ಹನುಮಾನ್ ಬೆನಿವಾಲ್
ದೇಶ
ನೂತನ ಕೃಷಿ ಕಾನೂನು ಹಿಂತೆಗೆದುಕೊಳ್ಳದಿದ್ದರೆ ಎನ್‌ಡಿಎಗೆ ನೀಡಿರುವ ಬೆಂಬಲ ಮರು ಪರಿಶೀಲನೆ- ಹನುಮಾನ್ ಬೆನಿವಾಲ್
ನೂತನ ಕೃಷಿ ಸುಧಾರಣಾ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ ಕೇಂದ್ರಕ್ಕೆ ತಮ್ಮ ಪಕ್ಷ ನೀಡಿರುವ ಬೆಂಬಲವನ್ನು ಮರು ಪರಿಶೀಲಿಸಲಾಗುವುದು ಎಂದು ಎನ್ ಡಿಎ ಅಂಗಪಕ್ಷ ಆರ್ ಎಲ್ ಪಿಯ ನಾಗೌರ್ ಸಂಸದ ಹನುಮಾನ್ ಬೆನಿವಾಲ್ ಹೇಳಿದ್ದಾರೆ.
ಜೈಪುರ: ನೂತನ ಕೃಷಿ ಸುಧಾರಣಾ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ ಕೇಂದ್ರಕ್ಕೆ ತಮ್ಮ ಪಕ್ಷ ನೀಡಿರುವ ಬೆಂಬಲವನ್ನು ಮರು ಪರಿಶೀಲಿಸಲಾಗುವುದು ಎಂದು ಎನ್ ಡಿಎ ಅಂಗಪಕ್ಷ ಆರ್ ಎಲ್ ಪಿಯ ನಾಗೌರ್ ಸಂಸದ ಹನುಮಾನ್ ಬೆನಿವಾಲ್ ಹೇಳಿದ್ದಾರೆ.
ಕೂಡಲೇ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿರುವ ರಾಷ್ಟ್ರೀಯ ಲೋಕ ತಾಂತ್ರಿಕ ಪಕ್ಷದ ಸಂಘಟಕ ಬೆನಿವಾಲ್, ಸ್ವಾಮಿನಾಥನ್ ಆಯೋಗದ ಎಲ್ಲಾ ಶಿಫಾರಸುಗಳನ್ನು ಅನುಷ್ಠಾನ ಮಾಡಬೇಕು ಎಂದಿದ್ದಾರೆ.
ಆರ್ ಎಲ್ ಪಿ, ಎನ್ ಡಿಎ ಅಂಗಪಕ್ಷವಾಗಿದೆ ಆದರೆ, ಅದರ ಶಕ್ತಿ ಯುವಕರು ಮತ್ತು ರೈತರಲ್ಲಿದೆ, ರೈತರ ಹಿತದೃಷ್ಟಿಯಿಂದ ಈ ವಿಷಯದಲ್ಲಿ ತ್ವರಿತ ಕ್ರಮ ಕೈಗೊಳ್ಳದಿದ್ದರೆ, ಎನ್ ಡಿಎ ಮೈತ್ರಿಯ ಬಗ್ಗೆ ಮರು ಪರಿಶೀಲಿಸಬೇಕಾಗುತ್ತದೆ ಎಂದು ಅವರು ಟ್ವಿಟ್ ಮಾಡಿದ್ದಾರೆ. ರಾಜಸ್ಥಾನದಲ್ಲಿ ಮೂವರು ಶಾಸಕರನ್ನು ಹೊಂದಿರುವ ಆರ್ ಎಲ್ ಪಿಯ ಏಕೈಕ ಸಂಸದರಾಗಿದ್ದಾರೆ ಬೆನಿವಾಲ್

