ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು ರೋಸ್‌ ಈರುಳ್ಳಿ, ಕೃಷ್ಣಪುರಂ ಈರುಳ್ಳಿ ರಫ್ತಿಗೆ ಕೇಂದ್ರ ಅಸ್ತು

ರಫ್ತು ನಿಷೇಧವನ್ನು ಸಡಿಲಗೊಳಿಸಿದ ಕೇಂದ್ರ ಸರ್ಕಾರ ಕೆಲವು ಷರತ್ತುಗಳೊಂದಿಗೆ ಬೆಂಗಳೂರು ರೋಸ್‌ ಈರುಳ್ಳಿ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿ ರಫ್ತು ಮಾಡಲು ಶುಕ್ರವಾರ ಅನುಮತಿ ನೀಡಿದೆ.

ನವದೆಹಲಿ: ರಫ್ತು ನಿಷೇಧವನ್ನು ಸಡಿಲಗೊಳಿಸಿದ ಕೇಂದ್ರ ಸರ್ಕಾರ ಕೆಲವು ಷರತ್ತುಗಳೊಂದಿಗೆ ಬೆಂಗಳೂರು ರೋಸ್‌ ಈರುಳ್ಳಿ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿ ರಫ್ತು ಮಾಡಲು ಶುಕ್ರವಾರ ಅನುಮತಿ ನೀಡಿದೆ.

ದೇಸೀಯ ಮಾರುಕಟ್ಟೆಯಲ್ಲಿ ಈರುಳ್ಳೀ ಬೆಲೆ ಏರಿಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ, ಬೆಲೆ ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರ್ಕಾರ ಸೆಪ್ಟೆಂಬರ್ 14ರಂದು ಎಲ್ಲಾ ವಿಧದ ಈರುಳ್ಳಿ ರಫ್ತು ಮಾಡುವುದನ್ನು ನಿಷೇಧಿಸಿತ್ತು.

ಈಗ ಬೆಂಗಳೂರು ರೋಸ್‌ ಮತ್ತು ಕೃಷ್ಣಪುರಂ ತಳಿಯ ಈರುಳ್ಳಿ ರಫ್ತಿಗೆ ಅನುಮತಿ ನೀಡಿರುವ ಕೇಂದ್ರ ಸರ್ಕಾರ, ಮಾರ್ಚ್ 31, 2021ರ ವರೆಗೆ, ಗರಿಷ್ಠ 10 ಸಾವಿರ ಮೆಟ್ರಿಕ್‌ ಟನ್ ವರೆಗೆ ರಫ್ತು ಮಾಡಲು ಅವಕಾಶ ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ನಿರ್ದೇಶನಾಲಯ ಅಧಿಸೂಚನೆ ಹೊರಡಿಸಿದೆ.

ಈ ಎರಡು ತಳಿಗಳಿಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದಿದ್ದರೂ, ಪೂರ್ವ ದೇಶಗಳಲ್ಲಿ ಈ ತಳಿಯ ಈರುಳ್ಳಿಗೆ ಬಲು ಬೇಡಿಕೆ ಇದೆ.

ಎರಡು ತಳಿಗಳ ಈರುಳ್ಳಿ ಚೆನ್ನೈ ಬಂದರು ಮೂಲಕ ರಫ್ತಾಗುತ್ತದೆ. ಅದಕ್ಕೂ ಮುನ್ನ ಕರ್ನಾಟಕದ ತೋಟಗಾರಿಕಾ ಆಯುಕ್ತರಿಂದ ಬೆಂಗಳೂರು ರೋಸ್‌ ತಳಿಗೆ ಹಾಗೂ ಆಂಧ್ರಪ್ರದೇಶದ ಕಡಪದ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಿಂದ ರಫ್ತು ಮಾಡುವುದಕ್ಕೆ ಅನುಮತಿ ಪತ್ರ ಪಡೆಯಬೇಕು.

Related Stories

No stories found.

Advertisement

X
Kannada Prabha
www.kannadaprabha.com