ಕಾಂಗ್ರೆಸ್ ಸಂಸದ ಮನೀಷ್ ತಿವಾರಿಗೂ ಒಕ್ಕರಿಸಿದ ಕೋವಿಡ್-19 ಸೋಂಕು
ಚಂಡೀಘಡ: ಕಾಂಗ್ರೆಸ್ ಸಂಸದ ಮನೀಷ್ ತಿವಾರಿ ಅವರಿಗೂ ಕೊರೋನಾ ಸೋಂಕು ಒಕ್ಕರಿಸಿದ್ದು, ಈ ಬಗ್ಗೆ ಟ್ವೀಟ್ ಮಾಹಿತಿ ನೀಡಿದ್ದಾರೆ.
'ಇಂದು ಮಧ್ಯಾಹ್ನ ಕೊರೋನಾ ಪರೀಕ್ಷೆ ಮಾಡಿಸಿದಾಗ ನನಗೆ ಕೊರೋನಾ ಪಾಸಿಟೀವ್ ಇರುವುದು ದೃಢಪಟ್ಟಿದೆ. ಕಳೆದ ರಾತ್ರಿ 2 ಗಂಟೆಗೆ ಸಣ್ಣ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಬೆಳಗ್ಗೆ 2 ಪರೀಕ್ಷೆ ಮಾಡಿಸಿದ್ದೇನೆ. ಈ ವೇಳೆ ಕೊರೋನಾ ಪಾಸೀಟಿವ್ ದೃಢಪಟ್ಟಿದೆ. ಇತರ ಯಾವುದೇ ರೋಗ ಲಕ್ಷಣಗಳಿಲ್ಲ. ಕಳೆದ ಕೆಲ ದಿನಗಳಿಂದ ನನ್ನ ಜೊತೆ ಸಂಪರ್ಕಕ್ಕೆ ಬಂದ ಎಲ್ಲರೂ ಮುಂಚಾಗ್ರತೆ ವಹಿಸಿ ಎಂದು ಮನೀಶ್ ತಿವಾರಿ ಟ್ವೀಟ್ ಮಾಡಿದ್ದಾರೆ.
ಮನೀಷ್ ತಿವಾರಿ ಪಂಜಾಬ್ ರಾಜ್ಯದ ಆನಂದಪುರ್ ಸಾಹಿಬ್ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ಈ ಆನಂದಪುರ್ ಸಾಹಿಬ್ ಅನ್ನು ಅನಂದಪುರ ಎಂದೂ ಕರೆಯುತ್ತಾರೆ.
ಕೊರೋನಾ ವೈರಸ್ ಕಾರಣ ಕಾಂಗ್ರೆಸ್ ನಾಯಕ ಅಹಮ್ಮದ್ ಪಟೇಲ್ ಅವರನ್ನು ಆಸ್ಪತ್ರೆ ದಾಖಲಿಸಿದ ಮರು ದಿನವೇ ಮತ್ತೋರ್ವ ಕಾಂಗ್ರೆಸ್ ನಾಯಕನಲ್ಲಿ ಕೊರೋನಾ ಕಾಣಿಸಿಕೊಂಡಿರುವುದು ಆತಂಕ ಮೂಡಿಸಿದೆ. ಅಹಮ್ಮದ್ ಪಟೇಲ್ ಗುರುಗ್ರಾಂದಲ್ಲಿರುವ ಮೆಂದಾಂತ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ