ನವೆಂಬರ್ 16ರ ನಂತರವೂ ಕರ್ನಾಟಕ-ತಮಿಳುನಾಡು ಮಧ್ಯೆ ಅಂತರಾಜ್ಯ ಬಸ್ ಸಂಚಾರ ಸೇವೆ ವಿಸ್ತರಣೆ

ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನವಿ ಮೇರೆಗೆ ಮತ್ತು ಸಾರ್ವಜನಿಕರಿಂದ ಬಂದ ಬೇಡಿಕೆ ಹಿನ್ನೆಲೆಯಲ್ಲಿ, ನವೆಂಬರ್ 16ರ ಬಳಿಕವೂ ಬಸ್ ಸಂಚಾರ ಸೇವೆ ಮುಂದುವರಿಸಲು ತಮಿಳು ನಾಡು ಸರ್ಕಾರ ನಿರ್ಧರಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚೆನ್ನೈ/ಮದುರೈ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಮನವಿ ಮೇರೆಗೆ ಮತ್ತು ಸಾರ್ವಜನಿಕರಿಂದ ಬಂದ ಬೇಡಿಕೆ ಹಿನ್ನೆಲೆಯಲ್ಲಿ, ನವೆಂಬರ್ 16ರ ಬಳಿಕವೂ ಬಸ್ ಸಂಚಾರ ಸೇವೆ ಮುಂದುವರಿಸಲು ತಮಿಳು ನಾಡು ಸರ್ಕಾರ ನಿರ್ಧರಿಸಿದೆ.

ಇದರಿಂದಾಗಿ ತಮಿಳು ನಾಡು ಮತ್ತು ಕರ್ನಾಟಕ ಮಧ್ಯೆ ನವೆಂಬರ್ 16ರ ಬಳಿಕವೂ ಖಾಸಗಿ ಮತ್ತು ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಸಂಚರಿಸಲಿವೆ, ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ತಮಿಳು ನಾಡು ಸರ್ಕಾರ, ದೀಪಾವಳಿ ಪ್ರಯುಕ್ತ ನವೆಂಬರ್ 16ರವರೆಗೆ ಇ-ದಾಖಲಾತಿ ಇಲ್ಲದೆ ಅಂತರಾಜ್ಯ ಬಸ್ ಸಂಚಾರ ಸೇವೆಗೆ ಅವಕಾಶ ಮಾಡಿಕೊಡಲಾಗಿತ್ತು, ಅದನ್ನು ಇದೀಗ ನವೆಂಬರ್ 16ರ ನಂತರವೂ ಮುಂದುವರಿಸಲಾಗುವುದು ಎಂದು ಹೇಳಿದೆ,

ವಿಶೇಷ ಬಸ್ಸುಗಳು: ರಾಜ್ಯ ಎಕ್ಸ್ ಪ್ರೆಸ್ ಸಾರಿಗೆ ನಿಗಮ ಮತ್ತು ತಮಿಳು ನಾಡು ರಾಜ್ಯ ರಸ್ತೆ ಸಾರಿಗೆ ನಿಗಮ 100ಕ್ಕೂ ಹೆಚ್ಚು ವಿಶೇಷ ಬಸ್ಸುಗಳನ್ನು ಮದುರೈಯಿಂದ ತಮಿಳು ನಾಡಿಗೆ ದೀಪಾವಳಿ ಪ್ರಯುಕ್ತ ಸಂಚಾರ ನಡೆಸಲಿವೆ. ಮದುರೈಯಿಂದ ಸುಮಾರು 125 ವಿಶೇಷ ಬಸ್ಸುಗಳು ಚೆನ್ನೈ, ಕೊಯಮತ್ತೂರು, ತಿರ್ ಪುರ್ ಮತ್ತು ನಾಗರ್ಕೊಯಿಲ್ ಗಳಿಗೆ ಸಂಚರಿಸುತ್ತಿವೆ. ವಿಶೇಷ ಬಸ್ಸುಗಳ ಸಂಚಾರ ಕಳೆದ ಬುಧವಾರದಿಂದ ಆರಂಭವಾಗಿದ್ದು ನವೆಂಬರ್ 16ರವರೆಗೆ ಮುಂದುವರಿಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com