ಮುಂದುವರಿದ ಚೀನಾ ಕುತಂತ್ರ: ಅರುಣಾಚಲ ಪ್ರದೇಶ ಗಡಿಯಲ್ಲಿ ನಾಗರಿಕರಿಗೆ ಸೇನೆಯ ಸಮವಸ್ತ್ರ ಧರಿಸಿ ಓಡಾಟ!

ಭಾರತ-ಚೀನಾ ಗಡಿಭಾಗದಲ್ಲಿ ಚೀನಾ ತನ್ನ ಸೇನಾ ಚಟುವಟಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದು ಭಾರತಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಅರುಣಾಚಲ ಪ್ರದೇಶದ ಪೂರ್ವ ವಲಯದಲ್ಲಿ ಗಡಿ ವಾಸ್ತವ ರೇಖೆಯುದ್ದಕ್ಕೂ ಜನರ ಚಲನವಲನಗಳನ್ನು ಚೀನಾ ಹೆಚ್ಚಿಸಿದ್ದು ಗಡಿಗೆ ಹತ್ತಿರದ ಪ್ರದೇಶಗಳ ಮೇಲೆ ಚೀನಾ ಹೆಚ್ಚಿನ ಗಮನ ಹರಿಸಿದೆ ಎಂದು ತಿಳಿದುಬಂದಿದೆ.
ಇದು 2013ರ ಮೇ 5ರ ಚಿತ್ರ, ಇದರಲ್ಲಿ ಬ್ಯಾನರ್ ಹಿಡಿದ ಚೀನಾ ಸೈನಿಕರು, ನೀವು ಗಡಿ ಉಲ್ಲಂಘಿಸಿ ಬಂದಿದ್ದೀರಿ, ದಯವಿಟ್ಟು ಹಿಂತಿರುಗಿ ಹೋಗಿ ಎಂದು ಭಾರತೀಯ ಸೈನಿಕರಿಗೆ ಲಡಾಕ್ ಗಡಿಯಲ್ಲಿ ಹೇಳುವ ಸಂದರ್ಭ
ಇದು 2013ರ ಮೇ 5ರ ಚಿತ್ರ, ಇದರಲ್ಲಿ ಬ್ಯಾನರ್ ಹಿಡಿದ ಚೀನಾ ಸೈನಿಕರು, ನೀವು ಗಡಿ ಉಲ್ಲಂಘಿಸಿ ಬಂದಿದ್ದೀರಿ, ದಯವಿಟ್ಟು ಹಿಂತಿರುಗಿ ಹೋಗಿ ಎಂದು ಭಾರತೀಯ ಸೈನಿಕರಿಗೆ ಲಡಾಕ್ ಗಡಿಯಲ್ಲಿ ಹೇಳುವ ಸಂದರ್ಭ
Updated on

ನವದೆಹಲಿ: ಭಾರತ-ಚೀನಾ ಗಡಿಭಾಗದಲ್ಲಿ ಚೀನಾ ತನ್ನ ಸೇನಾ ಚಟುವಟಿಕೆಯನ್ನು ಮತ್ತಷ್ಟು ಹೆಚ್ಚಿಸಿದ್ದು ಭಾರತಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ. ಅರುಣಾಚಲ ಪ್ರದೇಶದ ಪೂರ್ವ ವಲಯದಲ್ಲಿ ಗಡಿ ವಾಸ್ತವ ರೇಖೆಯುದ್ದಕ್ಕೂ ಜನರ ಚಲನವಲನಗಳನ್ನು ಚೀನಾ ಹೆಚ್ಚಿಸಿದ್ದು ಗಡಿಗೆ ಹತ್ತಿರದ ಪ್ರದೇಶಗಳ ಮೇಲೆ ಚೀನಾ ಹೆಚ್ಚಿನ ಗಮನ ಹರಿಸಿದೆ ಎಂದು ತಿಳಿದುಬಂದಿದೆ.

ಇಲ್ಲಿ ಓಡಾಡುತ್ತಿರುವ ಜನರು ಸಾಮಾನ್ಯ ನಾಗರಿಕರಾಗಿದ್ದು ಆದರೆ ಮಿಲಿಟರಿ ಸಮವಸ್ತ್ರದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಲಡಾಕ್ ನಲ್ಲಿ ಮಿಲಿಟರಿ ನಿಯೋಜನೆ ಅದರಲ್ಲೂ ಡೆಮ್ಚೊಕ್ ನಲ್ಲಿ ಸೇನಾಪಡೆ ನಿಯೋಜನೆ ಹೆಚ್ಚಳಕ್ಕೆ ಮುಂದುವರಿದ ಭಾಗವಾಗಿ ಈ ಬೆಳವಣಿಗೆ ನಡೆಯುತ್ತಿದೆ.

ಗಡಿಭಾಗದ ಮಣಿಗಾಂಗ್ ಉಪ-ವಲಯ, ಸಿಯೋಮ್ ಸೆಕ್ಟರ್ ಮತ್ತು ವೆಸ್ಟರ್ನ್ ಆರ್ ಎಎಲ್ ಪಿ (ಅರುಣಾಚಲ ಪ್ರದೇಶದ ಉಳಿದ) ಎದುರು ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ ನಾಗರಿಕರನ್ನು ನೇಮಿಸಿಕೊಳ್ಳುವ ಕಾರ್ಯವನ್ನು ತೀವ್ರಗೊಳಿಸಲಾಗಿದೆ ಎಂದು ಕಣ್ಗಾವಲು ಪಡೆಯ ಮೂಲಕ ಸೇನೆಗೆ ತಿಳಿದುಬಂದಿದೆ.

ಅರುಣಾಚಲ ಪ್ರದೇಶವನ್ನು ಕಮೆಂಗ್ ವಲಯವನ್ನಾಗಿ ವಿಭಾಗಿಸಲಾಗಿದ್ದು ತವಂಗ್, ಬುಮ್ ಲಾ ಮತ್ತು ಟೆಂಗಾ ಹಾಗೂ ಪೂರ್ವದಲ್ಲಿ ಆರ್ ಎಎಲ್ ಪಿ ಎಂದು ವಿಭಜಿಸಲಾಗಿದೆ. ಗಡಿಯಲ್ಲಿ ನಾಗರಿಕರಿಗೆ ಸಮವಸ್ತ್ರಗಳನ್ನು ಧರಿಸಿ ಓಡಾಡುವಂತೆ ಚೀನಾ ಆಡಳಿತ ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ.

ಭಾರತೀಯ ಯೋಧರ ಗಮನವನ್ನು ಬೇರೆಡೆಗೆ ಸೆಳೆಯಲು ಮತ್ತು ಅವರಲ್ಲಿ ಗೊಂದಲವನ್ನುಂಟುಮಾಡಲು ಚೀನಾದ ಲಿಬರೇಷನ್ ಆರ್ಮಿ(ಪಿಎಲ್ಎ) ಅಥವಾ ಗಡಿ ರಕ್ಷಣಾ ರೆಜಿಮೆಂಟ್ ಪಡೆಗಳ ಸಿಬ್ಬಂದಿಯನ್ನು ಹೋಲುವ ಸಮವಸ್ತ್ರವನ್ನು ಧರಿಸುವಂತೆ ಚೀನಾ ನಿರ್ದೇಶನ ನೀಡಿದೆ ಎಂಬುದು ಇದರಿಂದ ತಿಳಿದುಬರುತ್ತದೆ.

ಗಡಿ ನಿರ್ವಹಣೆಗೆ ಚೀನಾದ ಗಡಿ ರಕ್ಷಣಾ ರೆಜಿಮೆಂಟ್‌ಗಳನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಇದಕ್ಕೆ ಹಿಂಭಾಗದಿಂದ ಪಿಎಲ್‌ಎ ಬೆಂಬಲಿಸುತ್ತದೆ. ಪಿಎಲ್‌ಎ ಇಂತಹ ತಂಡಗಳನ್ನು ಲಡಾಕ್‌ಗೂ ಕಳುಹಿಸುತ್ತಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮೇಜರ್ ಜನರಲ್ ಎಸ್ ಬಿ ಅಸ್ತಾನಾ(ನಿವೃತ್ತ) ರಕ್ಷಣಾ ವಿಶ್ಲೇಷಕ, ಈ ವಲಯ ಸೂಕ್ಷ್ಮವಾಗಿದ್ದು ವಾಸ್ತವ ಮಾಹಿತಿಗಳನ್ನು ಕಲೆಹಾಕಲು ಇಂತಹ ಚಲನವಲನಗಳನ್ನು ನಡೆಸಲಾಗುತ್ತದೆ. ಎಲ್ಲೆಲ್ಲಿ ದುರ್ಬಲ ಸಂಪರ್ಕಗಳಿವೆ ಎಂದು ನೋಡಿಕೊಂಡು ಅಲ್ಲಿನ ಜನರು ಹೊಂದಾಣಿಕೆ, ರಾಜಿ ಮಾಡಿಕೊಳ್ಳಲು ಸಿದ್ದರಿದ್ದರೆ ಅಲ್ಲಿಂದ ಜನರನ್ನು ಸೆಳೆದುಕೊಳ್ಳಲು ನೋಡಲಾಗುತ್ತದೆ ಎಂದು ಹೇಳುತ್ತಾರೆ.

ಚೀನಾದ ಇಂತಹ ನಡೆಯ ಬಗ್ಗೆ ಭಾರತ ಎಚ್ಚರಿಕೆಯಿಂದಿರಬೇಕು. ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೇಜರ್ ಅಸ್ತಾನಾ ಹೇಳುತ್ತಾರೆ. ಪೂರ್ವ ಲಡಾಕ್‌ನ ಉದ್ದಕ್ಕೂ ಕಳೆದ ಮೇ ತಿಂಗಳಿನಿಂದ ತೀವ್ರ ಉದ್ವಿಗ್ನ ಪರಿಸ್ಥಿತಿಯಿದ್ದು, ಭಾರತೀಯ ಸೇನೆಯ 40 ಸಾವಿರಕ್ಕೂ ಹೆಚ್ಚು ಸೈನಿಕರು ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಸೈನಿಕರು ಗಡಿಯಲ್ಲಿ ನಿಯೋಜನೆಗೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com