ಸಾಮಾಜಿಕ ಜಾಲತಾಣದಿಂದ 2 ವರ್ಷ ದೂರವಿರುವ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ ಅಲ್ಲಾಹಾಬಾದ್ ಹೈಕೋರ್ಟ್
ದೇಶ
ಸಾಮಾಜಿಕ ಜಾಲತಾಣದಿಂದ 2 ವರ್ಷ ದೂರವಿರುವ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದ ಅಲ್ಲಾಹಾಬಾದ್ ಹೈಕೋರ್ಟ್
ಆನ್ ಲೈನ್ ನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಂಧಿಸಲಾಗಿದ್ದ ವ್ಯಕ್ತಿಯೋರ್ವನಿಗೆ ಅಲ್ಲಾಹಾಬಾದ್ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಅಲ್ಲಾಹಾಬಾದ್: ಆನ್ ಲೈನ್ ನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಬಂಧಿಸಲಾಗಿದ್ದ ವ್ಯಕ್ತಿಯೋರ್ವನಿಗೆ ಅಲ್ಲಾಹಾಬಾದ್ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಅಖಿಲಾನಂದ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಸಿದ್ಧಾರ್ಥ್ ಅವರು ಜಾಮೀನು ಮಂಜೂರು ಮಾಡಿದ್ದು, ಎರಡು ವರ್ಷಗಳ ಕಾಲ ಸಾಮಾಜಿಕ ಜಾಲತಾಣದಿಂದ ದೂರವಿರುವಂತೆ ಷರತ್ತು ವಿಧಿಸಿದೆ.
ಮೇ.12 ರಿಂದ ಅಖಿಲಾನಂದ ಜೈಲಿನಲ್ಲಿದ್ದರು. 2 ವರ್ಷಗಳ ಕಾಲ ಅಥವಾ ಈ ಪ್ರಕರಣದ ತೀರ್ಪು ಹೊರಬೀಳುವವರೆಗೂ ಸಾಮಾಜಿಕ ಜಾಲತಾಣ ಬಳಕೆ ಮಾಡಬಾರದು ಎಂದು ಷರತ್ತು ವಿಧಿಸಿದ್ದಾರೆ.

