ಒಟಿಟಿ, ಆನ್ ಲೈನ್ ನ್ಯೂಸ್ ಪೋರ್ಟಲ್ ಗಳು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ!
ನವದೆಹಲಿ: ನೆಟ್ಫ್ಲಿಕ್ಸ್ ನಂತಹ ಒಟಿಟಿ ವೇದಿಕೆಗಳು ಹಾಗೂ ಆನ್ ಲೈನ್ ನ್ಯೂಸ್ ಪೋರ್ಟಲ್ ಗಳು ಇನ್ನು ಮುಂದಿನ ದಿನಗಳಲ್ಲಿ ಮಾಹಿತಿ ಮತ್ತು ಪ್ರಸಾರ ಇಲಾಖೆ ಕಾರ್ಯವ್ಯಾಪ್ತಿಗೆ ಬರುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.
ಈ ಆದೇಶಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಹಿ ಹಾಕಿದ್ದಾರೆ. ಡಿಜಿಟಲ್ ಕಂಟೆಂಟ್ ನ ನಿಯಂತ್ರಕವಾಗಿ ಸದ್ಯಕ್ಕೆ ಯಾವುದೇ ಸಂಸ್ಥೆಯೂ ಕಾರ್ಯನಿರ್ವಹಿಸುತ್ತಿಲ್ಲ.
ಮುದ್ರಣ ಮಾಧ್ಯಮಗಳನ್ನು ಭಾರತೀಯ ಮಾಧ್ಯಮ ಪರಿಷತ್ (ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ) ನ್ಯೂಸ್ ಚಾನಲ್ ಗಳನ್ನು ನ್ಯೂಸ್ ಬ್ರಾಡ್ಕಾಸ್ಟರ್ಸ್ ಅಸೋಸಿಯೇಷನ್ ನಿಯಂತ್ರಿಸುತ್ತಿವೆ, ಅಂತೆಯೇ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ನ್ಯೂಸ್ ಪೋರ್ಟಲ್ ಗಳ ಡಿಜಿಟಲ್ ಕಂಟೆಂಟ್ ಮೇಲೆ ನಿಗಾ ವಹಿಸಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಒಟಿಟಿ ವೇದಿಕೆಗಳು, ಡಿಜಿಟಲ್ ಕಂಟೆಂಟ್ ಬಗ್ಗೆ ನಿಗಾ ವಹಿಸಿ, ನಿಯಂತ್ರಣ ಸಂಸ್ಥೆಗಾಗಿ ಮನವಿ ಮಾಡಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಕಳೆದ ತಿಂಗಳು ಕೇಂದ್ರದಿಂದ ಪ್ರತಿಕ್ರಿಯೆ ಕೇಳಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ