ಅಮೆರಿಕಾ ಚುನಾಯಿತ ಅಧ್ಯಕ್ಷ ಜೋ ಬೈಡನ್'ಗೆ ಕರೆ ಮಾಡಿ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ

ಅಮೆರಿಕಾ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರಿಗೆ ಕರೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ತಿಳಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಅಮೆರಿಕಾ ಚುನಾಯಿತ ಅಧ್ಯಕ್ಷ ಜೋ ಬೈಡನ್ ಅವರಿಗೆ ಕರೆ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಭಾಶಯಗಳನ್ನು ತಿಳಿಸಿದ್ದಾರೆ. 

ಈ ಕುರಿತು ಸ್ವತಃ ಪ್ರಧಾನಿ ಮೋದಿಯವರೇ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. 

ಮಾತುಕತೆ ವೇಳೆ ಉಭಯ ದೇಶಗಳ ಸಂಬಂಧ ಗಟ್ಟಿಗೊಳಿಸಲು ನೆರವಿನ ಭರವಸೆ ನೀಡಿರುವ ಮೋದಿಯವರು, ಕೊವಿಡ್-19, ಹವಾಮಾನ ವೈಪರೀತ್ಯ ಕುರಿತು ಮಾತುಕತೆ ನೆಡೆಸಿದ್ದಾರೆ. ಅಲ್ಲದೆ, ಇಂಡೋ-ಫೆಸಿಪಿಕ್ ವಲಯದಲ್ಲಿ ಸಹಕಾರದ ಕುರಿತು ಚರ್ಚೆ ಮಾಡಿರುವ ಮೋದಿ ಕಮಲಾ ಹ್ಯಾರಿಸ್​ಗೂ ಕೂಡ ಶುಭಾಶಯ ತಿಳಿಸಿದ್ದಾರೆ.

ಕಮಲಾ ಹ್ಯಾರಿಸ್ ಗೆಲುವು ಇಂಡೋ-ಅಮೆರಿಕನ್ನರ ಗೆಲುವು ಎಂದಿದ್ದಾರೆ. ಜೊತೆಗೆ ಕೊವಿಡ್​ಗೆ ಲಸಿಕೆ ಕಂಡು ಹಿಡಿಯಲು ಜಂಟಿ ಪ್ರಯತ್ನಕ್ಕೆ ಒತ್ತು ನೀಡಬೇಕೆಂದು ಮನವಿ ಮಾಡಿದ್ದಾರೆ. ಜೋ ಬೈಡನ್​ಗೆ ಕರೆ ಮಾಡಿದ ಬಳಿಕ ಈ ವಿಚಾರವನ್ನು ಪ್ರಧಾನಿ ಮೋದಿ ಟ್ವೀಟ್ ಮಾಡಿ ಟ್ವೀಟ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com