ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್! ಟಿಕೆಟ್ ದರದಲ್ಲಿ ಸಿಗಲಿದೆ ಶೇ. 20ರಷ್ಟು ಡಿಸ್ಕೌಂಟು

ರಾಜಧಾನಿ, ಶತಾಬ್ದಿ, ಡುರೊಂಟೊ ನಂತಹ ಪ್ರಮುಖ ರೈಲುಗಳ ಟಿಕೆಟ್ ಮೂಲದರದಲ್ಲಿ ಶೇ. 20 ರಷ್ಟು ರಿಯಾಯಿತಿಯನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ
ರೈಲು
ರೈಲು
Updated on

ಚೆನ್ನೈ: ರಾಜಧಾನಿ, ಶತಾಬ್ದಿ, ಡುರೊಂಟೊ ನಂತಹ ಪ್ರಮುಖ ರೈಲುಗಳ ಟಿಕೆಟ್ ಮೂಲದರದಲ್ಲಿ ಶೇ. 20 ರಷ್ಟು ರಿಯಾಯಿತಿಯನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ. ಲಾಕ್ ಡೌನ್ ಸಂದರ್ಭದಲ್ಲಿ ಪ್ರಿಮಿಯರ್ ರೈಲು ಸೇವೆಯನ್ನು ಪ್ರೋತ್ಸಾಹಿಸುವ  ಉದ್ದೇಶದಿಂದ ರಿಯಾಯಿತಿ ಯೋಜನೆಯನ್ನು ರೈಲ್ವೆ ಪರಿಚಯಿಸಿತ್ತು.

ಟಿಕೆಟ್ ಬುಕ್ಕಿಂಗ್ ವೇಳೆಯಲ್ಲಿ ಶೇ.60 ರಷ್ಟು ಆಸನಗಳು ಭರ್ತಿಯಾದಲ್ಲಿ ಮೂಲಬೆಲೆಯಲ್ಲಿ ಶೇ, 20 ರಷ್ಟು ರಿಯಾಯಿತಿಯನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾಗಿದೆ. ಅದೇ ರೀತಿಯಲ್ಲಿ ಶೇ. 70 ರಿಂದ 80 ರಷ್ಟು ಆಸನಗಳು ಭರ್ತಿಯಾದಲ್ಲಿ  ಶೇ. 10 ರಷ್ಟು ರಿಯಾಯಿತಿ ಪ್ರಯಾಣಿಕರಿಗೆ ಸಿಗಲಿದೆ. ಶೇ. 80 ರಷ್ಟು ಆಸನಗಳು ಭರ್ತಿಯಾದರೆ ಯಾವುದೇ ಆಫರ್ ಇರುವುದಿಲ್ಲ.

ಆದಾಗ್ಯೂ, ಮೂರನೇ  ಹಂತದ ಎಸಿ ಮತ್ತು ಎಸಿ ಚೇರ್ ಬೋಗಿಗಳ ಟಿಕೆಟ್ ಬುಕ್ಕಿಂಗ್ ಗಾಗಿ ಮಾತ್ರ  ದರದಲ್ಲಿ ರಿಯಾಯಿತಿ ಸಿಗಲಿದೆ. ಕಾಯ್ದಿರಿಸುವಿಕೆ ಶುಲ್ಕ, ಸೂಪರ್ ಪಾಸ್ಟ್ ಮತ್ತು ಜಿಎಸ್ ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ರೈಲ್ವೆ ತಿಳಿಸಿದೆ.

ರೈಲುಗಳ ನಿಗದಿತ ನಿರ್ಗಮನಕ್ಕಿಂತ ನಾಲ್ಕು ದಿನಗಳ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸುವ ಎಲ್ಲ ಪ್ರಯಾಣಿಕರಿಗೆ ರಿಯಾಯಿತಿ ನೀಡಲಾಗುತ್ತಿದೆ. ಆದಾಗ್ಯೂ, ಪ್ರಯಾಣದ ದಿನದಂದು ಟಿಕೆಟ್‌ಗಳನ್ನು ಕಾಯ್ದಿರಿಸಿದರೆ ಶುಲ್ಕದಲ್ಲಿ ಯಾವುದೇ ಕಡಿತವನ್ನು ನೀಡಲಾಗುವುದಿಲ್ಲ, ಉದಾಹರಣೆಗೆ, ಪ್ರಯಾಣಿಕರು ನವೆಂಬರ್ 15 ರಂದು ಪ್ರಯಾಣಿಸಲು ನಿರ್ಧರಿಸಿ ನವೆಂಬರ್ 11 ಮತ್ತು 14 ರ ನಡುವೆ ಟಿಕೆಟ್ ಕಾಯ್ದಿರಿಸಿದರೆ ಯೋಜನೆಯಡಿ ರಿಯಾಯಿತಿ ಅನ್ವಯವಾಗುತ್ತದೆ ಎಂದು ರೈಲ್ವೆ ಹೇಳಿಕೆಯಲ್ಲಿ ತಿಳಿಸಿದೆ.

ದಕ್ಷಿಣ ರೈಲುಗಳಲ್ಲಿ ನವೆಂಬರ್ 15 ಮತ್ತು ಡಿಸೆಂಬರ್ 31ರ ನಡುವೆ ಅಥವಾ ರೈಲು ಸೇವೆಗಳ ನಿಗದಿತ ವೇಳಾಪಟ್ಟಿ ಪರಿಚಯಿಸುವವರೆಗೂ ಪ್ರಯಾಣಿಕರಿಗೆ ರಿಯಾಯಿತಿ ಸಿಗಲಿದೆ. ಐಆರ್ ಸಿಟಿಸಿ ಪೋರ್ಟಲ್ ಮತ್ತು ಟಿಕೆಟ್ ಕೌಂಟರ್ ಗಳಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವ ಪ್ರಯಾಣಿಕರು ಈ ಯೋಜನೆಯಡಿ ರಿಯಾಯಿತಿ ಪಡೆಯಲು ಯಾವುದೇ ಆಯ್ಕೆಯನ್ನು ಆರಿಸಬೇಕಾಗಿಲ್ಲ. "ರೈಲ್ವೆ ನಿಗದಿಪಡಿಸಿದ ಮಾನದಂಡಗಳನ್ನು ಪೂರೈಸುವ ಎಲ್ಲಾ ಪ್ರಯಾಣಿಕರಿಗೆ ಪೂರ್ವನಿಯೋಜಿತವಾಗಿ ರಿಯಾಯಿತಿ ನೀಡಲಾಗುವುದು ಎಂದು ಹಿರಿಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com