ದೇವಾಲಯದಲ್ಲಿ ಚುಂಬನ ದೃಶ್ಯ ಚಿತ್ರೀಕರಣ: ನೆಟ್ ಫ್ಲಿಕ್ಸ್ ವಿರುದ್ಧ ತನಿಖೆಗೆ ಆದೇಶಿಸಿದ ಮಧ್ಯಪ್ರದೇಶ ಸರ್ಕಾರ

ನೆಟ್ ಫ್ಲಿಕ್ಸ್ ನಲ್ಲಿ ಪ್ರಕಟವಾಗುತ್ತಿರುವ ಎ ಸೂಟಬಲ್ ಬಾಯ್ ಎಂಬ ವೆಬ್ ಸೀರೀಸ್ ನಲ್ಲಿ ಚುಂಬನದ ದೃಶ್ಯಗಳನ್ನು ದೇವಾಲಯದಲ್ಲಿ ಚಿತ್ರೀಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಮಧ್ಯಪ್ರದೇಶ ಸರ್ಕಾರ ಈ ಕುರಿತು ತನಿಖೆಗೆ ಆದೇಶಿಸಿದೆ. 
ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ
ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ
Updated on

ಭೋಪಾಲ್: ನೆಟ್ ಫ್ಲಿಕ್ಸ್ ನಲ್ಲಿ ಪ್ರಕಟವಾಗುತ್ತಿರುವ ಎ ಸೂಟಬಲ್ ಬಾಯ್ ಎಂಬ ವೆಬ್ ಸೀರೀಸ್ ನಲ್ಲಿ ಚುಂಬನದ ದೃಶ್ಯಗಳನ್ನು ದೇವಾಲಯದಲ್ಲಿ ಚಿತ್ರೀಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಮಧ್ಯಪ್ರದೇಶ ಸರ್ಕಾರ ಈ ಕುರಿತು ತನಿಖೆಗೆ ಆದೇಶಿಸಿದೆ. 

ವೆಬ್ ಸೀರೀಸ್ ನಲ್ಲಿರುವ ದೃಶ್ಯಗಳನ್ನು ದೇವಾಲಯದಲ್ಲಿ ಚಿತ್ರೀಕರಿಸಲಾಗಿದೆಯೇ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡಿದೆಯೇ ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ. 

ವೆಬ್ ಸೀರೀಸ್ ನ ವಿರುದ್ಧ ಕಾನೂನು ಕ್ರಮ ಜರುಗಿಸುವ ಮುನ್ಸೂಚನೆಯನ್ನೂ ಸಹ ನರೋತ್ತಮ್ ಮಿಶ್ರಾ ನೀಡಿದ್ದಾರೆ. 

ವೆಬ್ ಸೀರೀಸ್ ನಲ್ಲಿ ಪ್ರಕಟವಾಗಿರುವ ಚುಂಬನ ದೃಶ್ಯವನ್ನು ಮಧ್ಯಪ್ರದೇಶದ ಮಹೇಶ್ವರ್ ಟೌನ್ ನ ದೇವಾಲಯದಲ್ಲಿ ಚಿತ್ರೀಕರಿಸಲಾಗಿದೆ ಎಂದು ಬಿಜೆಪಿ ಯುವಮೋರ್ಚಾದ ಪದಾಧಿಕಾರಿಗಳು ಆರೋಪಿಸಿದ್ದರು. ಎ ಸೂಟಬಲ್ ಬಾಯ್ ಎಂಬ ವೆಬ್ ಸೀರೀಸ್ ನಲ್ಲಿ ದೇವಾಲಯದಲ್ಲಿ ಭಜನೆಗಳ ನಡುವೆಯೇ ಜೋಡಿಯೊಂದು ಚುಂಬಿಸುತ್ತಿದ್ದ ದೃಶ್ಯ ಪ್ರಸಾರವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com