ಯೋಗಿ ಆದಿತ್ಯನಾಥ್ ಗೆ ಪ್ರೀತಿಯ ಬಗ್ಗೆ ಏನೂ ಗೊತ್ತಿಲ್ಲ, ಜಿಹಾದ್ ನಲ್ಲೂ ಭಾಗಿಯಾಗಿಲ್ಲ: ಉರ್ದು ಕವಿ

ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಳಿಸಿರುವುದರ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದು, ಉರ್ದು ಕವಿ ಮುನವಾರ್ ರಾಣಾ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 
ಯೋಗಿ ಆದಿತ್ಯನಾಥ್ ಗೆ ಪ್ರೀತಿಯ ಬಗ್ಗೆ ಏನೂ ಗೊತ್ತಿಲ್ಲ, ಜಿಹಾದ್ ನಲ್ಲೂ ಭಾಗಿಯಾಗಿಲ್ಲ: ಉರ್ದು ಕವಿ
ಯೋಗಿ ಆದಿತ್ಯನಾಥ್ ಗೆ ಪ್ರೀತಿಯ ಬಗ್ಗೆ ಏನೂ ಗೊತ್ತಿಲ್ಲ, ಜಿಹಾದ್ ನಲ್ಲೂ ಭಾಗಿಯಾಗಿಲ್ಲ: ಉರ್ದು ಕವಿ

ಲಖನೌ: ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೊಳಿಸಿರುವುದರ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದ್ದು, ಉರ್ದು ಕವಿ ಮುನವಾರ್ ರಾಣಾ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 

"ಲವ್ ಜಿಹಾದ್ ಕಾನೂನನ್ನು ಜಾರಿಗೆ ತಂದಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೆ ಪ್ರೀತಿಯ ಬಗ್ಗೆ ಏನೂ ಗೊತ್ತಿಲ್ಲ, ಜಿಹಾದ್ ನಲ್ಲೂ ಭಾಗಿಯಾಗಿಲ್ಲ ಎಂದು ಉರ್ದು ಕವಿ ಮುನಾವರ್ ರಾಣಾ ಕಾಲೆಳೆದಿದ್ದಾರೆ.

ಉತ್ತರ ಪ್ರದೇಶ ಸರ್ಕಾರಕ್ಕೆ ದಿನವೂ ಹೊಸ ಕಾನೂನು ರೂಪಿಸುವುದೊಂದೇ ಕೆಲಸ ಎಂದೂ ರಾಣಾ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯನ್ನಾಗಿ ಮಾಡಬೇಕು ಆಗ ಅವರು ಹೊಸ ಕಾನೂನುಗಳನ್ನು ಮಾಡಲು ಅನುಕೂಲವಾಗಲಿದೆ ಎಂದಿರುವ ರಾಣ, ಸರ್ಕಾರಗಳು ಕಾನೂನುಗಳನ್ನು ಮಾಡುವುದಕ್ಕೆ ಇರುವುದಲ್ಲ ಕಾನೂನು ಪಾಲನೆಗೆ ಇರುವುದೆಂದು ಅಭಿಪ್ರಾಯಪಟ್ಟಿದ್ದಾರೆ.

ಕೇವಲ ಮದುವೆಗಾಗಿ ಮತಾಂತರವಾಗುದು ಅಥವಾ ಲವ್ ಜಿಹಾದ್ ವಿರುದ್ಧ ಕಾನೂನು ರೂಪಿಸಿರುವುದು ಕಾನೂನು ಅಲ್ಲ, ನಿರ್ದಿಷ್ಟ ಜನಾಂಗದವರಿಗೆ ಕಿರುಕುಳ ನೀಡುವುದು ಅಪರಾಧ, ನಿರ್ದಿಷ್ಟ ಧರ್ಮದವರನ್ನು ಟಾರ್ಗೆಟ್ ಮಾಡಲು ಈ ಕಾನೂನು ಜಾರಿಗೊಳಿಸಲಾಗಿದೆ ಎಂದು ರಾಣಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com