ವಿಶ್ವದ ಮಹಾನ್ ವಿಜ್ಞಾನಿಗಳ ಪಟ್ಟಿಯಲ್ಲಿ ದೇಶದ 2 ಐಐಟಿಯ 36 ವಿಜ್ಞಾನಿಗಳಿಗೆ ಸ್ಥಾನ

ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ತಯಾರಿಸಿರುವ ವಿಶ್ವದ ಒಟ್ಟಾರೆ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ದೇಶದ 2 ಐಐಟಿಗೆ ಸೇರಿದ 36 ವಿಜ್ಞಾನಿಗಳು ಸ್ಥಾನಪಡೆದಿದ್ದಾರೆ.
ಐಐಟಿ ಗುವಾಹಟಿ
ಐಐಟಿ ಗುವಾಹಟಿ

ವಾಷಿಂಗ್ಟನ್: ಅಮೆರಿಕದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ತಯಾರಿಸಿರುವ ವಿಶ್ವದ ಒಟ್ಟಾರೆ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ದೇಶದ 2 ಐಐಟಿಗೆ ಸೇರಿದ 36 ವಿಜ್ಞಾನಿಗಳು ಸ್ಥಾನಪಡೆದಿದ್ದಾರೆ.

ಹೌದು.. ವಿಶ್ವದ ಒಟ್ಟಾರೆ ಉನ್ನತ ವಿಜ್ಞಾನಿಗಳ ಪಟ್ಟಿಯಲ್ಲಿ ಶೇ.2ರಷ್ಟು ಅಂದರೆ 36 ವಿಜ್ಞಾನಿಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ಈ ಎಲ್ಲ ವಿಜ್ಞಾನಿಗಳು ದೇಶದ 2 ಪ್ರತಿಷ್ಠಿತ ಐಐಟಿಗೆ ಸೇರಿದವರಾಗಿದ್ದಾರೆ. ಇದರಲ್ಲಿ ಗುವಾಹಟಿ ಐಐಟಿಯ 22 ಸಂಶೋಧಕರು, ಬನಾರಸ್ ಹಿಂದು ವಿವಿಯ 14 ಪ್ರೊಫೆಸರ್‌ಗಳು  ಸ್ಥಾನ ಪಡೆದಿದ್ದಾರೆ. 

ಸ್ಟ್ಯಾನ್‌ಫೋರ್ಡ್ ವಿವಿಯ ಪ್ರೊ ಜಾನ್ ಪಿಎ ಲೋನ್ನಿಡಿಸ್ ಮತ್ತವರ ತಂಡ ಈ ವರದಿ ಸಿದ್ಧಪಡಿಸಿದ್ದು, 2019ರವರೆಗಿನ ಅಂಕಿ ಅಂಶದ ಆಧಾರದಲ್ಲಿ, ತಮ್ಮ ವೃತ್ತಿಜೀವನದ ಅವಧಿಯಲ್ಲಿ ನಡೆಸಿದ ಸಂಶೋಧನೆಗಳನ್ನು ಪರಿಗಣಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಈ ಪಟ್ಟಿದೆ 1,59,683 ಸಂಶೋಧಕರನ್ನು ಆಯ್ಕೆ  ಮಾಡಲಾಗಿದ್ದು ಇದರಲ್ಲಿ 1,500 ಭಾರತೀಯ ವಿಜ್ಞಾನಿಗಳಿದ್ದಾರೆ. 2019ರಲ್ಲಿ ಜಾಗತಿಕ ವಿಚಾರಗೋಷ್ಟಿಗಳಲ್ಲಿ ಮಂಡಿಸಿದ ಪ್ರಬಂಧಗಳು ಹಾಗೂ ಸಂಶೋಧನಾ ವರದಿಗಳ ಆಧಾರದಲ್ಲಿ ಉನ್ನತ ವಿಜ್ಞಾನಿಗಳ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ ಎಂದು ವಿವಿ ತಿಳಿಸಿದೆ.

ಅಂತಾರಾಷ್ಟ್ರೀಯ ಮಟ್ಟದ ಗೋಷ್ಟಿಗಳಲ್ಲಿ ಮಂಡಿಸಿದ ಸಂಶೋಧನಾ ಪ್ರಬಂಧಗಳನ್ನು ಆಧರಿಸಿ ಬನಾರಸ್ ಹಿಂದು ವಿವಿಯ ಅಧೀನದಲ್ಲಿರುವ ಐಐಟಿಯ 14 ಪ್ರೊಫೆಸರ್‌ಗಳನ್ನು ಈ ಪ್ರತಿಷ್ಟಿತ ಪಟ್ಟಿಗೆ ಪರಿಗಣಿಸಲಾಗಿದೆ ಎಂದು ಬಿಎಚ್‌ಯು ಐಐಟಿ ನಿರ್ದೇಶಕ ಪ್ರಮೋದ್ ಕುಮಾರ್ ಜೈನ್ ಹೇಳಿದ್ದಾರೆ.

ಐಐಟಿ ಗುವಾಹಟಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗ, ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗ, ಫಿಸಿಕ್ಸ್, ಕೆಮಿಕಲ್ ಇಂಜಿನಿಯರಿಂಗ್, ಬಯೊಸೈಯನ್ಸಸ್, ಬಯೋ ಇಂಜಿನಿಯರಿಂಗ್, ಕೆಮಿಸ್ಟ್ರಿ, ಇಲೆಕ್ಟ್ರಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ವಿಭಾಗದ 22 ವಿಜ್ಞಾನಿಗಳಿಗೆ ಗೌರವ ದೊರೆತಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ  ಎಂದು ಪ್ರೊಫೆಸರ್ ಟಿಜಿ ಸೀತಾರಾಮ್ ಅಭಿನಂದಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com