
ನವದೆಹಲಿ: ತಾನು ಕೊರೋನಾ ನೆಗೆಟಿವ್ ವರದಿ ಪಡೆದಿದ್ದೇನೆ ಹಾಗೂ ಮುಂದಿನ ವಾರದಿಂದ ಮತ್ತೆ ಕಚೇರಿ ಕೆಲಸಗಳಲ್ಲಿ ಸಕ್ರಿಯವಾಗಿತ್ತೇನೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.
ಅಕ್ಟೋಬರ್ 25 ರಂದು ದಾಸ್ ಅವರು ಕೋವಿಡ್ ಧನಾತ್ಮಕ ವರದಿ ಪಡೆದಿದ್ದರು,
"ನಾನು ಕೋವಿಡ್ ಋಣಾತ್ಮಕ ವರದಿ ಪಡೆದಿದ್ದೇನೆ. ಮುಂದಿನ ವಾರ ಮತ್ತೆ ಕಚೇರಿಗೆ ಬರುತ್ತೇನೆ. ನನ್ನ ಶೀಘ್ರ ಚೇತರಿಕೆಗೆ ಹಾರೈಸಿದ ಎಲ್ಲರಿಗೂ ಧನ್ಯವಾದಗಳು" ಎಂದು ಕೇಂದ್ರ ಬ್ಯಾಂಕ್ ಗವರ್ನರ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಭಾರತದ ಕೋವಿಡ್ ಪೀಡಿತರ ಒಟ್ಟೂ ಸಂಖ್ಯೆ 84,62,080 ಕ್ಕೆ ಏರಿದ್ದು ಒಂದು ದಿನದಲ್ಲಿ 50,356 ಸೋಂಕಿತ ಪ್ರಕರಣ ವರದಿಯಾಗಿದೆ. ಇದುವರೆಗೆ ದೇಶದಲ್ಲಿ ಒಟ್ಟೂ , ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 78 ಲಕ್ಷ ದಾಟಿದೆ,ರಾಷ್ಟ್ರೀಯ ಚೇತರಿಕೆ ಪ್ರಮಾಣ ಶೇಕಡಾ 92.41ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಇನ್ನು ಇತ್ತೀಚಿನ ವರದಿಯನ್ವಯ ಹೊಸದಾಗಿ 577 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದು ದೇಶದ ಒಟ್ಟಾರೆ ಸಾವಿನ ಸಂಖ್ಯೆ 1,25,562 ಕ್ಕೆ ಏರಿದೆ.
Advertisement