಸರಬರಾಜು ಕೂಡ ಸವಾಲಿನ ಕೆಲಸವಾಗಿದ್ದು, ಮಂಜಿನಿಂದ  ಮುಚ್ಚಿಹೋಗಿರುವ ಮಾರ್ಗಗಳ ನಡುವೆಯೇ ಪ್ರಾಣವನ್ನು ಅಂಗೈಯಲ್ಲಿ ಹಿಡಿದು ಕೆಲಸ ನಿರ್ವಹಿಸಬೇಕಾಗುತ್ತದೆ. ಈಗಾಗಲೇ ಅಮೆರಿಕದಿಂದ 15000 ವಿಶೇಷ ಬಟ್ಟೆಗಳನ್ನು ಮತ್ತು ಪರ್ವತಾರೋಹಣ ಸಾಧನಗಳನ್ನು ತರಿಸಿಕೊಳ್ಳಲಾಗಿದೆ. 

ಇದಲ್ಲದೆ, ಪ್ರತಿ ಕಾರ್ಯಾಚರಣಾ ಸ್ಥಳದಲ್ಲಿ ಕನಿಷ್ಠ ಒಂದು ವಾರದ ಅವಶ್ಯಕತೆಗಾಗಿ ಹೆಚ್ಚುವರಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಪ್ರತಿ ಅವಶ್ಯಕತೆಯ ವಸ್ತುಗಳನ್ನು ಗರಿಷ್ಠ ಬಳಕೆ ಮಾಡಲಾಗುತ್ತಿದೆ ಎಂದು ಸೇನಾಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com