ಅಕ್ರಮ ಹಣ ವರ್ಗಾವಣೆ: ಬಿನೀಶ್ ಕೊಡಿಯೇರಿ ಮನೆ ಮುಟ್ಟುಗೋಲಿಗೆ ಇಡಿ ನೋಟಿಸ್

ಬೆಂಗಳೂರಿನ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಸಿಪಿಎಂ ಕೇರಳ ಮಾಜಿ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್  ಕೊಡಿಯೇರಿ ಮನೆ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.
ಸಂಗ್ರಹ ಚಿತ್ರ ( ಬಿನೇಶ್ ಕೊಡಿಯೇರಿ ನಿವಾಸದ ಚಿತ್ರ)
ಸಂಗ್ರಹ ಚಿತ್ರ ( ಬಿನೇಶ್ ಕೊಡಿಯೇರಿ ನಿವಾಸದ ಚಿತ್ರ)

ತಿರುವನಂತಪುರ: ಬೆಂಗಳೂರಿನ ಡ್ರಗ್ಸ್ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಆರೋಪದಲ್ಲಿ ಸಿಪಿಎಂ ಕೇರಳ ಮಾಜಿ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಮನೆ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ.

ಈ ನಿಟ್ಟಿನಲ್ಲಿ ಬೆಂಗಳೂರಿನ ಜಾರಿ ನಿರ್ದೇಶನಾಲಯ ಉಪ ನಿರ್ದೇಶಕರು ರಾಜ್ಯ ನೋಂದಣಿ ಇಲಾಖೆಗೆ (ಐಜಿಗೆ) ನೋಟಿಸ್ ನೀಡಿದ್ದು, ಬಿನೀಶ್,  ಆತನ ಪತ್ನಿ ರೆನೆಟಾ ಬಿನೀಶ್, ಅನೂಫ್ ಮೊಹಮ್ಮದ್ ಮತ್ತಿತರ ಇತರ ಬೇನಾಮಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದು ಮೂಲಗಳು ಸೋಮವಾರ ತಿಳಿಸಿವೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಇವರ ಆಸ್ತಿಪಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಜಾರಿ ನಿರ್ದೇಶನಾಲಯ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com