ಮಗ ಜೈಲುಪಾಲು: ಅನಾರೋಗ್ಯ ನೆಪ ಹೇಳಿ ಕೇರಳ ಸಿಪಿಎಂ ಕಾರ್ಯದರ್ಶಿ ಹುದ್ದೆ ತ್ಯಜಿಸಿದ ಕೊಡಿಯೇರಿ ಬಾಲಕೃಷ್ಣನ್

ಕೇರಳದಲ್ಲಿ ಎರಡು ಚುನಾವಣೆಗಳ ಮುನ್ನ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಆಡಳಿತಾರೂಢ ಸಿಪಿಎಂ ರಾಜ್ಯ ಕಾರ್ಯದರ್ಶಿ, ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರು ಆರೋಗ್ಯ ಸಮಸ್ಯೆ ಕಾರಣ ನೀಡಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ
ಕೊಡಿಯೇರಿ ಬಾಲಕೃಷ್ಣನ್
ಕೊಡಿಯೇರಿ ಬಾಲಕೃಷ್ಣನ್
Updated on

ತಿರುವನಂತಪುರಂ: ಕೇರಳದಲ್ಲಿ ಎರಡು ಚುನಾವಣೆಗಳ ಮುನ್ನ ನಡೆದ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ, ಆಡಳಿತಾರೂಢ ಸಿಪಿಎಂ ರಾಜ್ಯ ಕಾರ್ಯದರ್ಶಿ, ಕೇರಳದ ಮಾಜಿ ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಅವರು ಆರೋಗ್ಯ ಸಮಸ್ಯೆ ಕಾರಣ ನೀಡಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ.ಎಲ್‌ಡಿಎಫ್ ಕನ್ವೀನರ್ ಎ ವಿಜಯರಾಘವನ್ ಅವರಿಗೆ ತಾತ್ಕಾಲಿಕವಾಗಿ ಪಕ್ಷದ ಕಾರ್ಯದರ್ಶಿ ಹುದ್ದೆಯ ಉಸ್ತುವಾರಿ ನೀಡಲಾಗಿದೆ.

ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮಗ ಬಿನೀಶ್ ಕೊಡಿಯೇರಿ ಜೈಲುಪಾಲಾದ ದಿನದ ನಂತರ ಕೊಡಿಯೇರಿ ರಾಜೀನಾಮೆ ನೀಡಿದ್ದಾರೆ.ಹೆಚ್ಚಿನ ಚಿಕಿತ್ಸೆಗಾಗಿ ರಜೆ ನಿಡುವಂತೆ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಮಾಡಿದ್ದ ಮನವಿಯನ್ನು ಪಕ್ಷ ಸ್ವೀಕರಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಆದಾಗ್ಯೂ, ರಜೆಯ ಅವಧಿಯನ್ನು ಉಲ್ಲೇಖಿಸಲಾಗಿಲ್ಲ

ಗಮನಾರ್ಹ ಸಂಗತಿ ಎಂದರೆ ಕೊಡಿಯೇರಿ ಅವರಿಗೆ ಆಪ್ತರಾಗಿರುವ ನಾಯಕನಿಗೆ ರಾಜ್ಯ ಕಾರ್ಯದರ್ಶಿ ಹುದ್ದೆಯನ್ನು ನೀಡಲಾಗಿದೆ. ಹಿರಿಯ ನಾಯಕ ಮತ್ತು ಕೇಂದ್ರ ಸಮಿತಿ ಸದಸ್ಯ ಎಂ.ವಿ.ಗೋವಿಂದನ್ ಅವರಿಗೆ ಈ ಹುದ್ದೆ ನೀಡಲಾಗುವುದು ಎಂಬ ಊಹಾಪೋಹಗಳು ಕೇಳಿಬಂದಿದ್ದರೂ ಪಕ್ಷದ ಕಾರ್ಯದರ್ಶಿ ಎ ವಿಜಯರಾಘವನ್ ಅವರನ್ನು ಹುದ್ದೆಗೆ ಆಯ್ಕೆ ಮಾಡಲಾಗಿದೆ.

ಚಿನ್ನದ ಕಳ್ಳಸಾಗಣೆ ಪ್ರಕರಣ ಆರೋಪದ ಮೇಲೆ ರಾಜಕೀಯವಾಗಿ ಹಿನ್ನೆಡೆ ಅನುಭವಿಸಿದ್ದ ಸಿಪಿಎಂ ಬಿಕ್ಕಟ್ಟಿನಿಂದ ಹೊರಬರಲು ಮಾರ್ಗಗಳನ್ನು ಅನ್ವೇಷಿಸುತ್ತಿದೆ.  ಜಾರಿ ನಿರ್ದೇಶನಾಲಯವು ಬಿನೀಶ್ ಕೊಡಿಯೇರಿಯ ಸುತ್ತತನಿಖೆ ಚುರುಕುಗೊಳಿಸಿದಂತೆಲ್ಲಾ ಕೊಡಿಯೇರಿ ಕೆಳಗಿಳಿಯಬಹುದು ಎಂಬ ವರದಿಗಳು ಹರಿದಾಡಿದ್ದವು. . ಒಂದು ವರ್ಷದ ಹಿಂದೆ ತನ್ನ ಮಗನ ವಿರುದ್ಧ ಆರೋಪಗಳು ಬಂದಾಗ, ಕೊಡಿಯೇರಿ ರಾಜೀನಾಮೆ ನೀಡಲು ಮುಂದಾಗಿದ್ದರು.

ಸಿಪಿಎಂ ರಾಜ್ಯ ಮತ್ತು ಕೇಂದ್ರ ನಾಯಕರು ಕೊಡಿಯೇರಿಗೆ ಸಂಪೂರ್ಣ ಬೆಂಬಲವನ್ನು ನೀಡಿವೆ ಮತ್ತು ಅವರು ರಾಜೀನಾಮೆ ಸಲ್ಲಿಸಿ ರಾಜಕೀಯದಿಂದ ದೂರವಾಗುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿವೆ. ಹಾಗಿದ್ದರೂ ಪಕ್ಷದ ಮತ್ತು ಎಡಪಂಥೀಯ ನಾಯಕರ ಒಂದು ಗುಂಪು ನೈತಿಕ ಹೊಣೆಗಾರಿಕೆಯನ್ನುಪ್ರತಿಪಾದಿಸಿ ಹುದ್ದೆಯಿಂದ ಗೌರವಯುತವಾಗಿ ಕೆಳಗಿಳಿಯಬೇಕೆಂದು  ಪ್ರತಿಪಾದಿಸಿತ್ತು. ವಿಶೇಷವಾಗಿ ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎರಡು ಚುನಾವಣೆಗಳಿದ್ದು  ಅದಕ್ಕೂ ಮುನ್ನ ಅನಾರೋಗ್ಯವನ್ನು ಉಲ್ಲೇಖಿಸಿ ಕೊಡಿಯೇರಿ ಹುದ್ದೆಯಿಂದ ರಜೆ ತೆಗೆದುಕೊಳ್ಳಬಹುದೆನ್ನುವ ಸೂಚನೆ ಇತ್ತು.

ಖ್ಯಾತ ರಾಜಕೀಯ ನಿರೂಪಕ ಅಪ್ಪುಕುಟ್ಟನ್ ವಲ್ಲಿಕ್ಕುನ್ ಅವರು, ಕೊಡಿಯೇರಿ ಬಾಲಕೃಷ್ಣನ್ ಹುದ್ದೆಯಿಂಡ ಈಗಲಾದರೂ ಕೆಳಗಿಳಿವ ಮೂಲಕ ಸರಿಯಾದ ಸಂದೇಶ ರವಾನಿಸಿದ್ದಾರೆ.. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕುಎಂಬ ಬೇಡಿಕೆಯನ್ನು ಪ್ರತಿಪಕ್ಷ ಯುಡಿಎಫ್ ಈಗಾಗಲೇ ಎತ್ತಿದೆ. ಕೊಡಿಯೇರಿ ಬಾಲಕೃಷ್ಣನ್ ಅವರಿಂದ ಪ್ರೇರಣೆ ಪಡೆದು ಮುಖ್ಯಮಂತ್ರಿ ಕೂಡ ರಾಜೀನಾಮೆ ಸಲ್ಲಿಸಬೇಕುಎಂದು ಆರ್‌ಎಸ್‌ಪಿ ಮುಖಂಡ ಎನ್‌ಕೆ ಪ್ರೇಮಚಂದ್ರನ್ ಒತ್ತಾಯಿಸಿದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com